ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಒಂದು ಕಡೆ ಹೂತಿಟ್ಟ ಶವಗಳಿಗಾಗಿ ಎಸ್ಐಟಿ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಮತ್ತೊಂದೆಡೆ 38 ವರ್ಷಗಳ ಹಳೆಯದಾದಂತ ಪದ್ಮಲತಾ ಪ್ರಕರಣವನ್ನು ತನಿಖೆ ನಡೆಸುವಂತೆ ಎಸ್ಐಟಿ ಭೇಟಿಯಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಧರ್ಮಸ್ಥಳದ ಬೋಳಿಯಾರ್ ನಿವಾಸಿಯಾಗಿದದಂತ ಪದ್ಮಲತಾ ಕಾಲೇಜಿಗೆ ತೆರಳುತ್ತಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದಳು. ಆಕೆಯ ಶವವು 57 ದಿನಗಳ ಬಳಿಕ ಪತ್ತೆಯಾಗಿತ್ತು. ಈ ಬಗ್ಗೆ ಈ ಹಿಂದೆ ಸಿಐಡಿ ತನಿಖೆ ನಡೆಸಿತ್ತು. ಈಗ ಎಸ್ಐಟಿ ಕೂಡ ತನೆಗೆ ನಡೆಸಬೇಕು ಎಂಬುದಾಗಿ ಪದ್ಮಲತಾ ಸಹೋದರಿ ಇಂದ್ರಾವತಿ ಎಸ್ಐಟಿ ಅಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಬೆಳಗಾವಿಯಲ್ಲಿ ಹಾಡಹಗಲೇ ಸಂತೆಯಲ್ಲಿ ಯುವಕನ ಬರ್ಬರ ಕೊಲೆ