Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಹಲ್ಗಾಮ್ ಉಗ್ರರ ರಕ್ತ, ಕೂದಲಿನ ಮಾದರಿ ಸಂಗ್ರಹಿಸಿದ NIA | Pahalgam attract

12/08/2025 7:00 AM

ಅನರ್ಹ `BPL’ ಕಾರ್ಡ್ ದಾರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ 12.69 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು.!

12/08/2025 6:57 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಕಡಿಮೆ ಎಣ್ಣೆ, ಸಕ್ಕರೆ ಸೇವನೆ’ ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

12/08/2025 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಕಡಿಮೆ ಎಣ್ಣೆ, ಸಕ್ಕರೆ ಸೇವನೆ’ ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಕಡಿಮೆ ಎಣ್ಣೆ, ಸಕ್ಕರೆ ಸೇವನೆ’ ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5712/08/2025 6:55 AM

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕಡಿಮೆ ಎಣ್ಣೆ ಹಾಗೂ ಸಕ್ಕರೆ ಸೇವನೆ ಕುರಿತು ಜಾಗೃತಿ ಮೂಡಿಸುವ ಕುರಿತು ಮಾಹಿತಿ ಫಲಕ ಗಳನ್ನು ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಭಾರತದಲ್ಲಿ ಆಹಾರ ಪದ್ಧತಿ ಮತ್ತು ಕಡಿಮೆಯಾದ ದೈಹಿಕ ಚಟುವಟಿಕೆಯಿಂದ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಬೊಜ್ಜು ತೀವವಾಗಿ ಏರಿಕೆಯಾಗುತ್ತಿದೆ ಎಂದು ತಿಳಿಸಿರುತ್ತಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( NFHS 2019-21 ) ವರದಿಯ ಪ್ರಕಾರ ನಗರ ಪ್ರದೇಶಗಳಲ್ಲಿ ಐದರಲ್ಲಿ ಒಬ್ಬ ವಯಸ್ಕರು ಅತಿ ತೂಕ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿ ಲ್ಯಾನ್ಸೆಟ್ ಜಿಬಿಡಿ 2021 ರ ವರದಿಯು 2025 ರಲ್ಲಿ ಪ್ರಕಟವಾಗಿದ್ದು, ಈ ವರದಿಯ ಪ್ರಕಾರ ಭಾರತದಲ್ಲಿ ಬೊಜ್ಜು ಅಧಿಕ ತೂಕ ಅಥವಾ ಬೊಜ್ಜು ಹೊಂದುವವರು 2021 ರ ಸಾಲಿನಲ್ಲಿ 18 ಕೋಟಿಯಿಂದ 2050 ರ ವೇಳೆಗೆ 44.9 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದ್ದು ಭಾರತ ದೇಶವು ಜಾಗತಿಕ ಹೊರೆಯಲ್ಲಿ ಎರಡನೇ ಅತಿ ಹೆಚ್ಚು ಅಧಿಕ ತೂಕ ಮತ್ತು ಬೊಜ್ಜು ವಯಸ್ಕರ ಹೊಂದಿರುವ ದೇಶವಾಗಲಿದೆ ಎಂದು ಸೂಚಿಸಲಾಗಿದೆ.

ಸ್ಕೂಲಕಾಯತೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗಗಳು ಮತ್ತು ಕೆಲವು ಕ್ಯಾನ್ಸರ್ ಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಮಾನಸಿಕ ಒತ್ತಡ, ಚಲನಶೀಲತೆ ಮತ್ತು ಜೀವನಶೈಲಿಯು ಹಾಳಾಗುವುದಲ್ಲದೆ ಹೆಚ್ಚಿದ ಆರೋಗ್ಯ ವೆಚ್ಚಗಳು ಭಾರೀ ಆರ್ಥಿಕ ಹೊರೆಯನ್ನು ಹೇರುತ್ತದೆ ಮತ್ತು ಇದು ದೇಶದ ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತದೆ. ಈ ಪ್ರವೃತ್ತಿಗಳನ್ನು ಹಿಮ್ಮೆಟ್ಟಿಸಲು ಆರಂಭಿಕ ತಡೆಗಟ್ಟುವಿಕೆ ಮತ್ತು ಆರೋಗ್ಯ ಪ್ರಚಾರವು ಅವಶ್ಯಕವಾಗಿರುತ್ತದೆ.

ಶಾಲಾ ಆವರಣದಲ್ಲಿ ಸುಲಭವಾಗಿ ಲಭ್ಯವಿರುವ ಸಕ್ಕರೆ ತಿಂಡಿಗಳು, ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆಯ ಮೂಲಕ ಮಕ್ಕಳಲ್ಲಿ ಬರಬಹುದಾದ ಟೈಪ್ 2 ಮಧುಮೇಹವನ್ನು ತಡೆಗಟ್ಟಲು, ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸಕ್ಕರೆ ಮಂಡಳಿಗಳನ್ನು ಸ್ಥಾಪಿಸಿ, ಅಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ಸಕ್ಕರೆ ಸೇವನೆಯ ಅಪಾಯಗಳ ಬಗ್ಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವುದು. ಇದು ವಿದ್ಯಾರ್ಥಿಗಳು ಮಾಹಿತಿಯುಕ್ತ ಆಹಾರ ಆಯ್ಕೆಗಳನ್ನು ಮಾಡಲು ಮತ್ತು ದೀರ್ಘಕಾಲೀನ ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸಲು ಅನುವು ಮಾಡಿಕೊಡುತ್ತದೆ. ಶಾಲೆಗಳು ಈ ನಿಟ್ಟಿನಲ್ಲಿ ಜಾಗೃತಿ ವಿಚಾರ ಸಂಕಿರಣಗಳು/ ಕಾರ್ಯಾಗಾರಗಳನ್ನು ಆಯೋಜಿಸಲು ಈ ಮೂಲಕ ಸೂಚಿಸಿದೆ. ಈಗಾಗಲೇ ದಿನಾಂಕ 19.03.2025 ರಂದು ಇಲಾಖೆಯು ಆಹಾರಗಳಲ್ಲಿ 10% ಎಣ್ಣೆ ಕಡಿಮೆ ಬಳಕೆಯ ಬಗ್ಗೆ ಜ್ಞಾಪನಾವನ್ನು ಉಲ್ಲೇಖ-3 ರಲ್ಲಿರುವಂತೆ ಹೊರಡಿಸಲಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕಡಿಮ ಎಣ್ಣೆ ಹಾಗೂ ಸಕ್ಕರೆ ಸೇವನೆ ಕುರಿತು ಜಾಗೃತಿ ಮೂಡಿಸುವ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ತಿಳಿಸಿದೆ:

1. ಶಾಲೆಯ ಆವರಣದಲ್ಲಿ ಸಾರ್ವಜನಿಕವಾಗಿ ಕಾಣುವಂತೆ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಸಕ್ಕರೆ ಮತ್ತು ಎಣ್ಣೆಯ ಆಹಾರ ಪದಾರ್ಥಗಳ ಬಗ್ಗೆ ಮತ್ತು ದಿನನಿತ್ಯದ ಆಹಾರಗಳಲ್ಲಿ ಅಡಗಿರುವ ಕೊಬ್ಬುಗಳು ಮತ್ತು ಸಕ್ಕರೆಗಳ ಬಗ್ಗೆ ಸಲಹೆಗಳ= ಪ್ರಮುಖ ಮಾಹಿತಿಯ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವುದು. ಈ ಬಗ್ಗೆ ಮಾದರಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.

2. ಸ್ಕೂಲಕಾಯತೆಯ ವಿರುದ್ಧ ಹೋರಾಡುವ ಬಗ್ಗೆ ದೈನಂದಿನ ಜ್ಞಾಪನಗಳನ್ನು ಬಲಪಡಿಸಲು ಎಲ್ಲಾ ಅಧಿಕೃತ ಲೇಖನ ಸಾಮಗ್ರಿಗಳಲ್ಲಿ (ಲೆಟರ್ಹೆಡ್ಗಳು, ಲಕೋಟೆಗಳು, ನೋಟ್ ಪ್ಯಾಡ್ಗಳು, ಫೋಲ್ಕರ್ಗಳು, ಇತ್ಯಾದಿ) ಮತ್ತು ಪ್ರಕಟಣೆಗಳಲ್ಲಿ ಆರೋಗ್ಯ ಸಂದೇಶಗಳನ್ನು ಮುದ್ರಿಸುವುದು.

3. ಶಾಲೆಗಳಲ್ಲಿ ಪೌಷ್ಟಿಕ, ಆರೋಗ್ಯಕರ ಆಹಾರ ಆಯ್ಕೆಗಳ ಲಭ್ಯತೆ (ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ಕಡಿಮೆ ಕೊಬ್ಬಿನ ಆಯ್ಕೆಗಳು, ಮತ್ತು ಸಕ್ಕರೆ ಪಾನೀಯಗಳು ಮತ್ತು ಹೆಚ್ಚಿನ ಕೊಬ್ಬಿನ ತಿಂಡಿಗಳ ಲಭ್ಯತೆಯನ್ನು ಸೀಮಿತಗೊಳಿಸುವ ಮೂಲಕ) ಮತ್ತು ಚಟುವಟಿಕೆ ಉಪಕ್ರಮಗಳು (ಮೆಟ್ಟಿಲುಗಳ ಬಳಕೆಯನ್ನು ಪ್ರೋತ್ಸಾಹಿಸುವುದು, ಸಣ್ಣ ವ್ಯಾಯಾಮ ವಿರಾಮಗಳನ್ನು ಆಯೋಜಿಸುವುದು ಮತ್ತು ನಡಿಗೆ ಮಾರ್ಗಗಳನ್ನು ಸುಗಮಗೊಳಿಸುವುದು) ಮೂಲಕ ಆರೋಗ್ಯಕರ ಊಟ ಮತ್ತು ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವುದು.

4. ಆರೋಗ್ಯಕರ ಆಹಾರ ಆಯ್ಕೆಗಳ, ಎಣ್ಣೆ ಹಾಗೂಸಕ್ಕರೆ ಬಳಕೆ ಮತ್ತು ಜೀವನ ಶೈಲಿ ಆಧಾರಿತ ಆರೋಗ್ಯ ಸಮಸ್ಯೆಗಳ ಕುರಿತು ಸ್ಥಳೀಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಅವರ ಸಹಕಾರದೊಂದಿಗೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಲ್ಲಿ, ಶಿಕ್ಷಕರಲ್ಲಿ ಅರಿವು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮ ವಹಿಸಲು ಸೂಚಿಸಿದೆ.

5. ಶಾಲಾ ಹಂತದಲ್ಲಿ “ಆರೋಗ್ಯ ರಾಯಭಾರಿಗಳನ್ನು” ನೇಮಿಸಿ ಶಾಲಾ ಪ್ರಾರ್ಥನಾ ಸಮಯದಲ್ಲಿ ಪ್ರತಿದಿನ ಸಕ್ಕರೆ ಹಾಗೂ ಎಣ್ಣೆ ಆಹಾರ ಪದಾರ್ಥಗಳ ಸೇವನೆ ಕುರಿತು ಮಾಹಿತಿಗಳನ್ನು ಪ್ರಚಾರಗೊಳಿಸುವುದು.

6. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಂದ ಅನುಭವದ ಕಲಿಕೆಯ ಭಾಗವಾಗಿ ಎಣ್ಣೆ ಹಾಗೂ ಸಕ್ಕರೆಯ ಕುರಿತಾದ ಮಾಹಿತಿಯ ಬೋರ್ಡ್ಗಳನ್ನು, ಪೋಸ್ಟರ್, ರಸಪ್ರಶ್ನೆ ಚರ್ಚಾಸ್ಪರ್ದೆ, ಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪೋಸ್ಟರ್ಗಳು, ವೀಡಿಯೊಗಳು ಇತ್ಯಾದಿಗಳನ್ನು ಒಳಗೊಂಡಂತೆ ಸಂಬಂಧಿತ IEC ಸಾಮಗ್ರಿಗಳು https://youtube.com/playlist?list=Ple cE1U0Q6EYEmilGQI44zaplH3k2ki04&feat ನಲ್ಲಿ ಲಭ್ಯವಿರುತ್ತದೆ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ iec@fssai.gov.in ಇ-ಮೇಲ್ ಗೆ ಸಂಪರ್ಕಿಸಬಹುದಾಗಿರುತ್ತದೆ.

Important order from the government: Installation of information boards on 'low oil and sugar consumption' mandatory in all schools in the state
Share. Facebook Twitter LinkedIn WhatsApp Email

Related Posts

ಅನರ್ಹ `BPL’ ಕಾರ್ಡ್ ದಾರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ 12.69 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು.!

12/08/2025 6:57 AM1 Min Read

`ಹಳೆ ಪಿಂಚಣಿ’ ಜಾರಿ ನಿರೀಕ್ಷೆಯಲ್ಲಿರುವ `ರಾಜ್ಯ ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : ಇಂದು ಮಹತ್ವದ ಸಭೆ.!

12/08/2025 6:34 AM1 Min Read
vidhana soudha

ದೇವಾಲಯಗಳ `ಆಸ್ತಿ’ ಕಬಳಿಸಿದವರಿಗೆ ಬಿಗ್ ಶಾಕ್ : ರಾಜ್ಯ ಸರ್ಕಾರದಿಂದ ಬರೋಬ್ಬರಿ 4 ಸಾವಿರ ಎಕರೆ ಭೂಮಿ ಮರುಸ್ವಾಧೀನ.!

12/08/2025 6:33 AM1 Min Read
Recent News

ಪಹಲ್ಗಾಮ್ ಉಗ್ರರ ರಕ್ತ, ಕೂದಲಿನ ಮಾದರಿ ಸಂಗ್ರಹಿಸಿದ NIA | Pahalgam attract

12/08/2025 7:00 AM

ಅನರ್ಹ `BPL’ ಕಾರ್ಡ್ ದಾರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ 12.69 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು.!

12/08/2025 6:57 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಕಡಿಮೆ ಎಣ್ಣೆ, ಸಕ್ಕರೆ ಸೇವನೆ’ ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

12/08/2025 6:55 AM

ಅನಾರೋಗ್ಯದ ಕಾರಣ : ಅಸಾರಾಮ್ ಜಾಮೀನು ಅವಧಿಯನ್ನು 3ನೇ ಬಾರಿಗೆ ವಿಸ್ತರಿಸಿದ ರಾಜಸ್ಥಾನ ಹೈಕೋರ್ಟ್

12/08/2025 6:54 AM
State News
KARNATAKA

ಅನರ್ಹ `BPL’ ಕಾರ್ಡ್ ದಾರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ 12.69 ಲಕ್ಷ ಅಕ್ರಮ ಪಡಿತರ ಚೀಟಿ ರದ್ದು.!

By kannadanewsnow5712/08/2025 6:57 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿವಿಧ ಪಡಿತರ ಚೀಟಿಗಳ ಪೈಕಿ ಸುಮಾರು 12.69 ಲಕ್ಷಪಡಿತರ ಚೀಟಿಗಳು ಶಂಕಾಸ್ಪದವಾಗಿದ್ದು, ಈ ಪಡಿತರ…

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ `ಕಡಿಮೆ ಎಣ್ಣೆ, ಸಕ್ಕರೆ ಸೇವನೆ’ ಕುರಿತು ಮಾಹಿತಿ ಫಲಕ ಅಳವಡಿಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

12/08/2025 6:55 AM

`ಹಳೆ ಪಿಂಚಣಿ’ ಜಾರಿ ನಿರೀಕ್ಷೆಯಲ್ಲಿರುವ `ರಾಜ್ಯ ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : ಇಂದು ಮಹತ್ವದ ಸಭೆ.!

12/08/2025 6:34 AM
vidhana soudha

ದೇವಾಲಯಗಳ `ಆಸ್ತಿ’ ಕಬಳಿಸಿದವರಿಗೆ ಬಿಗ್ ಶಾಕ್ : ರಾಜ್ಯ ಸರ್ಕಾರದಿಂದ ಬರೋಬ್ಬರಿ 4 ಸಾವಿರ ಎಕರೆ ಭೂಮಿ ಮರುಸ್ವಾಧೀನ.!

12/08/2025 6:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.