ತುಮಕೂರು: ಲೋಕಾಯುಕ್ತ ದಾಳಿಯಲ್ಲಿ ಲಂಚ ಸ್ವೀಕಾರದ ವೇಳೆಯಲ್ಲಿ ಸಿಕ್ಕಿಬಿದ್ದಿದ್ದಂತ ಗ್ರಾಮ ಲೆಕ್ಕಾಧಿಕಾರಿಯನ್ನು ಕೋರ್ಟ್ ದೋಷಿ ಎಂಬುದಾಗಿ ಆದೇಶ ಪ್ರಕಟಿಸಿದೆ. ಅಲ್ಲದೇ ನಾಲ್ಕುವ ವರ್ಷ ಜೈಲು ಶಿಕ್ಷೆ, 20,000 ದಂಡ ವಿಧಿಸಿದೆ.
ಈ ಕುರಿತಂತೆ ತುಮಕೂರಿನ ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಯಾಸ್ಮೀನ್ ಪರವೀನ ಲಾಡಖಾನ, ಗೌರವಾನ್ವಿತ ನ್ಯಾಯಾಧೀಶರು, 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು ರವರು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣಾ ಮೊ.ನಂ: 09/2022 ಕಲಂ-7(3) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ-2018) ರ ಟ್ರ್ಯಾಪ್ ಪ್ರಕರಣವನ್ನು ನ್ಯಾಯಾಲಯದ ವಿಶೇಷ ಪ್ರಕರಣ ಸಂಖ್ಯೆ:908/2023 ರಲ್ಲಿ ವಿಚಾರಣೆ ನಡೆಸಿ, ಆರೋಪಿ ನಟರಾಜು.ಡಿ, ಗ್ರಾಮ ಲೆಕ್ಕಾಧಿಕಾರಿ, ಚನ್ನೇನಹಳ್ಳಿ ವೃತ್ತ, ಬೆಳ್ಳಾವಿ ಹೋಬಳಿ, ತುಮಕೂರು ತಾಲ್ಲೂಕು ರವರನ್ನು ದೋಷಿ ಎಂದು ಘೋಷಿಸಿ, ಈ ದಿನ ದಿನಾಂಕ:04/08/2025 ರಂದು ಆರೋಪಿಗೆ ಕಲಂ-7(೩) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ-2018) ರ ಅಡಿ “ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ದಂಡ, ದಂಡ ಕಟ್ಟಲು ವಿಫಲವಾದಲ್ಲಿ 06 ತಿಂಗಳ ಸಾದಾ ಕಾರಾಗೃಹ ಶಿಕ್ಷೆ” ವಿಧಿಸಿ ತೀರ್ಪು ಹೊರಡಿಸಿರುತ್ತಾರೆ. ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಪರವಾಗಿ ಶ್ರೀ ಆರ್.ಪಿ.ಪ್ರಕಾಶ್, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ, ತುಮಕೂರು ರವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ
ಶಿವಮೊಗ್ಗ ಜಿಲ್ಲೆ, ಭದ್ರಾವತಿ ನಗರದ ವಾಸಿಯಾದ ದೂರುದಾರ ಮಂಜುನಾಥ್.ಆರ್ ಮತ್ತು ಇವರ ಅಣ್ಣ ವಿಠಲ್ ರಾವ್ ರವರು ತುಮಕೂರು ತಾಲ್ಲೂಕು, ಬೆಳ್ಳಾವಿ ಹೋಬಳಿ, ಚನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್:127/2 ರ 1 ಎಕರೆ 6 ಗುಂಟೆ ಜಮೀನನ್ನು ಕ್ರಯಕ್ಕೆ ಖಲೀವಿಸಿದ್ದು, ಈ ಜಮೀನನ್ನು ಹೆಸರಿಗೆ ಖಾತೆ ಮಾಡುವಾಗ ವಿಸ್ತೀರ್ಣ ತೋರಿಸದೇ ಸೊನ್ನೆ ಎಂದು ತಪ್ಪಾಗಿ ನಮೂದಾಗಿದ್ದನ್ನು ಸಲಿಪಡಿಸಿಕೊಂಡುವಂತೆ ಚನ್ನೇನಹಳ್ಳಿ ಕಂದಾಯ ವೃತ್ತದ ಗ್ರಾಮಲೆಕ್ಕಾಧಿಕಾಲಿ ಯಾಗಿದ್ದ ಆರೋಪಿ- ನಟರಾಜು.ಡಿ ರವರಿಗೆ ಅರ್ಜಿ ಸಲ್ಲಿಸಿದ್ದು, ವಿಸ್ತೀರ್ಣ ತಪ್ಪಾಗಿರುವುದನ್ನು ಸರಿಪಡಿಸಲು 20 ಸಾವಿರ ಲಂಚಕ್ಕೆ ಒತ್ತಾಯಿಸಿ, ಮುಂಗಡವಾಗಿ 5,000/- ರೂ ಪಡೆದು, ಉಳಿಕೆ 15 ಸಾವಿರ ಲಂಚಕ್ಕೆ ಆರೋಪಿ- ನಟರಾಜು. ರವರು ಒತ್ತಾಯ ಮಾಡಿದ್ದರು.
ದೂರುದಾರರಾದ ಮಂಜುನಾಥ.ಆರ್ ರವರಿಗೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ ದಿನಾಂಕ:01/04/2022 ರಂದು ತುಮಕೂರು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಮಲ್ಲಿಕಾರ್ಜುನ ಚುಕ್ಕಿ, ಪೊಲೀಸ್ ಉಪಾಧೀಕ್ಷಕರು ರವರು ಪ್ರಕರಣ ದಾಖಲಿಸಿಕೊಂಡಿದ್ದು, ಎಸ್.ವಿಜಯಲಕ್ಷ್ಮೀ, ಪೊಲೀಸ್ ನಿರೀಕ್ಷಕರು ರವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು, ವಿನಾಂಕ:01/04/2022 ರಂದು ಮದ್ಯಾಹ್ನ 01.30 ಗಂಟೆ ಸಮಯದಲ್ಲಿ ಬೆಳ್ಳಾವಿ ಉಪತಹಶೀಲ್ದಾರ್ ರವರ ಕಛೇರಿಯಲ್ಲಿ ದೂರುದಾರರ ಅಣ್ಣನ ಮಗ ಅಜಯ್ ಬರ್ಗೆ ರವರಿಂದ 15,000/- ರೂ ಲಂಚದ ಹಣ ಸ್ವೀಕರಿಸುತ್ತಿದ್ದ ಆರೋಪಿ ನಟರಾಜು.ಡಿ ರವರನ್ನು ಟ್ರ್ಯಾಪ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣದಲ್ಲಿ ಎಸ್.ವಿಜಯಲಕ್ಷ್ಮೀ, ಪೊಲೀಸ್ ನಿರೀಕ್ಷಕರು, ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣಿ, ತುಮಕೂರು ರವರು ಮತ್ತು ಜಿ.ಮಂಜುನಾಥ, ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ, ತುಮಕೂರು ರವರುಗಳು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಕಾಮಗಾರಿ ಹಿನ್ನಲೆಯಲ್ಲಿ, ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲು
ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ.8ಕ್ಕೆ ಮುಂದೂಡಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್