ಬೆಂಗಳೂರು : ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ನೀಡಿದ್ದು, 2025-26 ನೇ ಸಾಲಿಗೆ ಆಶಾ ಕಾರ್ಯಕರ್ತೆಯರಿಗೆ ತಂಡ ಆಧಾರಿತ ಪ್ರೋತ್ಸಾಹಧನವನ್ನು ಪಾವತಿಸಲು ಎರಡನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಪತ್ರದಲ್ಲಿ ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಆದೇಶದಲ್ಲಿ 2025-26ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ 148 ರನ್ವಯ ಆಯುಷ್ಮಾನ್ ಆರೋಗ್ಯ ಮಂದಿರಗಳಾಗಿ ಮೇಲ್ದರ್ಜೆಗೇರದ ಆರೋಗ್ಯ ಉಪಕೇಂದ್ರಗಳು ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರೂ.1000/- ಗಳ (ಒಂದು ಸಾವಿರ ರೂಪಾಯಿಗಳು) ತಂಡ ಆಧಾರಿತ ಪ್ರೋತ್ಸಾಹಧನವನ್ನು ಪಾವತಿಸಲು ಹಾಗೂ ಇದಕ್ಕಾಗಿ ತಗಲುವ ವೆಚ್ಚ ರೂ. 1800.48 ಲಕ್ಷಗಳನ್ನು ಲೆಕ್ಕಶೀರ್ಷಿಕೆ:2211-00-103-0-11-324 ರಡಿ ಒದಗಿಸಲಾದ ರೂ.2500.00 ಲಕ್ಷಗಳ ಅನುದಾನದಲ್ಲಿ ಭರಿಸಲು ಅನುಮೋದನೆ ನೀಡಲಾಗಿರುತ್ತದೆ. ಈ ಆದೇಶದನ್ವಯ ಆಶಾ ಕಾರ್ಯಕರ್ತೆಯರಿಗೆ ತಂಡ ಆಧಾರಿತ ಪ್ರೋತ್ಸಾಹಧನವನ್ನು ಪಾವತಿಸಲು ಲೆಕ್ಕಶೀರ್ಷಿಕೆ: 2211-00-103-0-11-324 ರಡಿ ರೂ.450.12 ಲಕ್ಷಗಳನ್ನು ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವಂತೆ ಕೋಲಾಗಿರುತ್ತದೆ.
ಕಂತಿನ ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ಆದೇಶದಲ್ಲಿ 2025-26 ನೇ ಸಾಲಿಗೆ ಆಶಾ ಕಾರ್ಯಕರ್ತೆಯರಿಗೆ ತಂಡ ಆಧಾರಿತ ಪ್ರೋತ್ಸಾಹಧನವನ್ನು ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ. ಪಾವತಿಸಲು ಮೊದಲನೇ ತ್ರೈಮಾಸಿಕ
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಆಕುಕ 53 ಎಫ್.ಪಿ.ಇ 2025 ಬೆಂಗಳೂರು, ದಿನಾಂಕ:13.08.2025
2025-26ನೇ ಸಾಲಿನಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರಗಳಾಗಿ ಮೇಲ್ದರ್ಜೆಗೇರದ ಆರೋಗ್ಯ ಉಪಕೇಂದ್ರಗಳು ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರೂ.1000/- ಗಳ ತಂಡ ಆಧಾರಿತ ಪ್ರೋತ್ಸಾಹಧನವನ್ನು ಪಾವತಿಸಲು ಲೆಕ್ಕಶೀರ್ಷಿಕೆ: 2211-00-103-0-11-324 ರಡಿ ನಿಗದಿಪಡಿಸಲಾದ ರೂ. 1800.48 ಲಕ್ಷಗಳ ಅನುದಾನದಲ್ಲಿ ಎರಡನೇ ತ್ರೈಮಾಸಿಕ ಅನುದಾನ ರೂ. 450.12 ಲಕ್ಷಗಳನ್ನು (ನಾಲ್ಕು ನೂರ ಐವತ್ತು ಲಕ್ಷದ ಹನ್ನೆರೆಡು ಸಾವಿರ ರೂಪಾಯಿಗಳು ಮಾತ್ರ) ಬಿಡುಗಡೆ ಮಾಡಿದೆ.
ಸರ್ಕಾರವು ಬಿಡುಗಡೆ ಮಾಡಿರುವ ಅನುದಾನವನ್ನು ಯಾವ ಉದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವ ಷರತ್ತುಗಳಿಗೊಳಪಟ್ಟಿದ್ದು, ನ್ಯಾಯಸಮ್ಮತವಾಗಿ ಬಳಸಿಕೊಂಡಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು ಹಾಗೂ ಈ ಅನುದಾನವನ್ನು ನಿಯಮಿತವಾಗಿ ಖಜಾನೆ ಮೂಲಕ ಮಾತ್ರ ವ್ಯವಹರಿಸತಕ್ಕದ್ದು.