ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ದೂರುದಾರ ಟಿ.ಜಯಂತ್ ನೀಡಿದಂತ ದೂರರ್ಜಿಯನ್ನು ಎಸ್ಐಟಿ ಸ್ಪೀಕರಿಸಿದೆ. ಅಲ್ಲದೇ ಸ್ಥಳೀಯ ಪೊಲೀಸರಿಗೆ ದೂರು ನೀಡುವಂತೆ ಹಿಂಬರದಹಲ್ಲಿ ತಿಳಿಸಲಾಗಿದೆ.
ಎರಡು ದಿನಗಳ ಹಿಂದಷ್ಟೇ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜಯಂತ್ ಎಂಬುವರು ತಾವು ಶಾಲಾ ಸಮವಸ್ತ್ರದಲ್ಲಿದ್ದಂತ ಬಾಲಕಿಯನ್ನು ಹೂತು ಹಾಕಿದ್ದನ್ನು ನೋಡಿದ್ದಾಗಿ ತಿಳಿಸಿದ್ದರು. ಅಲ್ಲದೇ ಎಸ್ಐಟಿ ಕಚೇರಿಗೆ ತೆರಳಿ ದೂರು ನೀಡಿದ್ದರು.
ಇದೀಗ ಟಿ.ಜಯಂತ್ ದೂರಿನ ಅರ್ಜಿ ಸ್ವೀಕರಿಸಿರುವಂತ ಎಸ್ಐಟಿ ಪೊಲೀಸರು, ಅದಕ್ಕೆ ಹಿಂಬರಹ ನೀಡಿದ್ದಾರೆ. ಅದರಲ್ಲಿ ಸ್ಥಳೀಯ ಪೊಲೀಸರಿಗೆ ಈ ಘಟನೆ ಸಂಬಂಧ ದೂರು ನೀಡುವಂತೆ ತಿಳಿಸಿದ್ದಾರೆ. ಆನಂತ್ರ ಡಿಜಿ ಮತ್ತು ಐಜಿಪಿಯವರು ನೀಡುವಂತೆ ಆದೇಶದ ಮೇರೆಗೆ ಕ್ರಮ ಕೈಗೊಳ್ಳುವುದಾಗಿ ಹಿಂಬರಹದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಏನಿದೆ ಎಸ್ಐಟಿ ನೀಡಿರುವಂತ ಹಿಂಬರದಲ್ಲಿ?
ತಾವು ನೀಡಿದ ದೂರನ್ನು ಪರಿಶೀಲಿಸಿದ್ದು, ಈ ದೂರನ್ನು ನೀವು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕ್ರಮ ಜರುಗಿಸುವ ಕುರಿತು ಸಲ್ಲಿಸುವುದು. ಸದರಿ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತ್ರ ನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಮುಂದಿನ ಆಶದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.
BREAKING: ‘ಧರ್ಮಸ್ಥಳ ಕೇಸ್’ಗೆ ಮತ್ತೊಂದು ಟ್ವಿಸ್ಟ್: ಬಂಗ್ಲಗುಡ್ಡದಲ್ಲಿ ‘ಅಸ್ಥಿಪಂಜರ’ದ ಹಲವು ಭಾಗಗಳು ಪತ್ತೆ
BREAKING: ತುಮಕೂರು ಬಳಿ 19 ನವಿಲು ಸಾವಿನ ಬಗ್ಗೆ ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ