ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್.15, 2025ರಂದು ಶಾಲಾ ಕಾಲೇಜುಗಳಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಅಸಂಖ್ಯಾತ ಜನರ ಹೋರಾಟ, ತ್ಯಾಗ, ಬಲಿದಾನದಿಂದ ಪಡೆದುಕೊಂಡ ಸ್ವಾತಂತ್ಯಕ್ಕೆ ಕಾರಣರಾದ ಎಲ್ಲರನ್ನೂ ಸದಾ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಇಂದಿನ ನಮ್ಮ ಸಂಭ್ರಮಕ್ಕೆ ತಳಪಾಯವಾಗಿ, ಮೆಟ್ಟಿಲುಗಳಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಎಲ್ಲರನ್ನು ಮರೆಯದೆ ಸದಾ ಸ್ಮರಿಸುತ್ತಾ ಭವ್ಯ ಭಾರತವನ್ನು ಕಟ್ಟುವಲ್ಲಿ ನಮ್ಮ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸಬೇಕಿದೆ ಎಂದಿದ್ದಾರೆ.
ದೇಶಾದ್ಯಂತ ಭಾರತದ ಸ್ವಾತಂತ್ರ್ಯದ 75ರ ಅಮೃತ ಮಹೋತ್ಸವದ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರ್ಕಾರವು ಪ್ರತಿ ವರ್ಷ “ಹರ್ ಘರ್ ತಿರಂಗಾ” ಎಂಬ ಘೋಷ ವಾಕ್ಯದೊಂದಿಗೆ 2025ರ ಸ್ವಾತಂತ್ರ್ಯ ದಿನವನ್ನು ಪ್ರತಿ ಮನೆ-ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ಮತ್ತು ಅದರ ಸೆಲ್ಸಿ ಫೋಟೋವನ್ನು ದಿನಾಂಕ:13.08.2025 ರಿಂದ ದಿನಾಂಕ:15.08.2025 ರೊಳಗೆ Photo upload ಮಾಡುವಂತೆ, ಕ್ರಮವಹಿಸುವುದು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು, ಮಕ್ಕಳು, ಶಿಕ್ಷಣ ಇಲಾಖೆಯ ಎಲ್ಲಾ ಸ್ತರದ ಸಿಬ್ಬಂದಿಗಳು ಹಾಗೂ ಅವರ ಕುಟುಂಬ ವರ್ಗದವರು ಸೇರಿ ಸ್ವತ: ತಾವೇ ಕ್ರಿಯಾಶೀಲರಾಗಿ ಭಾಗವಹಿಸುವಂತೆ ಪ್ರೇರೇಪಿಸುವುದು. ಹರ್ ಘರ್ ತಿರಂಗ ಚಟುವಟಿಕೆಗಳನ್ನು ದಿನಾಂಕ:02.08.2025 ರಿಂದ 15.08.2025ರ ವರೆಗೆ ಹಮ್ಮಿಕೊಳ್ಳುವುದು ಎಂಬುದಾಗಿ ಸೂಚಿಸಿದ್ದಾರೆ.
ಶಾಲಾ/ಕಾಲೇಜುಗಳ ಹಂತದಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರು ಕೆಳಕಂಡಂತೆ ಕ್ರಮವಹಿಸುವುದು.
ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:
1. ತಿರಂಗಾ ಶೈಲಿಯ ಕಲೆಗಳಿಂದ ಶಾಲೆಯ ಗೋಡೆಗಳು ಮತ್ತು ಫಲಕಗಳನ್ನು ಅಲಂಕರಿಸುವುದು.
2. ತಿರಂಗಾ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸುವುದು.
3. ತಿರಂಗಾ ರಾಖಿ ತಯಾರಿಕೆಯ ಸ್ಪರ್ಧೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವುದು.
4. ತಿರಂಗಾ ದಿನದ ಮಹತ್ವವನ್ನು ಆಚರಿಸುವಂತೆ ಜವಾನರು ಮತ್ತು ಪೊಲೀಸ್ ಸಿಬ್ಬಂದಿಗೆ ಸ್ಪಿರಿಟ್ ಆಫ್ ತಿರಂಗವನ್ನು ಉತ್ತೇಜಿಸಲು ಪತ್ರ ಬರೆಯುವುದು
5. ಶಾಲೆಗಳಿಂದ ಜವಾನರು ಮತ್ತು ಪೊಲೀಸ್ ಸಿಬ್ಬಂದಿಗೆ ಬರೆದಿರುವ ಪತ್ರಗಳನ್ನು ಸಂಗ್ರಹಿಸುವುದು ಮತ್ತು ಜವಾನರು ಮತ್ತು ಪೊಲೀಸ್ ಸಿಬ್ಬಂದಿಗೆ ವಿತರಿಸುವುದು.
6. ‘ಹರ್ ಘರ್ ತಿರಂಗಾ’ ರಾಷ್ಟ್ರೀಯ ಕ್ವಿಜ್ನಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಿ. https://quiz.mygov.in/quiz/har-ghar-tiranga-quiz-2025/ ನಲ್ಲಿ ಅಪ್ ಲೋಡ್ ಮಾಡುವುದು.
7. ಶಾಲೆಗಳು ಮತ್ತು ಸಂಸ್ಥೆಗಳಲ್ಲಿ ಪ್ರದರ್ಶನವನ್ನು ಆಯೋಜಿಸುವುದು. https://harghartiranga.com ವೆಬ್ ಪೋರ್ಟಲ್ನಲ್ಲಿ ಬಿಂಬಿಸುವುದು.
8. ಕೈಯಲ್ಲಿ ತಿರಂಗಾ ಧ್ವಜ ಅಥವಾ ತಿರಂಗಾ ಬಣ್ಣದ ಬಟ್ಟೆ ಹಿಡಿದು ತಿರಂಗ Rally ಗಳನ್ನು ಆಯೋಜಿಸಿ ಮಾನವ ಸರಪಳಿಯನ್ನು ರಚಿಸುವುದು.
9. Flag hoisting ceremonies ಗಳನ್ನು ದಿನಾಂಕ:13.08.2025 ರಿಂದ 15.08.2025ರ ವರೆಗೆ ಶಾಲೆಗಳಲ್ಲಿ ಆಯೋಜಿಸುವುದು.
10. ತಿರಂಗಾ ಧ್ವಜದೊಂದಿಗೆ ಸೆಲ್ಪಿ ತೆಗೆದು www.harghartiranga.com ವೆಬ್ಸೈಟ್ಗೆ ಅಪ್ಲೋಡ್ ಮಾಡುವುದು
Volunteers for Har Ghar Tiranga
1. ವಿದ್ಯಾರ್ಥಿಗಳನ್ನು ‘ಹರ್ ಘರ್ ತಿರಂಗಾ’ ಹಬ್ಬದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಲು ಉತ್ತೇಜಿಸಿ, ತಿರಂಗಾ ಧ್ವಜದ ಸಂದೇಶವನ್ನು ಮನೆಮನೆಗೆ ತಲುಪಿಸಿ ಮತ್ತು ಇತರರನ್ನು ಧ್ವಜಾರೋಹಣ ಮಾಡಲು ಪ್ರೇರೇಪಿಸಿ, ತಿರಂಗಾ ಧ್ವಜದೊಂದಿಗೆ ಸೆಲ್ಪಿಗಳನ್ನು ಅಪ್ಲೋಡ್ ಮಾಡುವಂತೆ ಪ್ರೇರೇಪಿಸುವುದು.
2. ನೋಂದಣಿ www.harghartiranga.com web portal ನಲ್ಲಿ ನೋಂದಾಯಿಸುವುದು.
3.ನೋಂದಣಿ ಮಾಡಿಕೊಂಡ ಸ್ವಯಂಸೇವಕರು ವೆಬ್ಸೈಟ್ನಿಂದ ಸ್ವಯಂಸೇವಕ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
4. ಉನ್ನತ 10 ಸ್ವಯಂಸೇವಕರನ್ನು ಆಗಸ್ಟ್ 15ರ ಕಾರ್ಯಕ್ರಮಗಳಿಗೆ ಅಥವಾ ನಂತರದ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನಿಸಬಹುದಾಗಿದೆ.
“ಹರ್ ಘರ್ ತಿರಂಗಾ” ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಭಾಗವಹಿಸಿದ ಬಗ್ಗೆ ರಾರ್ಷ್ಟಧ್ವಜದೊಂದಿಗೆ ಭಾವಚಿತ್ರಗಳನ್ನು ತೆಗೆದು (selfies with Tiranga) www.harghartiranga.com ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲು ಪ್ರೋತ್ಸಾಹಿಸುವುದು.
ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ರವರು ತಮ್ಮ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ “ಹರ್ ಘರ್ ತಿರಂಗಾ” ಅಭಿಯಾನ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ರಾಷ್ಟ್ರಧ್ವಜವನ್ನು ಹಾರಿಸಿ ಮತ್ತು ಅದರ ಸೆಲ್ಸಿ ಫೋಟೋವನ್ನು ಅಪ್ ಲೋಡ್ ಮಾಡಿ ದೇಶಭಕ್ತಿಯನ್ನು ಬಿಂಬಿಸುವAತೆ ಕ್ರಮವಹಿಸಿ ಕೈಗೊಂಡ ಕ್ರಮದ ಬಗ್ಗೆ ಭಾವಚಿತ್ರ ಸಹಿತ ವರದಿಯನ್ನು innovativessk2022@gmail.com E-mail idಗೆ ದಿನಾಂಕ:20.08.2025 ರೊಳಗಾಗಿ ಕಡ್ಡಾಯವಾಗಿ ಕಳುಹಿಸುವಂತೆ ಸೂಚಿಸಿದ್ದಾರೆ.