ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಸಿಕಂದರಾಬಾದ್-ಮೈಸೂರು ನಡುವೆ ದ್ವಿ-ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಇದಲ್ಲದೇ ವಿಶೇಷ ರೈಲುಗಳ ಸೇವೆ ರದ್ದುಗೊಳಿಸಲಾಗಿದೆ.
I. ಸಿಕಂದರಾಬಾದ್-ಮೈಸೂರು ನಡುವೆ ದ್ವಿ-ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರ
ಮುಂಬರುವ ರಕ್ಷಾ ಬಂಧನ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಚತುರ್ಥಿ/ವಿನಾಯಕ ಚತುರ್ಥಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ದಕ್ಷಿಣ ಮಧ್ಯ ರೈಲ್ವೆಯು ಸಿಕಂದರಾಬಾದ್ ಮತ್ತು ಮೈಸೂರು ನಡುವೆ ಪ್ರತಿ ದಿಕ್ಕಿನಲ್ಲಿ ನಾಲ್ಕು ಟ್ರಿಪ್‌ಗಳ ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಸಂಚರಿಸಲು ಸೂಚಿಸಿದೆ. ಅವುಗಳ ವಿವರ ಈ ಕೆಳಗಿನಂತಿವೆ:
ರೈಲು ಸಂಖ್ಯೆ 07033/07034 ಸಿಕಂದರಾಬಾದ್ – ಮೈಸೂರು – ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ (4 ಟ್ರಿಪ್).
ಆಗಸ್ಟ್ 8, 11, 18 ಮತ್ತು 29, 2025 ರಂದು ರೈಲು ಸಂಖ್ಯೆ 07033 ಸಿಕಂದರಾಬಾದ್ – ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲು ಸಿಕಂದರಾಬಾದ್‌ನಿಂದ 22:10 ಗಂಟೆಗೆ ಹೊರಟು, ಮರುದಿನ 16:00 ಗಂಟೆಗೆ ಮೈಸೂರು ತಲುಪಲಿದೆ.
ಹಿಂದಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 07034 ಮೈಸೂರು – ಸಿಕಂದರಾಬಾದ್ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್ 9, 12, 19 ಮತ್ತು 30, 2025 ರಂದು ಮೈಸೂರಿನಿಂದ 17:20 ಗಂಟೆಗೆ ಹೊರಟು, ಮರುದಿನ 11:00 ಗಂಟೆಗೆ ಸಿಕಂದರಾಬಾದ್ ನಿಲ್ದಾಣಕ್ಕೆ ತಲುಪಲಿದೆ.
ಮಾರ್ಗಮಧ್ಯದಲ್ಲಿ, ಈ ರೈಲು ಬೇಗಂಪೇಟೆ, ಲಿಂಗಂಪಲ್ಲಿ, ವಿಕರಾಬಾದ್, ತಾಂಡೂರು, ಸೇಡಂ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ಬೆಂಗಳೂರು ಕ್ಯಾಂಟ್, ಕೆಎಸ್‌ಆರ್ ಬೆಂಗಳೂರು, ಕೆಂಗೇರಿ ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ರೈಲು 22 ಬೋಗಿಗಳನ್ನು ಒಳಗೊಂಡಿರುತ್ತದೆ, ಅವುಗಳೆಂದರೆ 02 ಎಸಿ 2-ಟೈಯರ್, 07 ಎಸಿ 3-ಟೈಯರ್, 09 ಸ್ಲೀಪರ್ ಕ್ಲಾಸ್, 02 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್‌ಎಲ್‌ಆರ್‌ಡಿ ಬೋಗಿಗಳು ಹೊಂದಿರುತ್ತದೆ.
II. ವಿಶೇಷ ರೈಲುಗಳ ಸೇವೆ ರದ್ದು
ಕಡಿಮೆ ಪ್ರಯಾಣಿಕರ ಸಂಖ್ಯೆ ಮತ್ತು ಕಡಿಮೆ ಆಸನ ಭರ್ತಿಯ ಕಾರಣದಿಂದ, ದಕ್ಷಿಣ ಮಧ್ಯ ರೈಲ್ವೆಯು ವಿಶೇಷ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಸೂಚಿಸಿದೆ.
ರೈಲು ಸಂಖ್ಯೆ 07069/07070 ಹೈದರಾಬಾದ್ – ಅರಸೀಕೆರೆ – ಹೈದರಾಬಾದ್ ಸಾಪ್ತಾಹಿಕ ವಿಶೇಷ ಹಾಗೂ ರೈಲು ಸಂಖ್ಯೆ 07079/07080 ಸಿಕಂದರಾಬಾದ್ – ಅರಸೀಕೆರೆ – ಸಿಕಂದರಾಬಾದ್ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರವನ್ನು ಉಲ್ಲೇಖಿಸಲಾದ ದಿನಾಂಕಗಳಂದು ರದ್ದುಪಡಿಸಲಾಗಿದೆ.
ಮಂಗಳವಾರದಂದು ಹೈದರಾಬಾದ್‌ನಿಂದ ಅರಸೀಕೆರೆಗೆ ಚಲಿಸುವ ರೈಲು (07069) ಆಗಸ್ಟ್ 12, 19 ಮತ್ತು 26, 2025 ರಂದು, ಬುಧವಾರದಂದು ಕಾರ್ಯನಿರ್ವಹಿಸುವ ಅರಸೀಕೆರೆಯಿಂದ ಹೈದರಾಬಾದ್‌ಗೆ ಹೋಗುವ ರೈಲು (07070) ಆಗಸ್ಟ್ 13, 20 ಮತ್ತು 27, 2025 ರಂದು ರದ್ದುಗೊಳ್ಳಲಿದೆ. ಅದೇ ರೀತಿ, ಭಾನುವಾರದಂದು ಸಿಕಂದರಾಬಾದ್‌ನಿಂದ ಅರಸೀಕೆರೆಗೆ ಚಲಿಸುವ ರೈಲು (07079) ಆಗಸ್ಟ್ 10, 17, 24 ಮತ್ತು 31, 2025 ರಂದು ಮತ್ತು ಅರಸೀಕೆರೆಯಿಂದ ಸಿಕಂದರಾಬಾದ್‌ಗೆ ಸೋಮವಾರದಂದು ಸಂಚರಿಸುವ ರೈಲು (ಸಂಖ್ಯೆ 07080) ಆಗಸ್ಟ್ 11, 18, 25 ಮತ್ತು ಸೆಪ್ಟೆಂಬರ್ 1, 2025 ರಂದು ರದ್ದುಗೊಳ್ಳಲಿದೆ.
ಪಾರಿವಾಳಗಳಿಗೆ ಆಹಾರ ನೀಡುವುದರ ಮೇಲಿನ ಹೈಕೋರ್ಟ್ ನಿಷೇಧವನ್ನು ರದ್ದಿಗೆ ಸುಪ್ರೀಂ ಕೋರ್ಟ್ ನಕಾರ
ನಾನು ರಾಜೀನಾಮೆ ಕೊಟ್ಟಿದ್ದೇನೋ ಇಲ್ಲವೋ ಎಂಬುದನ್ನು ಸಿಎಂ ಮಾಹಿತಿ: ಸಚಿವ ಕೆ.ಎನ್ ರಾಜಣ್ಣ