ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಮನೆಗೆಲೆಸದವರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಹಾಗಾದ್ರೆ ಅವರ ವಿರುದ್ಧ ದಾಖಲಾಗಿದ್ದಂತ ಯಾವ ಸೆಕ್ಷನ್ ಅಡಿಯಲ್ಲಿ ಏನು ದಂಡವನ್ನು ವಿಧಿಸಲಾಗಿದೆ ಎನ್ನುವ ಬಗ್ಗೆ ಮುಂದೆ ಓದಿ.
ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಅತ್ಯಾಚಾರ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದೆ. ಅಲ್ಲದೇ 10 ಲಕ್ಷ ದಂಡವನ್ನು ಕೂಡ ವಿಧಿಸಿದೆ.
ಯಾವ ಸೆಕ್ಷನ್ ಅಡಿ ಏನು ಶಿಕ್ಷೆ? ದಂಡ ಗೊತ್ತಾ?
- ಐಪಿಸಿ ಸೆಕ್ಷನ್ 376(2)(ಕೆ) ರಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ
- 376(2)(ಎನ್) ಪದೇ ಪದೇ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು, 5 ಲಕ್ಷ ದಂಡ
- ಐಪಿಸಿ ಸೆಕ್ಷನ್ 354(ಎ) ಅಡಿಯಲ್ಲಿ 3 ವರ್ಷ ಸೆರೆವಾಸ, 25,000 ದಂಡ
- ಐಪಿಸಿ ಸೆಕ್ಷನ್ 354(ಬಿ) ಅಡಿಯಲ್ಲಿ 7 ವರ್ಷ ಸೆರೆವಾಸ, 50,000 ದಂಡ
- ಐಪಿಸಿ ಸೆಕ್ಷನ್ 354(ಸಿ) ಅಡಿಯಲ್ಲಿ 3 ವರ್ಷ ಸೆರೆವಾಸ 25,000 ದಂಡ
- ಐಪಿಸಿ ಸೆಕ್ಷನ್ 506ರಡಿಯಲ್ಲಿ 2 ವರ್ಷ ಸೆರೆವಾಸ, 10,000 ದಂಡ
- ಐಪಿಸಿ ಸೆಕ್ಷನ್ 201ರಡಿಯಲ್ಲಿ 3 ವರ್ಷ ಸೆರೆವಾಸ, 25,000 ದಂಡ
- ಐಟಿ ಕಾಯ್ದೆ ಸೆಕ್ಷನ್ 66(ಇ) ಅಡಿಯಲ್ಲಿ 3 ವರ್ಷ ಸೆರೆವಾಸ, 25,000 ದಂಡ ವಿಧಿಸಲಾಗಿದೆ.
ಒಟ್ಟಾರೆಯಾಗಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೇ 10 ಲಕ್ಷ ದಂಡವನ್ನು ವಿಧಿಸಿ ಗರಿಷ್ಠ ಶಿಕ್ಷೆಯನ್ನು ಕೋರ್ಟ್ ನೀಡಿದೆ.
ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಅಂಗಾಂಗ ಸಾಗಾಟ: ತುರ್ತು ಕಸಿಗಾಗಿ ಯಕೃತ್ ಸಾಗಣೆ
BREAKING : ಧರ್ಮಸ್ಥಳ ಪ್ರಕರಣ : ಸಿಎಸ್ ಶಾಲಿನಿ ರಜನೀಶ್ ಭೇಟಿಯಾದ ‘SIT’ ಮುಖ್ಯಸ್ಥ ಪ್ರಣವ್ ಮೋಹಂತಿ