ಬೆಂಗಳೂರು: ಚಾಮರಾಜನಗರದಲ್ಲಿ ಎರಡು ಹುಲಿಮರಿಗಳು ಸಾವನ್ನಪ್ಪಿದ ಘಟನೆಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಈ ಸಂಬಂಧ ಐದು ದಿನಗಳಲ್ಲಿ ವಾಸ್ತವಾಂಶದ ವರದಿಯನ್ನು ನೀಡಲು ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ಚಾಮರಾಜನಗರ ಜಿಲ್ಲೆ ಕಾವೇರಿ ವನ್ಯಜೀವಿ ಧಾಮದ ಹೊಳೆಮೂರ್ದಟ್ಟಿ, ಗಸ್ತಿನ ಕಿರುಬನಕಲ್ಲುಗುಡ್ಡ ಬಳಿ 2 ಹುಲಿಯ ಮರಿಗಳು ಸಾವಿಗೀಡಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ತಾಯಿ ಹುಲಿಯ ಬಗ್ಗೆ ಮಾಹಿತಿ ಅಲಭ್ಯವಾಗಿದೆ ಎಂದೂ ಅನುಮಾನಗಳು ವ್ಯಕ್ತವಾಗಿವೆ ಎಂದಿದ್ದಾರೆ.
ಈ ಹುಲಿ ಮರಿಗಳನ್ನು ತಾಯಿ ಹುಲಿ ಹಾಲುಣಿಸದೆ ಬಿಟ್ಟು ಹೋದ ಕಾರಣಕ್ಕೆ ಹಸಿವಿನಿಂದ ಸಾವು ಸಂಭವಿಸಿದೆಯೇ ಅಥವಾ ಅನ್ಯ ಕಾರಣವಿದೆಯೇ ಎಂಬ ಬಗ್ಗೆ ಮತ್ತು ತಾಯಿ ಹುಲಿಯ ಇರುವಿಕೆಯ ಬಗ್ಗೆ ಕ್ಯಾಮರಾ ಟ್ರ್ಯಾಪ್ ಆಧರಿಸಿ 5 ದಿನಗಳ ಒಳಗಾಗಿ ವಾಸ್ತವಾಂಶದ ವರದಿ ನೀಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿದ್ದಾರೆ.
ಬೆಂಗಳೂರಲ್ಲಿ ಕಿಲ್ಲರ್ BMTC ಬಸ್ಸಿಗೆ ಮತ್ತೊಂದು ಬಲಿ: ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ