ಬೆಂಗಳೂರು: ಈವರೆಗೆ ಆಂಬುಲೆನ್ಸ್ ಮೂಲಕ ಅಂಗಾಂಗ ಸಾಗಾಣಿಕೆ ಮಾಡಲಾಗುತ್ತಿತ್ತು. ಅಲ್ಲದೇ ಏರ್ ಆಂಬುಲೆನ್ಸ್ ಕೂಡ ಉಪಯೋಗಿಸಿಕೊಳ್ಳಲಾಗಿತ್ತು. ಆದರೇ ಇದೇ ಮೊದಲ ಬಾರಿಗೆ ಎನ್ನುವಂತೆ ನಮ್ಮ ಮೆಟ್ರೋದಲ್ಲೂ ಅಂಗಾಂಗ ಸಾಗಾಣೆ ಮಾಡಲಾಗಿದೆ. ಆ ಮೂಲಕ ತುರ್ತು ಕಸಿಗಾಗಿ ಆಸ್ಪತ್ರೆಗೆ ಯಕೃತ್ ಸಾಗಾಟ ಮಾಡಲಾಗಿದೆ.
ಹೌದು ಬೆಂಗಳೂರಿನ ವೈಟ್ ಫೀಲ್ಡ್ ನಿಲ್ದಾಣದಿಂದ ಆರ್ ಆರ್ ನಗರಕ್ಕೆ ಅಂಗಾಂಗ ಕಸಿಯಿಂದಾಗಿ ಪಡೆದಿದ್ದಂತ ಯಕೃತ್ ಅನ್ನು ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಸಾಗಾಟ ಮಾಡಲಾಗಿದೆ. ಆ ಬಳಿಕ ಆಂಬುಲೆನ್ಸ್ ಮೂಲಕ ಸ್ಪರ್ಶ ಆಸ್ಪತ್ರೆಗೆ ಯಕೃತ್ ಕೊಂಡೊಯ್ಯಲಾಗಿದೆ.
ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ನಿಂದ ಆಂಬುಲೆನ್ಸ್ ಸಾಗಾಟ ಕಟ್ಟವಾಗುತ್ತಿದೆ. ಜೀರೋ ಟ್ರಾಫಿಕ್ ವ್ಯವಸ್ಥೆ ಪಡೆಯಲು ಮತ್ತಷ್ಟು ಕಷ್ಟ. ಇದರ ನಡುವೆ ಟ್ರಾಫಿಕ್ ಜಾಮ್ ನಿಂದ ತಪ್ಪಿಸಿಕೊಂಡು ಮೆಟ್ರೋದಲ್ಲಿ ಯಕೃತ್ ಸಾಗಿಸಲಾಗಿದೆ.
“ನನ್ನ ಹೃದಯ ದುಃಖದಿಂದ ತುಂಬಿದೆ” : ವೇದಿಕೆಯಲ್ಲೇ ‘ಪ್ರಧಾನಿ ಮೋದಿ’ ಭಾವುಕ
BREAKING : ಧರ್ಮಸ್ಥಳ ಪ್ರಕರಣ : ಸಿಎಸ್ ಶಾಲಿನಿ ರಜನೀಶ್ ಭೇಟಿಯಾದ ‘SIT’ ಮುಖ್ಯಸ್ಥ ಪ್ರಣವ್ ಮೋಹಂತಿ