ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಜನರೇಟರ್ ಕಳ್ಳತನಕ್ಕೆ ಸಾಥ್ ನೀಡಿದ್ದೇ ಆರೋಗ್ಯ ಇಲಾಖೆಯ ಕಚೇರಿ ಅಧೀಕ್ಷ ಸುನೀಲ್ ಆಗಿದ್ದರೇ, ಕದ್ದೊಯ್ದಿದ್ದು ಗುತ್ತಿಗೆ ನೌಕರ ಸುರೇಶ್ ಆಗಿದ್ದು ಪೊಲೀಸರು ಬಂಧನದ ಬಳಿಕ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಿವಮೊಗ್ಗ DHO ಡಾ.ನಟರಾಜ್ ತಿಳಿಸಿದ್ದಾರೆ.
ಇಂದು ಕನ್ನಡ ನ್ಯೂಸ್ ನೌ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 62.5 ಕೆವಿ ಜನರೇಟರ್ ಕಳ್ಳತನ ಪ್ರಕರಣದ ಕುರಿತು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಇವರಲ್ಲಿ ಆರೋಗ್ಯ ಇಲಾಖೆಯ ಗುತ್ತಿಗೆ ಎಲೆಕ್ಟ್ರಿಕ್ ನೌಕರ ಸುರೇಶ್ ಹಾಗೂ ಕಚೇರಿ ಅಧೀಕ್ಷ ಸುನೀಲ್ ಸೇರಿದ್ದಾರೆ. ಈಗಾಗಲೇ ಗುತ್ತಿಗೆ ಆಧಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಂತ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಲು ಕಂಪನಿಗೆ ಸೂಚಿಸಲಾಗಿದೆ ಎಂದರು.
ಇನ್ನೂ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಚೇರಿ ಅಧೀಕ್ಷಕ ಸುನೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಾನೂನು ತಜ್ಞರ ಸಲಹೆಯನ್ನು ಕೇಳಲಾಗಿದೆ. ಅವರು ನೀಡುವಂತ ಸಲಹೆಯ ಅನುಸಾರವಾಗಿ ಕಚೇರಿ ಅಧೀಕ್ಷಕ ಸುನೀಲ್ ವಿರುದ್ಧವೂ ಕ್ರಮವಾಗಲಿದೆ. ಇದೊಂದು ಆರೋಗ್ಯ ಇಲಾಖೆಗೆ ಕೆಟ್ಟ ಹೆಸರಾಗಿದೆ. ಇಲಾಖೆಯ ಗುತ್ತಿಗೆ ನೌಕರನೇ ಕಳ್ಳತನ ಮಾಡ್ತಾರೆ, ಕಚೇರಿ ಅಧೀಕ್ಷಕನೇ ಇದಕ್ಕೆ ಸಾಥ್ ನೀಡುತ್ತಾರೆ ಅಂದ್ರೆ ತೀರಾ ಗಂಭೀರ ವಿಚಾರವಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಅಂದಹಾಗೇ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕರಾಗಿದ್ದಂತ ಸುನೀಲ್ ಅವರು, ಗುತ್ತಿಗೆ ಎಲೆಕ್ಟ್ರಿಕ್ ನೌಕರ ಸುರೇಶ್ ಎಂಬುವರಿಂದ 30,000 ಪಡೆದು 62.5 ಕೆವಿ ಸಾಮರ್ಥ್ಯತ ಸುಮಾರು 92,000 ಮೌಲ್ಯದ ಹಳಾಗಿದ್ದ ಜನರೇಟರ್ ಕದ್ದೊಯ್ಯಲು ಅವಕಾಶ ಮಾಡಿಕೊಟ್ಟಿದ್ದರು. ಈ ಸಂಬಂಧ ಎಎಂಓ ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಾಗರ ಪೇಟೆ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದಂತ ಪೊಲೀಸರು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಚೇರಿ ಅಧೀಕ್ಷಕ ಸುನೀಲ್, ಗುತ್ತಿಗೆ ನೌಕರ ಸುರೇಶ್ ಹಾಗೂ ಶರಣ್ ಎಂಬುವರನ್ನು ಬಂಧಿಸಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING : ನಾಳೆ ‘ರಾಹುಲ್ ಗಾಂಧಿ’ ನೇತೃತ್ವದಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್ ಪ್ರತಿಭಟನೆ ಆ.8 ಕ್ಕೆ ಮುಂದೂಡಿಕೆ