ಧರ್ಮಸ್ಥಳ : ಧರ್ಮಸ್ಥಳ ಕೇಸ್ ಗೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಧರ್ಮಸ್ಥಳದ ಸುತ್ತುಮುತ್ತ ಸುಮಾರು 30 ಕಡೆ 300 ಹೆಣ ಹೂತಿದ್ದೇನೆ ಎಂದು ಅನಾಮಿಕ ದೂರುದಾರ ಹೇಳಿದ್ದಾನೆ.
ಧರ್ಮಸ್ಥಳದಲ್ಲಿ ಸುಮಾರು 30 ಕಡೆ 300 ಹೆಣ ಹೂತಿದ್ದೇನೆ. ಅಲ್ಲೂ ಶೋಧ ನಡೆಸಿ ಎಂದು ಅನಾಮಿಕ ದೂರುದಾರ ಎಸ್ ಐ ಟಿ ಗೆ ಹೇಳಿದ್ದಾನೆ ಎನ್ನಲಾಗಿದೆ. ಶವ ಹೂತಿದ್ದಾಗಿ ದೂರುದಾರ ತಪ್ಪೊಪ್ಪಿಕೊಂಡ ನಂತ್ರ, ರಾಜ್ಯ ಸರ್ಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಸೂಚಿಸಿತ್ತು. ಇಂದು ಎಸ್ಐಟಿಯಿಂದ 13ನೇ ಪಾಯಿಂಟ್ ನಲ್ಲಿ ಉತ್ಕನನ ಕಾರ್ಯವನ್ನು ನಡೆಸಲಾಯಿತು. ಸುಮಾರು 18 ಅಡಿ ಆಳ ತೆಗೆದರೂ ಯಾವುದೇ ಅಸ್ಥಿ ಪಂಜರ ಪತ್ತೆಯಾಗಿಲ್ಲ. ಹೀಗಾಗಿ ಇಂದಿನ ಉತ್ಕನನ ಕಾರ್ಯವನ್ನು ಎಸ್ಐಟಿ ಮುಕ್ತಾಯಗೊಳಿಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಈವರೆಗೆ 1 ರಿಂದ 13 ಪಾಯಿಂಟ್ ಗಳಲ್ಲಿ ಅಸ್ಥಿ ಪಂಜರಗಳಿಗಾಗಿ ಉತ್ಕನನ ಕಾರ್ಯವನ್ನು ನಡೆಸಲಾಗುತ್ತಿದೆ. ಪಾಯಿಂಟ್ ನಂ.6ರಲ್ಲಿ ಶೋಧ ಕಾರ್ಯದ ವೇಳೆಯಲ್ಲಿ ಮಾತ್ರ ಅಸ್ಥಿ ಪಂಜರಗಳು ದೊರೆತಿದ್ದರು. ಅದರ ಹೊರತಾಗಿ ಈವರೆಗೆ ದೂರುದಾರ ಗುರುತಿಸಿದಂತ ಪಾಯಿಂಟ್ ನಲ್ಲಿ ಅಸ್ಥಿ ಪಂಜರ ದೊರೆತಿಲ್ಲ.
ನಿನ್ನೆ ಪಾಯಿಂಟ್ ನಂ.13ರಲ್ಲಿ ಜಿಪಿಆರ್ ಯಂತ್ರವನ್ನು ಬಳಸಿ ಸ್ಕ್ಯಾನ್ ಮಾಡಲಾಯಿತು. ಈ ಬಳಿಕ ಜಿಪಿಆರ್ ಯಂತ್ರದಲ್ಲಿ ದಾಖಲಾಗಿದ್ದಂತ ಡೇಟಾವನ್ನು ತಂತ್ರಜ್ಞರು ಪರಿಶೀಲನೆ ನಡೆಸಿದರು. ಆ ನಂತ್ರ ಎರಡು ಜೆಸಿಬಿ ಬಳಸಿ ಪಾಯಿಂಟ್ ನಂ.13ರಲ್ಲಿ ಉತ್ಕನನ ಕಾರ್ಯವನ್ನು ನಡೆಸಲಾಯಿತು. ಸುಮಾರು 18 ಅಡಿ ಆಳದವರೆಗೂ ತೆಗೆದರೂ ಯಾವುದೇ ಅಸ್ಥಿ ಪಂಜರ ದೊರೆಯಲಿಲ್ಲ. ಹೀಗಾಗಿ ಸ್ಥಳ ಮಹಜರು ನಡೆಸಿ, ಎಸ್ಐಟಿ ಅಧಿಕಾರಿಗಳು ನಿನ್ನೆಯ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದರು.