ನವದೆಹಲಿ: ಮೊಬೈಲ್ ಬಳಕೆ ಹೆಚ್ಚಾದಂತೆ ಅದರೊಟ್ಟಿಗೆ ವಂಚಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆನ್ ಲೈನ್ ವಂಚನೆಗಾಗಿ ದಿನಕ್ಕೊಂದು ಸಿಮ್ ಕಾರ್ಡ್ ಖರೀದಿಸೋ ಖದೀಮರು, ಅವುಗಳಿಂದ ಜನರನ್ನು ವಂಚನೆ ಮಾಡುತ್ತಿದ್ದಾರೆ. ಈ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಆನ್ ಲೈನ್ ವಂಚನೆ ತಡೆಯ ಕ್ರಮವಾಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇರುವಂತ ಸಿಮ್ ಕಾರ್ಡ್ ಎಷ್ಟು ಎಂಬ ಮಾಹಿತಿಯನ್ನು ಅರಿಯಲು ಅವಕಾಶ ಮಾಡಿಕೊಟ್ಟಿದೆ. ಹಾಗಾದ್ರೇ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಬಳಕೆಯಲ್ಲಿ ಇವೆ ಎಂಬುದನ್ನು ತಿಳಿಯುವ ಬಗೆಗಾಗಿ ಮುಂದೆ ಓದಿ.
ಕೇಂದ್ರ ಸರ್ಕಾರದಿಂದ ಸಂಚಾರ್ ಸಾಥಿ ಎಂಬುದು ಮೊಬೈಲ್ ಚಂದಾದಾರರನ್ನು ಸಬಲೀಕರಣಗೊಳಿಸಲು, ಅವರ ಸುರಕ್ಷತೆಯನ್ನು ಬಲಪಡಿಸಲು ಮತ್ತು ಸರ್ಕಾರದ ನಾಗರಿಕ ಕೇಂದ್ರಿತ ಉಪಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ದೂರಸಂಪರ್ಕ ಇಲಾಖೆ (Department of Telecommunications – DoT) ಯ ನಾಗರಿಕ ಕೇಂದ್ರಿತ ಉಪಕ್ರಮವನ್ನು ಜಾರಿಗೆ ತಂದಿದೆ.
ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಪೋರ್ಟಲ್ www.sancharsaathi.gov.in ರೂಪದಲ್ಲಿ ಲಭ್ಯವಿದೆ. ಸಂಚಾರ್ ಸಾಥಿ ವಿವಿಧ ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತದೆ.
ಇದರ ಜೊತೆಗೆ, ಕೀಪ್ ಯುವರ್ಸೆಲ್ಫ್ ಅವೇರ್ ಸೌಲಭ್ಯವು ಅಂತಿಮ ಬಳಕೆದಾರರ ಸುರಕ್ಷತೆ, ಟೆಲಿಕಾಂ ಮತ್ತು ಮಾಹಿತಿ ಭದ್ರತೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಇತ್ತೀಚಿನ ನವೀಕರಣಗಳು ಮತ್ತು ಜಾಗೃತಿ ಸಾಮಗ್ರಿಗಳನ್ನು ಒದಗಿಸುತ್ತದೆ.
ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್ ಕಾರ್ಡ್’ ಬಳಕೆಯಲ್ಲಿವೆ ಅಂತ ತಿಳಿಯಲು ಜಸ್ಟ್ ಹೀಗೆ ಮಾಡಿ
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಬಳಕೆಯಲ್ಲಿದ್ದಾವೆ ಎಂಬುದನ್ನು ಕ್ಷಣಾರ್ಧದಲ್ಲಿ ಪತ್ತೆಯನ್ನು ನೀವು ಕುಳಿತಲ್ಲಿಯೇ ಪರಿಶೀಲಿಸಬಹುದು. ಇದು ಒಬ್ಬ ಮೊಬೈಲ್ ಚಂದಾದಾರನು ತನ್ನ ಹೆಸರಿನಲ್ಲಿ ತೆಗೆದುಕೊಂಡಿರುವ ಮೊಬೈಲ್ ಸಂಪರ್ಕಗಳ ಸಂಖ್ಯೆಯನ್ನು ಪರಿಶೀಲಿಸಲು ಅನುಕೂಲ ಮಾಡಿಕೊಡುತ್ತದೆ. ಇದು ಚಂದಾದಾರರು ಅಗತ್ಯವಿಲ್ಲದ ಅಥವಾ ತೆಗೆದುಕೊಳ್ಳದ ಮೊಬೈಲ್ ಸಂಪರ್ಕಗಳ ಬಗ್ಗೆ ವರದಿ ಮಾಡಲು ಸಹ ಅನುಕೂಲ ಮಾಡಿಕೊಡುತ್ತದೆ.
1.ನಿಮ್ಮ ಹೆಸರಿನಲ್ಲಿರುವಂತ ಸಿಮ್ ಕಾರ್ಡ್ ಎಷ್ಟು ಎಂಬುದನ್ನು ಪರಿಶೀಲಿಸಲು ನೀವು https://tafcop.sancharsaathi.gov.in/telecomUser/ ಈ ಲಿಂಕ್ ಕ್ಲಿಕ್ ಮಾಡಿ.
2. ಈ ಲಿಂಕ್ ಓಪನ್ ಆದ ಬಳಿಕ ಅಲ್ಲಿ ಕೇಳುವಂತೆ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಸಿಕ್ರೇಟ್ ಕೋಡ್ ನಮೂದಿಸಿ.
3. ಇದಾದ ಬಳಿಕ ನೀವು ಗೆಟ್ ಓಟಿಪಿ ಎನ್ನುವಲ್ಲಿ ಕ್ಲಿಕ್ ಮಾಡಿ. ಆ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವಂತ ಒಟಿಪಿ ನಮೂದಿಸಿ.
4. ಈ ರೀತಿಯಾಗಿ ಮಾಡಿದಾ ನಿಮ್ಮ ಹೆಸರಿನಲ್ಲಿರುವ ಎಷ್ಟು ಸಿಮ್ ಕಾರ್ಡ್ ಚಾಲ್ತಿಯಲ್ಲಿ ಇದ್ದಾವೆ ಎಂಬ ಮಾಹಿತಿ ಕ್ಷಣಾರ್ಧದಲ್ಲಿ ಸಿಗಲಿದೆ. ಆ
ಒಂದು ವೇಳೆ ನೀವು ಬಳಕೆ ಮಾಡದೇ ಇರುವಂತ ಸಿಮ್ ಕಾರ್ಡ್ ಕೂಡ ನಿಮ್ಮ ಹೆಸರಿನಲ್ಲಿ ಇದ್ದು, ಬಳಕೆಯಲ್ಲಿ ಇದ್ದರೇ, ಅಲ್ಲಿಯೇ ಇರುವಂತ ರಿಪೋರ್ಟ್ ಆಯ್ಕೆಯನ್ನು ಬಳಕೆ ಮಾಡಿಕೊಂಡು, ದೂರು ನೀಡಬಹುದು. ಆ ಬಳಿಕ ಕೇಂದ್ರ ದೂರ ಸಂಪರ್ಕ ಇಲಾಖೆಯು ಅಂತ ನಂಬರ್ ಡಿಸ್ ಕನೆಕ್ಟ್ ಮಾಡಲಿದೆ.
ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಕೆ.ಎನ್ ರಾಜಣ್ಣ ರಾಜೀನಾಮೆ ಅಂಗೀಕರಿಸಿದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಬ್ಲೋಟ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ‘FRS ವ್ಯವಸ್ಥೆ’ ಜಾರಿ: ನಕಲಿ ಫಲಾನುಭವಿಗಳಿಗೆ ಬ್ರೇಕ್