ಜಮ್ಮು : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿರುವ ಮಚೈಲ್ ಮಾತಾ ದೇವಾಲಯದ ಬಳಿ ಗುರುವಾರ ಪ್ರಕೃತಿ ವಿಕೋಪ ಸೃಷ್ಟಿಸಿದೆ. ಮೇಘಸ್ಫೋಟದಿಂದ 33 ಜನರು ಸಾವನ್ನಪ್ಪಿದ್ದು, ಇದುವರೆಗೆ 50 ಜನರನ್ನ ರಕ್ಷಿಸಲಾಗಿದೆ.
ಹಿಮಾಲಯದಲ್ಲಿರುವ ಮಾತಾ ಚಂಡಿ ದೇವಾಲಯಕ್ಕೆ ತೀರ್ಥಯಾತ್ರೆ ಮಾಡುತ್ತಿದ್ದಾಗ ಚಿಶೋತಿ ಪ್ರದೇಶದಲ್ಲಿ ಈ ಮೇಘ ಸ್ಪೋಟ ಸಂಭವಿಸಿದೆ. ಇದ್ರಲ್ಲಿ 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಪರಿಹಾರ ಮತ್ತು ರಕ್ಷಣಾ ತಂಡಗಳನ್ನ ಸ್ಥಳಕ್ಕೆ ಕಳುಹಿಸಲಾಗಿದ್ದು, ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಇನ್ನು ಚಿಶೋತಿಯಲ್ಲಿ ನಡೆದ ಘಟನೆಯಲ್ಲಿ ಅಪಾರ ಪ್ರಮಾಣದ ಜೀವಹಾನಿ ಸಂಭವಿಸಿರಬಹುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ, ಆಡಳಿತವು ತಕ್ಷಣವೇ ಕಾರ್ಯಪ್ರವೃತ್ತವಾಗಿದೆ ಮತ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅವರು ಹೇಳಿದರು.
‘ನೋವಿನ ಪರಿಣಾಮ’, ‘ಉಗ್ರ ವಾಕ್ಚಾತುರ್ಯ’, ‘ಸ್ವಂತ ವೈಫಲ್ಯ ಮರೆಮಾಚುವಿಕೆ’ ; ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ
ಮುಸ್ಲೀಂ ಯುವತಿ ಮದುವೆಯಾದವರಿಗೆ 5 ಲಕ್ಷ ಹೇಳಿಕೆ: ಶಾಸಕ ಯತ್ನಾಳ್ ವಿರುದ್ಧ FIR ದಾಖಲು
ಯುದ್ಧಪ್ರೇಮಕ ಹೇಳಿಕೆ ನೀಡಿದ ಪಾಕಿಸ್ತಾನವನ್ನ ತರಾಟೆಗೆ ತೆಗೆದುಕೊಂಡ ಭಾರತ, ‘ನೋವಿನ ಪರಿಣಾಮ’ಗಳ ಎಚ್ಚರಿಕೆ