ಬೆಂಗಳೂರು : ಹೋಟೆಲ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ಕಡ್ಡಾಯ ಮಾಡಬೇಕು ಎಂದು ಬೆಂಗಳೂರು ಪ್ರಾಧಿಕಾರ(ಜಿಬಿಎ) ಆದೇಶ ಹೊರಡಿಸಿದೆ.
ಸಾರ್ವಜನಿಕ ಧೂಮಪಾನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಮತ್ತಿತರ ಉದ್ದಿಮೆಗಳು ಒಂದು ವಾರದಲ್ಲಿ ಕಡ್ಡಾದುವಾಗಿ “ಗೊತ್ತುಪಡಿಸಿದ ಧೂಮಪಾನ ಪ್ರದೇಶ’ (ಡಿಎಸ್ಎ) ಒದಗಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಆದೇಶ ಹೊರಡಿಸಿದೆ. ತಪ್ಪಿದಲ್ಲಿ ಪರವಾನಗಿ ಅಮಾನತುಗೊಳಿಸುವ ಎಚ್ಚರಿಕೆ ನೀಡಿದೆ.
ಡಿಎಸ್ ಒ ನಿರ್ಮಿಸುವ ಸಂಬಂಧ ಬಿಬಿಎಂಪಿಯು 2020ರಲ್ಲೇ ಆದೇಶ ಹೊರಡಿಸಿತ್ತು. 2003ರ ಕೋಟ್ಯಾ ಕಾಯಿದೆಯಂತೆ 30ಕ್ಕಿಂತ ಹೆಚ್ಚು ಆಸನವಿರುವ ಎಲ್ಲ ದರ್ಶಿನಿಗಳು, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಪಬ್, ಕ್ಲಸ್ಗಳಲ್ಲಿ ಡಿಎಸ್ಎ ನಿರ್ಮಿಸುವುದು ಕಡ್ಡಾಯವಾಗಿದೆ. ಒಂದು ವಾರದೊಳಗೆ ನಿರ್ಮಿಸದಿದ್ದರೆ ಪರವಾನಗಿ ಅಮಾನತು ಮಾಡುವುದಾಗಿ ಎಚ್ಚರಿಸಿದೆ.