ವಿಜಯಪುರ: ಮುಸ್ಲಿಂ ಯುವತಿಯರನ್ನು ಮದೆವೆಯಾಗುವವರಿಗೆ 5 ಲಕ್ಷ ನೀಡುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದರು. ಇಂತಹ ಹೇಳಿಕೆ ನೀಡಿದಂತ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಾಸಕ ಯತ್ನಾಳ್ ವಿರುದ್ಧ ವಿಜಯಪುರ, ಕಲಬುರ್ಗಿಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿದೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಂದಹಾಗೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಸ್ಲಿಂ ಹುಡುಗಿ ಪ್ರೀತಿಸಿ ಹಿಂದೂ ಹುಡುಗ ಮದುವೆ ಆದರೇ ಐದು ಲಕ್ಷ ನಗದು ನೀಡುವುದಾಗಿ ಘೋಷಣೆ ಮಾಡಿದ್ದರು. ಈ ಹೇಳಿಕೆ ವಿರೋಧಿಸಿ ವಿಜಯಪುರ ಮಹಾನಗರ ಪಾಲಿಕೆ ಮಾಡಿ ಸದಸ್ಯ ಮೈನುದ್ದೀನ ಬೀಳಗಿ ಪೊಲೀಸರಿಗೆ ದೂರು ನೀಡಿದ್ದರು.
ದೂರಿನಲ್ಲಿ ಶಾಸಕ ಯತ್ನಾಳ್ ಧರ್ಮದ ವಿರುದ್ಧ ಅವಹೇಳನ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಈ ದೂರು ಆಧರಿಸಿ ಶಾಸಕ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಾಡುಗೊಲ್ಲರು ‘ST ವರ್ಗ’ಕ್ಕೆ: ಕೇಂದ್ರ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ ಜೊತೆ ‘HDK’ ಮಹತ್ವದ ಸಭೆ