ಕೊಚ್ಚಿ : ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಮಹಿಳೆಯರು ಅದರ ಉನ್ನತ ನಾಯಕತ್ವ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ.
ಮಹಿಳಾ ನಟಿಯರಾದ ಶ್ವೇತಾ ಮೆನನ್ ಮತ್ತು ಕುಕ್ಕು ಪರಮೇಶ್ವರನ್ ಅವರನ್ನ ಕ್ರಮವಾಗಿ ಸಂಸ್ಥೆಯ ಅಧ್ಯಕ್ಷೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಅವರಲ್ಲದೆ, ಅನ್ಸಿಬಾ ಹಸನ್ ಜಂಟಿ ಕಾರ್ಯದರ್ಶಿಯಾಗಿ ಮತ್ತು ಲಕ್ಷ್ಮಿ ಪ್ರಿಯಾ ಅವರನ್ನ ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.
ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಈ ಬೆಳವಣಿಗೆಯನ್ನ ಸ್ವಾಗತಿಸಿದರು, ಮಹಿಳೆಯರು ಅಮ್ಮಾ ನಾಯಕತ್ವದ ಹುದ್ದೆಗಳಿಗೆ ಬರಬೇಕು ಎಂಬುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.
“ಚಲನಚಿತ್ರೋದ್ಯಮದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿರುವುದರಿಂದ ನಾನು ಇದನ್ನು ಹೇಳುತ್ತಿದ್ದೇನೆ. ಅಮ್ಮಾ ನಾಯಕತ್ವದ ಸ್ಥಾನಗಳಿಗೆ ಮಹಿಳೆಯರು ಆಯ್ಕೆಯಾಗುತ್ತಿರುವುದು ಇದೇ ಮೊದಲು” ಎಂದು ಅವರು ಹೇಳಿದರು.
ಮಂಡ್ಯ: ಶಿವಪುರದ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ 2 ಕೋಟಿ ಮಂಜೂರು – ಶಾಸಕ ಕೆ.ಎಂ.ಉದಯ್
ತಿರುನೆಲ್ವೆಲಿ – ಶಿವಮೊಗ್ಗ ಟೌನ್ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ
ಒಳ ಮೀಸಲಾತಿ : ಬಲಗೈ ಸಮುದಾಯಕ್ಕೆ ಅನ್ಯಾಯ – ಮದ್ದೂರಿನಲ್ಲಿ ಬೃಹತ್ ಪ್ರತಿಭಟನೆ