ಧರ್ಮಸ್ಥಳ: ಇಲ್ಲಿನ ನೇತ್ರಾವತಿ ನದಿ ದಡದ ಪಾಯಿಂಟ್ ನಂ.13ರಲ್ಲಿ ನಿನ್ನೆಯಿಂದ ಅಸ್ಥಿಪಂಜರಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೇ ಸುಮಾರು 32 ಅಡಿ ಆಳ, 25 ಅಡಿ ಅಗಲ, 12 ಅಡಿ ಉದ್ದ ತೋಡಿದರೂ ಯಾವುದೇ ಅಸ್ಥಿ ಪಂಜರಗಳು ದೊರೆತಿಲ್ಲ. ಹೀಗಾಗಿ ತೆಗೆದಿದ್ದಂತ ಗುಂಡಿಗಳನ್ನು ಜೆಸಿಬಿ ಬಳಸಿ ಮುಚ್ಚಲಾಗುತ್ತಿದೆ.
ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ಗ್ರಾಮದಲ್ಲಿ ಶವಗಳನ್ನು ಹೂತಿದ್ದಾಗಿ ಮಾಸ್ಕ್ ಮ್ಯಾನ್ ಹೇಳಿಕೆ ವಿಚಾರದ ನಂತ್ರ ರಾಜ್ಯ ಸರ್ಕಾರವು ಎಸ್ಐಟಿ ತನಿಖೆಗೆ ವಹಿಸಿ ಆದೇಶಿಸಿತ್ತು. ನಿನ್ನಯಿಂದ ಪಾಯಿಂಟ್ ನಂ.13ರಲ್ಲಿ ಅಸ್ಥಿ ಪಂಜರಗಳ ಶೋಧ ಕಾರ್ಯಕ್ಕಾಗಿ ಉತ್ಕನನ ನಡೆಸಲಾಗುತ್ತಿತ್ತು. ನಿನ್ನೆ ಸುಮಾರು 18 ಅಡಿ ಆಳವನ್ನು ತೆಗೆಯಲಾಗಿತ್ತು. ಆದರೇ ಯಾವುದೇ ಅಸ್ಥಿ ಪಂಜರ ದೊರೆತಿರಲಿಲ್ಲ. ಹೀಗಾಗಿ ಇಂದಿಗೆ ಶೋಧ ಕಾರ್ಯಾಚರಣೆ ಮುಂದೂಡಲಾಗಿತ್ತು.
ಇಂದು ಎಸ್ಐಟಿ ನೇತೃತ್ವದಲ್ಲಿ ಎರಡು ಜೆಸಿಬಿ ಬಳಸಿ 13ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಸುಮಾರು 32 ಅಡಿ ಆಳ, 25 ಅಡಿ ಉದ್ದ, 12 ಅಡಿ ಅಗಲ ತೋಡಿದರೂ ಯಾವುದೇ ಅಸ್ಥಿ ಪಂಜರ ಪತ್ತೆಯಾಗಿಲ್ಲ. ಹೀಗಾಗಿ ಶೋಧ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಗಿದೆ. ಅಲ್ಲದೇ ತೆಗೆದಿದ್ದಂತ ಗುಂಡಿಯನ್ನು ಮುಚ್ಚಿಸುವಂತ ಕಾರ್ಯವನ್ನು ನಡೆಸಲಾಗುತ್ತಿದೆ.
ಕಚೇರಿಗೆ ತೆರಳುವಾಗ ಸಂಭವಿಸಿದಂತ ಅಪಘಾತದಲ್ಲೂ ನೌಕರ ಪರಿಹಾರಕ್ಕೆ ಅರ್ಹ: ಸುಪ್ರೀಂ ಕೋರ್ಟ್
ಬಿಕ್ಲು ಶಿವ ಕೊಲೆ ಕೇಸಲ್ಲಿ ಶಾಸಕ ಬೈರತಿ ಬಸವರಾಜ್ ಗೆ ಬಿಗ್ ರಿಲೀಫ್: ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ