ಬೆಂಗಳೂರು: ಖಾಸಗಿ ವ್ಯಕ್ತಿಗಳ ಕೃಷಿ ಜಮೀನನ್ನು ಶಿಕ್ಷಣ ಸಂಸ್ಥೆಗಳು ಅಥವಾ ಸಣ್ಣ ಉದ್ದಿಮೆ/ಕೈಗಾರಿಕೆಗಳಿಗೆ ಖರೀದಿಸಲು ಸೆಕ್ಷನ್ 109ರ ಅಡಿಯಲ್ಲಿ ಈ ಹಿಂದೆಯೇ ಅನುಮತಿ ನೀಡಲಾಗಿದೆ. ಆದರೆ, ಆ ಅನುಮತಿಗಾಗಿ ಅವರು ಸರ್ಕಾರ ಮುಖ್ಯ ಕಾರ್ಯದರ್ಶಿ ವರೆಗೆ ಬರುವಂತಿದೆ.ಈಗಿನ ನೂತನ ತಿದ್ದುಪಡಿಯಲ್ಲಿ ಆ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೇ ನೀಡಲಾಗಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ವಿಧಾನಸಭಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದಂತ ಅವರು, ಸಣ್ಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳೇ 4 ಹೆಕ್ಟೇರ್ ವರೆಗಿನ ಭೂಮಿ ಖರೀದಿಗೆ ಅನುಮತಿ ನೀಡಬಹುದು. ಹೀಗೆ ನೀಡುವ ಅನುಮತಿ ಆಟೋಮ್ಯಾಟಿಕ್ ಭೂ-ಪರಿವರ್ತನೆಯಾಗಿರುತ್ತದೆ.ಇದಲ್ಲದೆ, ಈ ಹಿಂದೆ ಸಣ್ಣ ಉದ್ದಿಮೆದಾರರು/ಶಿಕ್ಷಣ ಸಂಸ್ಥೆಗಳು ಭೂಮಿಯನ್ನು ಏನೋ ಉದ್ದೇಶಕ್ಕೆ ತಗೊಂಡು ಇನ್ನೇನೋ ಉದ್ದೇಶಕ್ಕೆ ಬಳಸಲೂ ಸಹ ನಮ್ಮ ಬಳಿ ಅನುಮತಿ ಕೇಳುತ್ತಾರೆ. ಆದರೆ, ಅದಕ್ಕೆ ಅನುಮತಿ ನೀಡುವುದು ಅವಕಾಶ ಇರಲಿಲ್ಲ. ಪ್ರಸ್ತುತ ಅದಕ್ಕೂ ಅವಕಾಶ ನೀಡಲಾಗಿದೆ ಎಂದರು.
ಕರ್ನಾಟಕದಲ್ಲಿ ಎಲ್ಲೇ ಆಗಲಿ 2 ಎಕರೆ ವರೆಗೆ ಕೈಗಾರಿಗೆ ಮಾಡಲು ಪರಿವರ್ತನೆಗೆ ವಿನಾಯಿತಿ ನೀಡಲಾಗುತ್ತದೆ. ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ತಿದ್ದುಪಡಿಯನ್ನು ತರಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರ ಪ್ರಸ್ತುತ ಉದಯೋನ್ಮುಖ ವಲಯ. ದೇಶದ ಆದ್ಯತೆ ಕಲ್ಲಿದ್ದಲಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಕಡೆ ಬದಲಾಗಬೇಕು ಎಂಬುದು ಸರ್ಕಾರದ ಹಾಗೂ ಜನ ಸಾಮಾನ್ಯರ ಆದ್ಯತೆ. ಸೋಲಾರ್, ಪವನ ಶಕ್ತಿ ಘಟಕ ಸ್ಥಾಪಿಸಲು ಅನುಮತಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂಬುದಾಗಿ ಕಳವಳ ವ್ಯಕ್ತ ಪಡಿಸಿದರು.
ಇದರಿಂದ ಸಣ್ಣ ಉದ್ದಿಮೆದಾರರು ಮಧ್ಯವರ್ತಿಗಳ ಕಾಟಕ್ಕೆ ಬೇಸತ್ತಿದ್ದರೆ, ಸೋಲಾರ್ ಹಾಗೂ ಪವನ ಶಕ್ತಿ ವಿಂಡ್ ಮಿಲ್ ಸ್ಥಾಪಿಸುವ ಉದ್ದಿಮೆದಾರರ ಬಂಡವಾಳ ಹೂಡಿಕೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಮಧ್ಯವರ್ತಿಗಳ ಉಪಟಳ ತಪ್ಪಿಸಿ ಬಂಡವಾಳ ಹೆಚ್ಚಿಸುವ ಸಲುವಾಗಿ ಆಟೋ ಕನ್‌ವರ್ಷನ್‌ಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಒತ್ತಾಯವೂ ಇತ್ತು. ಹೀಗಾಗಿ ಬಹಳ ದಿನಗಳ ಚರ್ಚೆಯ ನಂತರ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ರಾಮನಾಥಪುರಂವರೆಗೆ ಸಂಚಾರ ಅವಧಿ ವಿಸ್ತರಣೆ
64,197 ರೈಲ್ವೆ ಹುದ್ದೆಗಳಿಗೆ 1.87 ಕೋಟಿ ಅರ್ಜಿಗಳು ಸಲ್ಲಿಕೆ: ರೈಲ್ವೆ ಸಚಿವಾಲಯದ ಅಂಕಿ ಅಂಶಗಳು