ಬೆಂಗಳೂರು : ಗಾಂಜಾ ನಶೆಯಲ್ಲಿ ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಓರ್ವನ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ಗಾಂಜಾ ನಶೆಯಲ್ಲಿ ಮಾರಣಾಂತಿಕ ಹಲ್ಲೆಗೈದು ಸ್ನೇಹಿತ ಸುರೇಶ್ ನನ್ನು ಮುನ್ನಾ ಎಂಬಾತ ಹತ್ಯೆಗೈದಿದ್ದಾನೆ. ಕೊಲೆಯಾದ ಸುರೇಶ್ ಹಾಗೂ ಆರೋಪಿ ಬಿಹಾರ ಮೂಲದವರು.
ಗಾರೆ ಕೆಲಸ ಮಾಡಿಕೊಂಡು ಒಂದೇ ಮನೆಯಲ್ಲಿ ವಾಸವಿದ್ದರು. ನಿತ್ಯ ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದರು. ನಿನ್ನೆ ರಾತ್ರಿಯೂ ಇಬ್ಬರ ನಡುವೆ ಗಲಾಟೆಯಾಗಿದ್ದು, ಮಾತು ಕೇಳದೇ ಇದ್ದಾಗ ಮನೆ ಮಾಲೀಕ ಪೊಲೀಸರನ್ನು ಕರೆಸಿದ್ದರು. ಪೊಲೀಸರು ಗಾಂಜಾ ನಶೆಯಲ್ಲಿದ್ದ ಇಬ್ಬರು ಬೈದು ಹೋಗಿದ್ದರು. ಬಳಿಕ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮುನ್ನಾ ಸುರೇಶ್ ನನ್ನು ಹತ್ಯೆ ಮಾಡಿ ಪರಾರಿಯಾಗಲು ಯತ್ನಿಸಿದ್ದನ್ನು ಆದರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.