ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾಗಿ ದೂರುದಾರರೊಬ್ಬರು ಹೇಳಿದ್ದಂತ ತಪ್ಪೊಪ್ಪಿಗೆ ಹೇಳಿಕೆಯಿಂದಾಗಿ ಎಸ್ಐಟಿಯಿಂದ ಅಸ್ಥಿ ಪಂಜರಗಳ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇದೀಗ ಜಿಪಿಆರ್ ಮೂಲಕ ಪಾಯಿಂಟ್ ನಂ.13ರಲ್ಲಿ ಸ್ಕ್ಯಾನ್ ಮಾಡಲಾಗಿದ್ದು, ಅದರ ಮುಕ್ತಾಯದ ಬಳಿಕ ತಂತ್ರಜ್ಞರು ಪೂಟೇಜ್ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಧರ್ಮಸ್ಥಳದಲ್ಲಿ ಶವಗಳ ಅಸ್ಥಿ ಪಂಜರಗಳಿಗಾಗಿ ಎಸ್ಐಟಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಪಾಯಿಂಟ್ ನಂ.6ರಲ್ಲಿ ಹೊರತಾಗಿ ಇದುವರೆಗಿನ ಶೋಧ ಕಾರ್ಯಾಚರಣೆಯಲ್ಲಿ ಎಸ್ಐಟಿಗೆ ಅಸ್ಥಿಪಂಜರಗಳು ಬೇರೆ ಯಾವುದೇ ಪಾಯಿಂಟ್ ನಲ್ಲಿ ದೊರೆತಿಲ್ಲ. ಇನ್ನೂ ದೂರುದಾರ ತೋರಿಸುತ್ತಿರುವಂತ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ಇಂದು ಪಾಯಿಂಟ್ ನಂ.13ರಲ್ಲಿ ಎಸ್ಐಟಿ ಮೊದಲ ಬಾರಿಗೆ ಜಿಪಿಆರ್ ತಂತ್ರಜ್ಞಾನವನ್ನು ಬಳಸಿ ಶೋಧ ಕಾರ್ಯಾಚರಣೆ ನಡೆಸಿದರು. ಇದೀಗ ಜಿಪಿಆರ್ ಸ್ಕ್ಯಾನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅದರ ಪೂಟೇಜ್ ಅನ್ನು ತಂತ್ರಜ್ಞರು ಪರಿಶೀಲಿಸುತ್ತಿರುವುದಾಗಿ ತಿಳಿದು ಬಂದಿದೆ. ಇಲ್ಲಿ ಏನಾದರೂ ಅಸ್ಥಿ ಪಂಜರ ಸಿಗಲಿದ್ಯಾ ಅಂತ ಕಾದು ನೋಡಬೇಕಿದೆ.