ಧರ್ಮಸ್ಥಳ: ಶವ ಹೂತಿಟ್ಟ ಪ್ರಕರಣ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ದೊರೆಯುತ್ತಿದೆ. ಇಂದು ಧರ್ಮಸ್ಥಳ ಠಾಣೆಗೆ ತೆರಳಿ ಮತ್ತೊಬ್ಬ ದೂರುದಾರರು ದೂರು ಕೊಟ್ಟಿದ್ದಾರೆ.
ಧರ್ಮಸ್ಥಳದಲ್ಲಿ ಶಾಲಾ ಬಾಲಕಿಯನ್ನು ಹೂತು ಹಾಕಿದ್ದನ್ನು ತಾನು ನೋಡಿದ್ದಾಗಿ ಟಿ.ಜಯಂತ್ ಎಂಬುವರು ತಿಳಿಸಿದ್ದರು. ಈ ಸಂಬಂಧ ಎಸ್ಐಟಿಗೆ ದೂರು ನೀಡಿದ್ದರು. ಅವರು ಹಿಂಬರಹದಲ್ಲಿ ಸ್ಥಳೀಯ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದರು.
ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿದಂತ ಮತ್ತೊಬ್ಬ ದೂರುದಾರ ಟಿ.ಜಯಂತ್ ಎಂಬುವರು ಶವ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ಈ ಘಟನೆ ನಾನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದೇನೆ. ನನ್ನ ಜೊತೆಗೆ ನಾಲ್ಕೈದು ಮಂದಿ ಪ್ರತ್ಯಕ್ಷ ಸಾಕ್ಷಿ ಇದ್ದಾರೆ. ಗೌಪ್ಯತೆಗಾಗಿ ದೂರಿನಲ್ಲಿ ಕೆಲ ಬದಲಾವಣೆ ಮಾಡಿದ್ದೇನೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.
ಸಾಗರದ ‘ಹಲಸು ಪ್ರಿಯ’ರೇ ಗಮನಿಸಿ: ಆಗಸ್ಟ್.8, 9, 10ರಂದು ‘ಹಲಸು ಮತ್ತು ಹಣ್ಣುಮೇಳ’
BREAKING: ನಾಳೆ ಬೆಳಗ್ಗೆ 6ರಿಂದಲೇ ರಾಜ್ಯಾಧ್ಯಂತ ಸಾರಿಗೆ ನೌಕರರ ಮುಷ್ಕರ, ಯಾವುದೇ ಬಸ್ ಓಡಲ್ಲ: ಅನಂತ ಸುಬ್ಬರಾವ್