ಬೆಂಗಳೂರು : ಹಿರಿಯ ನಟ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಅಭಿಮಾನ್ ಸ್ಟೂಡಿಯೋದಿಂದ ರಾಜ್ಯ ಹೈಕೋರ್ಟ್ ಆದೇಶದಂತೆ ತೆರವುಗೊಳಿಸಲಾಗಿದೆ ಎಂದು ವಕೀಲ ಕಾರ್ತಿಕ್ ವಿ. ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ವರ್ಷದ ಜನವರಿ 13 ರಂದು ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕ ಸದಸ್ಯ ಪೀಠ ಸಮಾಧಿ ಸ್ಥಳವನ್ನು ತೆರುವುಗೊಳಿಸುವಂತೆ ಆದೇಶ ನೀಡಿತ್ತು. ಆದ್ಯತೆಯ ಮೇರೆಗೆ ಸಮಾಧಿ ತೆರವುಗೊಳಿಸುವಂತೆ ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ನಗರದ ವಿಶೇಷ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು ಎಂದಿದ್ದಾರೆ.
ಬಾಲಕೃಷ್ಣ ಅವರ ಮೊಮ್ಮಗ ಬಿ.ಎಸ್. ಕಾರ್ತಿಕ್ ಕಾನೂನು ಹೋರಾಟ ನಡೆಸಿದ್ದರು. ನ್ಯಾಯಾಲಯದ ಆದೇಶದಂತೆ ಎರಡು ತಿಂಗಳ ನಂತರವೂ ಸಮಾಧಿ ಸ್ಥಳವನ್ನು ತೆರವುಗೊಳಿಸಿರಲಿಲ್ಲ. ಆದರೆ ಕಳೆದ 2020 ರ ಜನವರಿ 10 ರಂದು ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಮೈಸೂರಿಗೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ 2.5 ಎಕರೆ ಭೂಮಿಯನ್ನು ಸಹ ಸರ್ಕಾರ ಮಂಜೂರು ಮಾಡಿತ್ತು ಎಂದು ಅವರು ಹೇಳಿದ್ದಾರೆ.
ಆದೇಶ ನೀಡಿದ ಎರಡು ತಿಂಗಳಲ್ಲಿ ಸಮಾಧಿ ಸ್ಥಳವನ್ನು ತೆರವು ಮಾಡದ ಕಾರಣ ನ್ಯಾಯಾಲಯದ ಆದೇಶದಂತೆ ಪೊಲೀಸರ ಸಮ್ಮುಖದಲ್ಲಿ ಸಮಾಧಿ ಸ್ಥಳವನ್ನು ತೆರವು ಮಾಡಲಾಗಿದೆ ಎಂದು ವಕೀಲರಾದ ಕಾರ್ತಿಕ್ ವಿ ತಿಳಿಸಿದ್ದಾರೆ.
ನಾಟಿ ಔಷಧಿಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ನೀಡಿ: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಗ್ರಹ
SHOCKING : ರಾಜಸ್ಥಾನದಲ್ಲಿ `ರಾಕ್ಷಸಿ ಕೃತ್ಯ’ : ಬೀದಿ ನಾಯಿಗಳನ್ನು ಬೆನ್ನಟ್ಟಿ ಗುಂಡು ಹಾರಿಸಿ ಬರ್ಬರ ಹತ್ಯೆ.!