ಬೆಂಗಳೂರು: ಸಾರ್ವಜನಿಕರಿಗೆ ಆಗಸ್ಟ್.16ರಿಂದ ರಾಜಭವನ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಸಾರ್ವಜನಿಕರು ತಮ್ಮ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕೊಂಡೊಯ್ಯುವುದು ಕಡ್ಡಾಯವಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ.16ರಿಂದ 18ರವರೆಗೆ ಒಟ್ಟು ಮೂರು ದಿನಗಳ ಕಾಲ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಮೂರೂ ದಿನ ಸಂಜೆ 6ರಿಂದ 7.30ರವರೆಗೆ ರಾಜಭವನ ವೀಕ್ಷಿಸಬಹುದು. ಸಾರ್ವಜನಿಕರು ಸರಕಾರದಿಂದ ವಿತರಿಸಿದ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ರಾಜಭವನ ಪ್ರವೇಶದ ವೇಳೆ ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಒಳಪಡಬೇಕು. ರಾಜಭವನದ ಆವರಣದೊಳಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆಗೆ ಪ್ರವೇಶಿಸಬಾರದು. ಪ್ರವೇಶದ ಸಂದರ್ಭದಲ್ಲಿ ಮತ್ತು ಪ್ರವೇಶಿಸಿದ ನಂತರ ಭದ್ರತಾ ಅಧಿಕಾರಿ ಹಾಗೂ ಸಿಬ್ಬಂದಿ ನೀಡುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಾಜಭವನದ ಆವರಣದೊಳಗೆ ಶಾಂತಿ ಕಾಪಾಡುವ ಮೂಲಕ ಸಹಕರಿಸಬೇಕು ಎಂದು ಹೇಳಿದ್ದಾರೆ.
ಇನ್ಮುಂದೆ ಶಿಕ್ಷಣ, ಕೈಗಾರಿಕೆಗಾಗಿ ಕೃಷಿ ಜಮೀನು ಖರೀದಿ ಅನುಮತಿ ಡಿಸಿಗೆ: ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡನೆ
64,197 ರೈಲ್ವೆ ಹುದ್ದೆಗಳಿಗೆ 1.87 ಕೋಟಿ ಅರ್ಜಿಗಳು ಸಲ್ಲಿಕೆ: ರೈಲ್ವೆ ಸಚಿವಾಲಯದ ಅಂಕಿ ಅಂಶಗಳು