ಬೆಂಗಳೂರು: ಸಾರಿಗೆ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದಂತ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಇಂದು ವಿಚಾರಣೆ ನಡೆಸಲಾಯಿತು. ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಸಾರಿಗೆ ನೌಕರರ ಮುಷ್ಕರಕ್ಕೆ ಮತ್ತೆ ಎರಡು ದಿನ ಬ್ರೇಕ್ ಹಾಕಿದೆ. ಹೀಗಾಗಿ ನಾಳೆಯಿಂದ ಎಂದಿನಂತೆ ಸಾರಿಗೆ ಬಸ್ ಸಂಚಾರ ಇರಲಿದೆ.
ಇಂದು ಸಾರಿಗೆ ಮುಷ್ಕರ ಪ್ರಶ್ನಿಸಿ ಸಲ್ಲಿಸಿದ್ದಂತ ಪಿಐಎಲ್ ಅನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಿತು. ಈ ವೇಳೆ ಮುಷ್ಕರದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂಬುದಾಗಿ ಎಜಿ ಕೋರ್ಟ್ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಪೀಠವು ರಾಜಿ ಸಂಧಾನದ ಮಾತುಕತೆ ಏನಾಗಿದೆ ಎಂಬುದಾಗಿ ಪ್ರಶ್ನಿಸಿತು. ಇಲ್ಲಿಯವರೆಗೆ ನಡೆಸ ಮಾತುಕತೆ ವಿವರಗಳನ್ನು ಎಜೆ ಹೈಕೋರ್ಟ್ ನ್ಯಾಯಪೀಠಕ್ಕೆ ನೀಡಿದರು. ಅಲ್ಲದೇ ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಕಾಯ್ದೆಯಂತೆ ಸಂಧಾನಸಭೆ ನಡೆಸಲಾಗ್ತಿದೆ ಎಂಬುದಾಗಿ ತಿಳಿಸಿದರು.
ಈ ವೇಳೆ ಸಾರಿಗೆ ಸಂಘಟನೆಗಳ ವಕೀಲರಿಗೆ ನ್ಯಾಯಾಂಗ ನಿಂದನೆಯ ಎಚ್ಚರಿಕೆಯನ್ನು ಹೈಕೋರ್ಟ್ ನೀಡಿತು. ಕಾರಣ ಇಂದು ಮುಷ್ಕರ ನಿಲ್ಲಿಸುವಂತೆ ಆದೇಶದ ನಡುವೆಯೂ ಸಾರಿಗೆ ಸಂಚಾರ ಸ್ಥಗಿತಗೊಳಿಸಿದ್ದಕ್ಕೆ ಸಿಜೆ ವಿಭು ಬಕ್ರು, ನ್ಯಾಯಮೂರ್ತಿ ಸಿ ಎಂ ಜೋಶಿ ಅವರಿದ್ದ ಹೈಕೋರ್ಟ್ ನ್ಯಾಯಪೀಠವು ಕೆಂಡಾಮಂಡಲವಾಯಿತು. ಅಲ್ಲದೇ ಮುಷ್ಕರ ನಿಲ್ಲಿಸಲಾಗಿದೆಯೇ ಎಂಬುದಾಗಿ ಪ್ರಶ್ನಿಸಿತು.
ಹೈಕೋರ್ಟ್ ನ್ಯಾಯಪೀಠದ ಪ್ರಶ್ನೆಗೆ ಸಾರಿಗೆ ನೌಕರರ ಸಂಘಟನೆಗಳ ಪರವಕೀಲರು ಇಲ್ಲ ಎಂದಾಗ ಗರಂ ಆಯಿತು. ಈ ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್, ಮುಷ್ಕರಕ್ಕೆ ನೀಡಿದ್ದಂತ ತಡೆಯಾಜ್ಞೆಯನ್ನು 2 ದಿನ ವಿಸ್ತರಣೆ ಮಾಡಿ ಆದೇಶಿಸಿದೆ.
ಎಸ್ಮಾ ಜಾರಿಯಾದರೂ ಮುಷ್ಕರ ನಡೆಸುವುದು ಕಾನೂನು ಬಾಹಿರವಾದದ್ದು. ಜನರಿಗೆ ನಿಮ್ಮ ಮುಷ್ಕರದಿಂದ ಸಮಸ್ಯೆ ಆಗಬಾರದು ಎಂಬುದಾಗಿ ಹೇಳಿ ನಾಲ್ಕು ಸಾರಿಗೆ ನಿಮಗಳ ನೌಕರರ ಸಂಘಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ವಿಚಾರಣೆಯನ್ನು ಆಗಸ್ಟ್.7ಕ್ಕೆ ಮುಂದೂಡಿದೆ.
ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ
BREAKING: ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿಧಿವಶ | Satyapal Malik No More