ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಸಮಾಧಿ ಸ್ಥಳ ನೆಲಸಮ ಮಾಡಿರೋದು ವಿವಾಧಕ್ಕೆ, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ನಟ ಅನಿರುದ್ಧ್ ಅವರು ದಯವಿಟ್ಟು ಅಭಿಮಾನಿಗಳು ದೂರ ಆಗಬೇಡಿ. ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡಬೇಡಿ ಎಂಬುದಾಗಿ ಮನವಿ ಮಾಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ನಮಗೆ ನಟ ವಿಷ್ಣುವರ್ಧನ್ ಅವರನ್ನು ಸಮಾಧಿ ಮಾಡಿ, ಆ ಬಳಿಕ ನಿರ್ಮಾಣ ಮಾಡಿದ್ದಂತ ಸ್ಮಾರಕ ಸ್ಥಳದ ಜಾಗ ವಿವಾದಾತ್ಮಕವಾಗಿತ್ತು ಎಂಬುದು ನನಗೆ ಗೊತ್ತಿರಲಿಲ್ಲ. ನಾವು ಅಲ್ಲೇ ಹೋಗಿ ಸ್ಮಾರಕ ಮಾಡಬೇಕು ಎಂದುಕೊಂಡಿದ್ದೆವು ಎಂದರು.
ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದಂತ ಗೌರವ ಇದೆ. ಈ ಹಿನ್ನಲೆಯಲ್ಲಿಯೇ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಗೌರವಯುತವಾಗಿ ಮಾಡಿ ಎಂಬುದಾಗಿ ಕುಮಾರಸ್ವಾಮಿ, ದೇವೇಗೌಡರು ಹೇಳಿದ್ದರು. ಅದಕ್ಕೆ ನಾವು ಒಪ್ಪಿಕೊಂಡಿದ್ದೆವು ಎಂದರು.
ದಯವಿಟ್ಟು ಯಾವುದೇ ಅಭಿಮಾನಿಗಳು ದೂರ ಆಗಬೇಡಿ. ಅಲ್ಲದೇ ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡಬೇಡಿ. ಏನೇ ಇದ್ದರೂ ನನ್ನನ್ನೇ ನೇರವಾಗಿ ಸಂಪರ್ಕಿಸಿ. ಅಭಿಮಾನಿಗಳ ಪ್ರಯತ್ನದಿಂದ ಬೆಂಗಳೂರಲ್ಲೇ ಸ್ಮಾರಕ ಆದರೇ ತುಂಬಾ ಒಳ್ಳೇಯದು. ಈ ಬಗ್ಗೆ ಬೇಕಿದ್ದರೇ ಸರ್ಕಾರದ ಬಳಿ ಮಾತನಾಡಲು ನಾನು ನಾವು ಸಿದ್ದರಿದ್ದೇವೆ ಎಂಬುದಾಗಿ ತಿಳಿಸಿದರು.
ಜನರು ‘Google’ನಲ್ಲಿ ಹುಡುಕಿದ ವಿಚಿತ್ರ ವಿಷಯಗಳು ಏನು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಬೆಂಗಳೂರಲ್ಲಿ ಮರದ ಕೊಂಬೆ ಮುರಿದು ವೃದ್ಧನ ಸೊಂಟದ ಮೂಳೆ ಮುರಿತ : ‘BBMP’ ಸಿಬ್ಬಂದಿ ವಿರುದ್ಧ ‘FIR’ ದಾಖಲು