ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್.10ರಂದು ಹಳದಿ ಮಾರ್ಗದ ನಮ್ಮ ಮೆಟ್ರೋ ಲೋಕಾರ್ಪಣೆಗೊಳಿಸಿತ್ತಾರೆ. ಈ ಮಾರ್ಗದಲ್ಲಿ ಟಿಕೆಟ್ ಪಡೆದು ಸಂಚರಿಸದೇ ನಿಲ್ದಾಣದಲ್ಲೇ ಕಳೆದ ಪ್ರಯಾಣಿಕನೊಬ್ಬನಿಗೆ 50 ರೂಪಾಯಿ ದಂಡವನ್ನು ವಿಧಿಸಲಾಗಿದೆ. ಸೋ ನಮ್ಮ ಮೆಟ್ರೋ ಪ್ರಯಾಣಿಕರೇ ನೀವು ಎಚ್ಚರ. ಹೀಗೆ ಮಾಡಿದ್ರೇ ದಂಡ ಬೀಳೋದು ಗ್ಯಾರಂಟಿ.
ಹೌದು.. ನಮ್ಮ ಮೆಟ್ರೋದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಒಂದೇ ನಿಲ್ದಾಣದಲ್ಲಿ ಕಾಯುವಂತಿಲ್ಲ. ಇದು ನಮ್ಮ ಮೆಟ್ರೋ ನಿಯಮ ಕೂಡ ಆಗಿದೆ. ಒಂದು ವೇಳೆ ಈ ನಿಯಮ ಮೀರಿದಂತ ಪ್ರಯಾಣಿಕರಿದೆ ಬಿಎಂಆರ್ ಸಿಎಲ್ ದಂಡವನ್ನು ವಿಧಿಸಲಿದೆ.
ಅಂದಹಾಗೇ ಸಿಲ್ಕ್ ಬೋರ್ಡ್ ಟು ಆರ್ ವಿ ರಸ್ತೆಗೆ ಹೋಗೋದಕ್ಕೆ ಪ್ರಯಾಣಿಕರೊಬ್ಬರು ಟಿಕೆಟ್ ಪಡೆದು ನಮ್ಮ ಮೆಟ್ರೋ ನಿಲ್ದಾಣದ ಒಳಗೆ ತೆರಳಿದ್ದಾರೆ. ರೈಲು ಬರುವವರೆಗೂ ಕಾದಿದ್ದಂತ ಪ್ರಯಾಣಿಕ, ಜನರು ಹೆಚ್ಚು ಇದ್ದ ಕಾರಣ ರೈಲು ಹತ್ತೋದಕ್ಕೆ ಸಾಧ್ಯವಾಗಿಲ್ಲ. ತಮ್ಮ ಪ್ಲಾನ್ ಕ್ಯಾನ್ಸಲ್ ಮಾಡಿ, ಮೆಟ್ರೋ ನಿಲ್ದಾಣದಿಂದ ಹೊರ ಬರುವಾಗ 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾದಂತ ಪ್ರಯಾಣಿಕನಿಗೆ ಬಿಎಂಆರ್ ಸಿ ಎಲ್ 50 ರೂಪಾಯಿ ದಂಡವನ್ನು ವಿಧಿಸಿದೆ.
64,197 ರೈಲ್ವೆ ಹುದ್ದೆಗಳಿಗೆ 1.87 ಕೋಟಿ ಅರ್ಜಿಗಳು ಸಲ್ಲಿಕೆ: ರೈಲ್ವೆ ಸಚಿವಾಲಯದ ಅಂಕಿ ಅಂಶಗಳು