ಬೆಂಗಳೂರು: ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡಿ ಲೋಕತಂತ್ರ ನಿಷ್ಕ್ರಿಯ ಮಾಡಲು ಹೊರಟಿದ್ದಾರೆ. ತಾವು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗಕ್ಕೆ ಅಫಿಡವಿಟ್ ಕೊಡದೇ ಪಲಾಯನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಯಾವರೀತಿ ಕರ್ತವ್ಯ ಮಾಡುತ್ತದೆ. ಜನಪ್ರತಿನಿಧಿ ಕಾಯ್ದೆ ಏನು ಹೇಳುತ್ತದೆ. ಎನ್ನುವುದು ರಾಹುಲ್ ಗಾಂಧಿಯವರಿಗೆ ಗೊತ್ತಿದೆಯೊ ಗೊತ್ತಿಲ್ಲವೊ ಅಥವಾ ಗೊತ್ತಿದ್ದು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಸಂವಿಧಾನ ಬದ್ದ ಸಂಸ್ಥೆಗಳ ಮೇಲೆ ಆರೊಪ ಮಾಡಿ ಲೋಕತಂತ್ರವನ್ನು ನಿಷ್ಕ್ರೀಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಬಾರಿ ಸೋತಿದ್ದರಿಂದ ರಾಹುಲ್ ಗಾಂಧಿ ನಾಯಕತ್ವದ ಮೇಲೆ ಕಾಂಗ್ರೆಸ್ ನಲ್ಲಿ ಅಪಸ್ವರ ಇದೆ. ಅದನ್ನು ಮರೆಮಾಚಲು ರಾಹುಲ್ ಗಾಂಧಿ ಸಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಡೇಂಜರಸ್ ಗೇಮ್ ಆಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತಹ ಆಟ ಆಡುತ್ತಿದ್ದಾರೆ ಜನರಿಗೆ ಇದು ಗೊತ್ತಿಗುತ್ತಿದೆ ಎಂದರು.
ಪ್ರತಿ ಚುನಾವಣೆಯಲ್ಲಿ ಹೊಸ ಮತದಾರರು ಸೇರಿಸುತ್ತಲೇ ಬಂದಿದ್ದಾರೆ. ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ 2009 ರಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಸೇರ್ಪಡೆಯಾಗಿದ್ದಾರೆ. ಆಗ ಯುಪಿಎ ಸರ್ಕಾರ ಇತ್ತು. ಯುಪಿಎ ಸರ್ಕಾರ ಹೆಚ್ಚು ಮಾಡಿದೆ ಎಂದು ಯಾರಾದರು ಆರೋಪ ಮಾಡಿದ್ದರಾ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದರು. ಅದರ ಬಗ್ಗೆ ಗುಮಾನಿ ಎದ್ದಿತು. ಹಾಗಿದ್ದರೆ ಅವರು ಗೋಲ್ ಮಾಲ್ ಮಾಡಿದ್ದರಾ ? ಅದನ್ನು ಯಾರೂ ಪ್ರಶ್ನೆ ಮಾಡಿಲ್ಲ. ಮಹದೇವ ಪುರದಲ್ಲಿ ಒಂದು ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ. ಅವರಲ್ಲಿ ಎಷ್ಟು ಜನ ಯಾರಿಗೆ ಮತ ಹಾಕಿದ್ದಾರೆ ಎಂದು ಯಾರಿಗಾದರೂ ಗೊತ್ತಿದಿಯಾ ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗ ಪ್ರತಿ ಬೂತನಲ್ಲಿ ಏಜೆಂಟ್ ಒನ್ ಏಜೆಂಟ್ 2 ಅಂತ ಎಲ್ಲ ಪಕ್ಷದವನ್ನೂ ನೇಮಿಸುತ್ತದೆ. ಅವರನ್ನು ಮುಂದಿಟ್ಡುಕೊಂಡು ಮತದಾರರ ಪಟ್ಟಿ ಸೇರಿಸುತ್ತಾರೆ. ಆಗ ಕಾಂಗ್ರೆಸ್ ಏಜೆಂಟರು ಇರಲಿಲ್ಲವಾ ? ರಾಹುಲ್ ಗಾಂಧಿ ಅವರನ್ನು ಕೇಳಬೇಕಿತ್ತು. ಚುನಾವಣಾ ಆಯೋಗ ಅದನ್ನು ರಾಹುಲ್ ಗಾಂಧಿಯನ್ನು ಕೇಳಿತ್ತು. ಅವರಿಗೇ ಈಗಲೂ ಆಯೋಗ ಅಫಿಡವಿಟ್ ಕೊಡಿ ಅಂತ ಕೇಳಿದ್ದಾರೆ ಅವರು ಹಿಟ್ ಆಂಡ್ ರನ್ ಮಾಡುತ್ತಿದ್ದಾರೆ. ಅವರಿಗೆ ಸತ್ಯ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಆಯೋಗಕ್ಕೆ ಅಫಿಡವಿಟ್ ಕೊಡಲಿ
ರಾಹುಲ್ ಗಾಂಧಿ ಪ್ರತಿನಿಧಿಸಿದ್ದ ವಯನಾಡು ಕ್ಷೇತ್ರದ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಿ. ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿದ್ದಕ್ಕೆ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡಿರುವುದಕ್ಕೆ ರಾಹುಲ್ ಗಾಂಧಿ ಜವಾಬ್ದಾರಿ ಹೆಚ್ಚಿದೆ ಅವರು ದಾಖಲೆ ನೀಡಬೇಕು. ಕಾಂಗ್ರೆಸ್ ನವರು ಎನ್ ಜಿಒ ಗಳಿಗೆ ಔಟ್ ಸೋರ್ಸ್ ಮಾಡಿದ್ದಾರೆ. ಅವರು ಕೊಟ್ಟ ಮಾಹಿತಿ ಆಧಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವಿಎಂ ಆರೋಪ ಮಾಡಿದ್ದರು ಅದರಲ್ಲಿ ಸತ್ಯ ಹೊರ ಬಿದ್ದ ಮೇಲೆ ಅವರು ಇಗ ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಬೆಂಗಳೂರಿನಲ್ಲಿಯೇ ಇದ್ದರೂ ಚುನಾವಣಾ ಆಯೋಗಕ್ಕೆ ಆಪಿಡವಿಟ್ ಕೊಡಲು ಯಾಕೆ ಹೊಗಲಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಮತ ಕಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಮೋದಿಯವರು ನಿನ್ನೆ ಇವತ್ತು ರಾಜಕಾರಣಕ್ಕೆ ಬಂದಿಲ್ಲ. ಗುಜರಾತ್ ನಲ್ಲಿ ನಾಲ್ಕು ಬಾರಿ ಸಿಎಂ ಆಗಿ, ಎರಡು ಬಾರಿ ಪ್ರಧಾನಿ ಆಗಿದ್ದವರು. ಅವರು ಆ ರೀತಿ ರಾಜಕಾರಣ ಮಾಡುವುದಾಗಿದ್ದರೆ ಎನ್ ಡಿಎ ಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ 32 ಸ್ಥಾನ ಕಡಿಮೆಯಾಗಿದೆ. ಅಲ್ಲಿ ಕೇವಲ ಮೂವತ್ತು ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ. ಅಕ್ರಮವಾಗಿ ಗೆಲ್ಲಬೇಕೆಂದಿದ್ದರೆ ಅಷ್ಟು ಬಹುಮತ ಬರುವ ಹಾಗೆ ಗೆಲ್ಲುತ್ತಿದ್ದೆವು ಎಂದರು.
ರಾಜಕೀಯ ನಿವೃತ್ತಿ ಹೊಂದುತ್ತೀರಾ ಒಂದು ಕಡೆ ಮಹಾರಾಷ್ಟ್ರದಲ್ಲಿ ಪೇಕ್ ಮತದಾರರನ್ನು ಸೇರಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಸರಿ ಮಾಡುವ ಪ್ರಕ್ರಿಯೆ ಆರಂಭಿಸಿದರೆ ಅದನ್ನು ವಿರೋಧಿಸುತ್ತಾರೆ. ಚುನಾವಣಾ ಆಯೋಗ ಏನು ಮಾಡಬೇಕು. ನೀವು ಏನು ದಾಖಲೆ ಕೊಡುತ್ತೀರಿ ? ನೀವು ಮಾಡಿರುವ ಆರೋಪ ಸಾಬೀತಾಗದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೀರಾ ಎಂದು ಸವಾಲು ಹಾಕಿದರು.
ಬಿಜೆಪಿ ದುಡ್ಡು ಕೊಟ್ಡು ಶಾಸಕರನ್ನು ಖರಿದಿಸುತ್ತದೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸುವ ವ್ಯವಸ್ಥೆ ಆರಂಭಿಸಿರುವುದೇ ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶಮುಖ ಅವರ ಅವಧಿಯಲ್ಲಿ ಡಿಕೆ ಶಿವಕುಮಾರ್ ಅಲ್ಲಿನ ಶಾಸಕರನ್ನು ಇಟ್ಡುಕೊಂಡಿದ್ದರು. ಶಾಸಕರನ್ನು ಖರೀದಿಸುವ ವ್ಯವಸ್ಥೆ ಆರಂಭಿಸಿದವರೇ ಕಾಂಗ್ರೆಸ್ ನವರು ಎಂದು ಆರೋಪಿಸಿದರು.
ಡಾ. ಸುಧಾಕರ ವಿರುದ್ದ ರಾಜಕೀಯ ಪ್ರೇರಿತ ಆರೋಪ
ಚಿಕ್ಕಬಳ್ಳಾಪುರ ಸಂಸದ ಡಾ. ಸುಧಾಕರ್ ಅವರ ಮೇಲೆ ಕಾರ್ ಡ್ರೈವರ್ ಆತ್ಮಹತ್ಯೆ ಕೇಸ್ ಮಾಡಿಕೊಂಡ ಪ್ರಕರಣದಲ್ಲಿ ರಾಜಕೀಯ ದುರುದ್ದೇಶದಿಂದ ಎ1ಆರೋಪಿ ಎಂದು ಮಾಡಿದ್ದಾರೆ. ಪೊಲೀಸರು ಒತ್ತಡಕ್ಕೆ ರಾಜಕೀಯ ಒತ್ತಡಕ್ಕೆ ಮಣಿದು ಸುಧಾಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಅವರು ಯಾವುದೇ ಒತ್ತಡಕ್ಕೆ ಮಣಿಯದೇ ಮಣಿಯದೇ ತನಿಖೆ ಮಾಡಿ ಅದನ್ನು ಬಹಿರಂಗ ಪಡಿಸಬೇಕು ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನಮಗೆ ಹಕ್ಕಿದೆ. ಕೋರ್ಟಲ್ಲಿ ಹೋರಾಟ ಮಾಡುತ್ತೇವೆ. ಈ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ಬಹಳ ಸ್ಪಷ್ಟವಾಗಿದೆ ಎಂದು ಹೇಳಿದರು.
SHOCKING : ರಾಜಸ್ಥಾನದಲ್ಲಿ `ರಾಕ್ಷಸಿ ಕೃತ್ಯ’ : ಬೀದಿ ನಾಯಿಗಳನ್ನು ಬೆನ್ನಟ್ಟಿ ಗುಂಡು ಹಾರಿಸಿ ಬರ್ಬರ ಹತ್ಯೆ.!