ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಗಸ್ಟ್ 2ರಂದು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತಮ್ಮ ಮಹಿಳೆಯೊಬ್ಬರು ತಮ್ಮ ಮಗುವನ್ನ ಕಳೆದುಕೊಂಡಿದದಾರೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಮಹಿಳೆ ತನ್ನ ಕಂದಮ್ಮನನ್ನ ಕಳೆದುಕೊಂಡಿದ್ದಾಳೆ.
ಮಗುವಿನ ಸಂಬಂಧಿಕರು ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದು, ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಅಪರಾಧಿಕ ನರಹತ್ಯೆಯ ಆರೋಪ ಹೊರಿಸಬೇಕೆಂದು ಹೇಳಿದ್ದಾರೆ. ಇನ್ನು ಗರ್ಭಿಣಿ ಮಹಿಳೆಯನ್ನ ಹೆರಿಗೆಯ ಸಮಯದಲ್ಲಿ ‘ಅಮಾನವೀಯ’ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆಗಸ್ಟ್ 2ರಂದು, ಪಾಲ್ಸಖೇಡ್’ನ ಶಿವಾನಿ ವೈಭವ್ ಗವ್ಹಾನೆ ಅವರು ಮಗುವಿಗೆ ಜನ್ಮ ನೀಡುತ್ತಿದ್ದಾಗ ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಾಶಿಮ್ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ ನಂತರ, ಎಲ್ಲಾ ವರದಿಗಳು ಸಾಮಾನ್ಯವಾಗಿದ್ದವು ಮತ್ತು ಬೆಳಿಗ್ಗೆ 10 ಗಂಟೆಯೊಳಗೆ ಹೆರಿಗೆಯಾಗುತ್ತದೆ ಎಂದು ವೈದ್ಯರು ಹೇಳಿದರು. ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು ಮತ್ತು ರಾತ್ರಿಯಿಡೀ ನೋವು ಅನುಭವಿಸುತ್ತಿದ್ದರು. ಅವರು ನರ್ಸ್’ಗಳು ಮತ್ತು ವೈದ್ಯರಿಗೆ ಕರೆ ಮಾಡುತ್ತಲೇ ಇದ್ದರು, ಆದರೆ ಅವರ ಕೂಗಿಗೆ ಯಾರೂ ಗಮನ ಕೊಡಲಿಲ್ಲ. ಬೆಳಗಿನ ಜಾವ 3 ರಿಂದ ಸಂಜೆ 5 ರವರೆಗೆ ಯಾರೂ ಅವರನ್ನು ಪರೀಕ್ಷಿಸಲು ಬರಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಸಂಜೆ 5 ಗಂಟೆಗೆ ಶಿವಾನಿಯ ಸ್ಥಿತಿ ಹದಗೆಟ್ಟಾಗ, ಆಸ್ಪತ್ರೆಯ ಸಿಬ್ಬಂದಿ ಅಂತಿಮವಾಗಿ ತಪಾಸಣೆ ನಡೆಸಿದರು, ಆದರೆ ಆಗಲೇ ತುಂಬಾ ತಡವಾಗಿತ್ತು ಎಂದು ಕುಟುಂಬದವರು ಹೇಳಿದ್ದಾರೆ. ಸಂಜೆ 5:30ಕ್ಕೆ ಶಿವಾನಿ ತನ್ನ ಮಗುವಿಗೆ ಜನ್ಮ ನೀಡಿದಾಗ, ನವಜಾತ ಶಿಶುವಿನ ಹೃದಯ ಬಡಿತವಿಲ್ಲ ಮತ್ತು ಅದು ಸತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
Flight Mode : ಫೋನ್’ನಲ್ಲಿ ಅಡಗಿರುವ ಸೂಪರ್ ಫೀಚರ್.. ‘ಫ್ಲೈಟ್ ಮೋಡ್’ನ 4 ಅದ್ಭುತ ಪ್ರಯೋಜನಗಳು ಇಲ್ಲಿವೆ!