ಬೆಂಗಳೂರು : ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ದಂಪತಿಗೆ ಜೀವ ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದೆ.
ಹೌದು, ಧರ್ಮಸ್ಥಳದ ಪ್ರಕರಣದ ವಿಚಾರವಾಗಿ ತಮಗೆ ಜೀವ ಬೆದರಿಕೆ ಸಂದೇಶ ಬರುತ್ತಿದೆ ಎಂದು ಆರೋಪಿಸಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಜತ್ & ಅಕ್ಷತಾ ದಂಪತಿ ದೂರು ನೀಡಿದ್ದಾರೆ.
ನಾವು ಯಾವುದೇ ಜಾತಿ, ಧರ್ಮದ ಬಗ್ಗೆ ಮಾತನಾಡಿಲ್ಲ. ಸೌಜನ್ಯ ಪರ ನ್ಯಾಯಕ್ಕಾಗಿ ಭೇಟಿ ನೀಡಿದ್ದೆವು. ನನ್ನನ್ನ ಕತ್ತರಿಸುತ್ತೀನಿ ಎಂದು ಕೆಲವರು ಬೆದರಿಕೆ ಹಾಕಿದರು. ನನ್ನೊಂದಿಗೆ ಇದ್ದ ಕೆಲವರು ಯೂಟ್ಯೂಬರ್ಸ್ ಗಳು ಹಲ್ಲೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ರಜತ್ ಹೇಳಿದ್ದಾರೆ.