ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ದರೋಡೆಕೋರರ ಗ್ಯಾಂಗ್ ನಿಂದ ಯುವಕನನ್ನು ಕೊಲೆಗೈಯ್ಯಲಾಗಿದೆ. ದರೋಡೆಕೋರರ ಗ್ಯಾಂಗ್ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಪ್ರೇಮ್ ಗೆ ಧಮ್ಕಿ ಹಾಕಲಾಗಿದೆ. ಪ್ರೇಮ್ ನನ್ನು ಅಡ್ಡಗಟ್ಟಿ ಹಣ ನೀಡುವಂತೆ ದರೋಡೆಕೋರರು ಧಮ್ಕಿ ಹಾಕಲಾಗಿದೆ. ಹಣ ನೀಡಲು ನಿರಾಕರಿಸಿದ ಪ್ರೇಮ್ ಗೆ ಚಾಕುವಿನಿಂದ ಗ್ಯಾಂಗ್ ಇರಿಯಲಾಗಿದೆ.
ಚಾಕು ಇರಿತಕ್ಕೆ ಒಳಗಾದಂತ ಪ್ರೇಮ್ ಕುಸಿದು ಬಿದ್ದಿದ್ದಾರೆ. ಆತನನ್ನು ಆಸ್ಪತ್ರೆಗೆ ಸೇರಿಸಲು ಗ್ಯಾಂಗ್ ಯತ್ನಿಸಿತ್ತು. ಆದರೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಪ್ರೇಮ್ ಮೃತಪಟ್ಟಿದ್ದಾರೆ. ಹೀಗಾಗಿ ಪ್ರೇಮ್ ಶವವನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೀಗಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಬಳಿಯಲ್ಲಿ ಪ್ರೇಮ್ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರೇಮ್ ದರೋಡೆಕೋರರಿಂದ ಚಾಕು ಇರಿತಕ್ಕೆ ಒಳಗಾಗಲು ಪೊಲೀಸರ ನಿರ್ಲಕ್ಷ್ಯವೇ ಕಾರಣ. ದರೋಡೆಕೋರರನ್ನು ಬಂಧಿಸುವಂತೆ ಬ್ಯಾಡರಹಳ್ಳಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ.
BREAKING : ನಾಳೆ ‘ರಾಹುಲ್ ಗಾಂಧಿ’ ನೇತೃತ್ವದಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್ ಪ್ರತಿಭಟನೆ ಆ.8 ಕ್ಕೆ ಮುಂದೂಡಿಕೆ
ಅನುತ್ತಮ ಗುಣಮಟ್ಟದ ಔಷಧಿ ಮಾರುಕಟ್ಟೆಯಿಂದ 2 ದಿನಗಳಲ್ಲಿ ವಾಪಾಸ್: ಸಚಿವ ದಿನೇಶ್ ಗುಂಡೂರಾವ್