ಬೆಂಗಳೂರು : ರಾಜ್ಯದ ದೇವಸ್ಥಾನಗಳ ಅಸ್ತಿ ಕಬಳಿಸಿದವರಿಗೆ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಶೀಘ್ರವೇ ಮುಜರಾಯಿ ಇಲಾಖೆಯಿಂದ ಬರೋಬ್ಬರಿ 4,000 ಎಕರೆ ಭೂಮಿ ಮರುಸ್ವಾಧೀನಕ್ಕೆ ಗುರುತು ಮಾಡಲಾಗಿದೆ.
ಹೌದು, ರಾಜ್ಯದ ನಾನಾ ದೇವಾಲಯಗಳ ಮತ್ತು ಧಾರ್ಮಿಕ ಸಂಸ್ಥೆಗಳ ಪರಭಾರೆಯಾಗಿದ್ದ ಸುಮಾರು 4 ಸಾವಿರ ಎಕರೆ ಪ್ರದೇಶವನ್ನು ಗುರುತಿಸಿ, ಸ್ಕೆಚ್ನೊಂದಿಗೆ ಮುಜರಾಯಿ ಇಲಾಖೆಯು ಅಂತಿಮ ಅಧಿಸೂಚನೆಗೆ ಸರಕಾರಕ್ಕೆ ಶಿಫಾರಸು ಮಾಡಿದೆ.ಹಾಸನ, ಚಿಕ್ಕಮಗಳೂರು, ಕಲಬುರಗಿ, ತುಮಕೂರು, ಮೈಸೂರು, ಮಂಡ್ಯ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಸಾವಿರಾರು ಎಕರೆ ಭೂಮಿ ಒತ್ತುವರಿಯಾಗಿದೆ.
ಈ ಜಮೀನುಗಳ ಸರ್ವೆ, ಸ್ಕೆಚ್ ಮಾಡಿಸಿ, ತಹಸೀಲ್ದಾರ್/ಡಿಡಿಎಲ್ಆರ್ಗಳಿಂದ ಪ್ರಮಾಣೀಕರಿಸಿ ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್ಮೆಂಟ್ ಸಿಸ್ಟಂ (ಐಟಿಎಂಎಸ್)’ ವೆಬ್ಸೈಟ್ನಲ್ಲಿ ಪ್ರಕಟಿಸಿ ಗೆಜೆಟ್ ಅಧಿಸೂಚನೆಯೊಂದಿಗೆ ದೇವಸ್ಥಾನಗಳ ಆಸ್ತಿಯನ್ನು ಶಾಶ್ವತವಾಗಿ ಉಳಿಸಲು ಮುಜರಾಯಿ ಇಲಾಖೆ ಸಜ್ಜಾಗಿದೆ.