ಶಿವಮೊಗ್ಗ: ಜಿಲ್ಲೆಯ ಸಾಗರದ ಹಲಸು ಪ್ರಿಯರಿಗೆ ಸಿಹಿಸುದ್ದಿ ಎನ್ನುವಂತೆ ಇದೇ ಆಗಸ್ಟ್.8, 9 ಮತ್ತು 10ರಂದು ಮೂರು ದಿನಗಳ ಕಾಲ ಹಲಸು ಮತ್ತು ಹಣ್ಣು ಮೇಳವನ್ನು ನಗರದಲ್ಲಿ ಆಯೋಜಿಸಲಾಗಿದೆ.
ಈ ಬಗ್ಗೆ ಆಯೋಜಕರಾದಂತ ಗಣೇಶ್ ಶೆಟ್ಟಿ ಮಾಹಿತಿ ನೀಡಿದ್ದು, ಸಾಗರ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಫ್ ಸಾಗರ ಯುನಿಕ್ ಹಾಗೂ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಲಸು ಮತ್ತು ಹಣ್ಣು ಮೇಳ ಆಯೋಜಿಸಿರುವುದಾಗಿ ತಿಳಿಸಿದರು.
ಆಗಸ್ಟ್ 8, 9 ಮತ್ತು 10ರಂದು ಸಾಗರಗ ನೆಹರು ಮೈದಾನದ ಸಮೀಪದ ಬ್ರಾಸಂ ಸಭಾಭವನದಲ್ಲಿ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಹಲಸು ಬೆಳೆಗಾರರು ಭಾಗಿಯಾಗಲಿದ್ದು, ಬಗೆ ಬಗೆಯ ಹಣ್ಣುಗಳ ಸವಿಯನ್ನು ಸವಿಯಬಹುದಾಗಿದೆ ಎಂದರು.
ಈ ಮೇಳದ ವಿಶೇಷ ಆಕರ್ಷಣೆ ಅಂದ್ರೆ ಚಂದ್ರ ಹಲಸು ಹಾಗೂ ರುದ್ರಾಕ್ಷಿ ಹಲಸುಗಳು ದೊರೆಯಲಿದೆ. ಹಲಸು ಮೇಳದಲ್ಲಿ ನೂರಾರು ಮಳಿಗೆಗಳು, ಹಲವಾರು ತಿನಿಸುಗಳು, ಬಗೆ ಬಗೆಯ ಹಣ್ಣುಗಳು, ಐಸ್ ಕ್ರೀಂಗಳು, ಹಲಸಿನ ಹೋಳಿಗೆ, ಹಣ್ಣಿನ ಉತ್ಪನ್ನಗಲು, ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಸಸಿಗಳು, ತರಕಾರಿ ಬೀಜಗಳು ಸಹ ಮೇಳದಲ್ಲಿ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್.8, 9 ಮತ್ತು 10ರಂದು ಹಲಸು ಮತ್ತು ಹಣ್ಣು ಮೇಳ ಸಾಗರ ಬ್ರಾಸಂ ಸಭಾಭವನದಲ್ಲಿ ನಡೆಯಲಿದೆ. ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ತೆರೆದಿರಲಿದ್ದು, ಹಲಸು ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಭಾಸ್ಕರ ಪೂಜಾರಿ 8105279767 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ಸಾಗರ ತಾಯಿ ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಕೇಸ್: ಆರೋಗ್ಯ ಇಲಾಖೆ ‘ಕಚೇರಿ ಅಧೀಕ್ಷಕ’ನೇ ಸಾಥ್
BREAKING : ನಾಳೆ ‘ರಾಹುಲ್ ಗಾಂಧಿ’ ನೇತೃತ್ವದಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್ ಪ್ರತಿಭಟನೆ ಆ.8 ಕ್ಕೆ ಮುಂದೂಡಿಕೆ