ಬೆಂಗಳೂರು: ರಾಜ್ಯದಲ್ಲಿ ಹೈಕೋರ್ಟ್ ಮುಷ್ಕರ ಸ್ಥಗಿತಗೊಳಿಸುವಂತೆ ನೀಡಿದಂತ ಆದೇಶದ ನಡುವೆಯೂ ಸಾರಿಗೆ ನೌಕರರು ಮುಂದುವರೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಾರಿಗೆ ಸಂಚಾರ ವ್ಯತ್ಯಯವಾಗಿದೆ. ಆದರೇ ಮುಷ್ಕರದ ನಡುವೆಯೂ ಕೆಲ ನೌಕರರು ಕರ್ತವ್ಯಕ್ಕೆ ಹಾಜರಾದ ಪರಿಣಾಮ 1 ಗಂಟೆಯವರೆಗೆ 8071 ಸಾರಿಗೆ ಬಸ್ಸುಗಳು ಸಂಚಾರ ನಡೆಸಿದ್ದಾವೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದ್ದು, ರಾಜ್ಯಾಧ್ಯಂತ ಶೇ.58.5ರಷ್ಟು ಸಾರಿಗೆ ಬಸ್ ಗಳ ಸಂಚಾರ ಮುಷ್ಕರ ನಡುವೆಯೂ ಸಂಚರಿಸುತ್ತಿವೆ. ಕೆ ಎಸ್ ಆರ್ ಟಿಸಿಯ 4670 ಬಸ್ ಸಂಚಾರದಲ್ಲಿ 2050 ಬಸ್ಸುಗಳು ರಸ್ತೆಗೆ ಇಳಿದಿವೆ ಎಂದಿದೆ.
ಇನ್ನೂ ಬಿಎಂಟಿಸಿಯ 3475 ಬಸ್ಸುಗಳಲ್ಲಿ 3468 ಬಸ್ಸುಗಳು 1 ಗಂಟೆಯ ವರೆಗೆ ಸಂಚರಿಸಿದ್ದಾವೆ. NWKRTCಯಿಂದ 2949 ಬಸ್ಸುಗಳಲ್ಲಿ 1752, KKRTCಯ 2691 ಬಸ್ ಸಂಚಾರದಲ್ಲಿ 801 ಬಸ್ಸುಗಳು ಸಂಚರಿಸಿದ್ದಾವೆ. ಒಟ್ಟು 13,785 ಬಸ್ಸುಗಳು ಸಂಚರಿಸಬೇಕಿತ್ತು. ಇವುಗಳಲ್ಲಿ ಇಂದು 8071 ಬಸ್ಸುಗಳು ಸಂಚಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾವೆ. ಸಾರಿಗೆ ನೌಕರರ ಮುಷ್ಕರದ ನಡುವೆಯೂ ಶೇ.58.5ರಷ್ಟು ಬಸ್ಸುಗಳು ರಸ್ತೆಗಿಳಿದಿವೆ ಎಂದು ಮಾಹಿತಿ ನೀಡಿದೆ.
BREAKING: ಸಾರಿಗೆ ನೌಕರರ ಮುಷ್ಕರದ ವೇಳೆ KSRTC ಬಸ್ಸುಗಳ ಮೇಲೆ ಕಲ್ಲು ತೂರಾಟ