ಶಿವಮೊಗ್ಗ: ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಹಾಳಾಗಿದ್ದಂತ 62.5 ಕೆವಿ ಜನರೇಟರ್ ಕಳ್ಳತನ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಟನ್ ತೂಕದ ಜನರೇಟರ್ ಕದ್ದೊಯ್ಯಲು ಸಹಕಾರ, ಸಾಥ್ ನೀಡಿರೋದು ಆರೋಗ್ಯ ಇಲಾಖೆಯ ಕಚೇರಿ ಅಧೀಕ್ಷಕನೇ ಆಗಿದ್ದಾರೆ ಎಂಬುದಾಗಿ ಸಾಗರ ಪೇಟೆ ಪೊಲೀಸರ ಬಂಧನದ ಬಳಿಕ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಿಂಭಾಗದಲ್ಲಿ ಇರಿಸಲಾಗಿದ್ದಂತ ಹಾಳಾಗಿದ್ದ, ಹಳೆಯ 62.5 ಕೆವಿ ಜನರೇಟರ್ ಕಳ್ಳತನವಾಗಿದೆ. ಹೀಗಿದ್ದರೂ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಪೊಲೀಸರಿಗೆ ದೂರು ನೀಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂಬುದಾಗಿ ಜುಲೈ.31ರಂದು ಸುದ್ದಿಯಾಗಿತ್ತು. ಈ ಸುದ್ದಿಯ ಬಳಿಕ ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್.ಎಲ್ ಅವರು ಸಾಗರ ಪೇಟೆ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಅನಾಮಿಕ ವ್ಯಕ್ತಿಗಳ ಹೆಸರಿನಲ್ಲಿ ಕೇಸ್ ದಾಖಲಾಗಿತ್ತು.
ಎಫ್ಐಆರ್ ಬಳಿಕ ಕದ್ದೊಯ್ದವರ ಬಗ್ಗೆ ದೂರು ನೀಡಲು ಮುಂದಾಗಿದ್ದ ಕಚೇರಿ ಅಧೀಕ್ಷಕ
ಜುಲೈ.31, 2025ರಂದು ಸಾಗರ ಪೇಟೆ ಠಾಣೆಯಲ್ಲಿ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಿಂಭಾಗದಲ್ಲಿನ ಹಾಳಾಗಿದ್ದಂತ ಜನರೇಟರ್ ಕದ್ದೊಯ್ದವರ ಬಗ್ಗೆ ದೂರು, ಎಫ್ಐಆರ್ ದಾಖಲಾಗುತ್ತಿದ್ದಂತೇ ಆರೋಪಿಗಳಿಗೆ ಕಾನೂನು ಕ್ರಮದ ಭಯ ಶುರುವಾಗಿತ್ತು. ಅದರಲ್ಲೂ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಚೇರಿ ಅಧೀಕ್ಷಕರಾಗಿದ್ದಂತ ಸುನೀಲ್ ಅವರಿಗೆ ಹೆಚ್ಚಾಗೇ ಕಾಡಿತ್ತು.
ಇದೇ ಭಯದಲ್ಲಿ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಿಂಭಾಗದಲ್ಲಿ ಇರಿಸಲಾಗಿದ್ದಂತ ಹಳೆಯ, ಹಾಳಾಗಿದ್ದಂತ 62.5 ಕೆವಿ ಜನರೇಟ್ ತೆಗೆದುಕೊಂಡು ಹೋಗಿರೋರು ಸುರೇಶ್ ಮತ್ತು ಶರಣ್ ಎಂಬುದಾಗಿ ಸಾಗರ ಪೇಟೆ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆ ವೇಳೆಯಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದಂತ ಪೊಲೀಸರಿದೆ ತಿಳಿದಿದ್ದೇ ಆರೋಗ್ಯ ಇಲಾಖೆಯ ನೌಕರ ಸುನೀಲ್ ಆರೋಪಿಗಳಿಗೆ ಸಾಥ್ ನೀಡಿದ್ದಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
ವಿಚಾರಣೆಯಲ್ಲಿ ಜನರೇಟರ್ ಕಳ್ಳತನಕ್ಕೆ ಸಾಥ್ ನೀಡಿದ್ದೇ ಸುನೀಲ್ ಎಂಬುದಾಗಿ ಬಯಲು
ಎಲೆಕ್ಟ್ರಿಕಲ್ ಗುತ್ತಿಗೆ, ಸೌಂಡ್ ಸಿಸ್ಟಂ ಕೆಲಸವನ್ನು ಸಾಗರದಲ್ಲಿ ಮಾಡುತ್ತಿದ್ದಂತ ಸುರೇಶ್ ಹಾಗೂ ಶರಣ್ ಸಹೋದರರು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎಲೆಕ್ಟ್ರಿಕ್ ಕೆಲಸ ಕೂಡ ಮಾಡಿದ್ದರು. ಈ ವೇಳೆಯಲ್ಲೇ ಹಿಂಭಾಗದಲ್ಲಿದ್ದಂತ 62.5 ಕೆವಿ ಜನರೇಟರ್ ಕಣ್ಣಿಗೆ ಬಿದ್ದಿತ್ತು. ಅದನ್ನು ರಿಪೇರಿ ಮಾಡಿಸಿಕೊಂಡು ತಮ್ಮ ಸೌಂಡ್ ಸಿಸ್ಟಂಗೆ ಬಳಕೆ ಮಾಡುವ ಪ್ಲಾನ್ ಮಾಡಿದ್ದರು. ಈ ಪ್ಲಾನ್ ಅನುಸಾರ ಕದ್ದೊಯ್ಯಲು ಸಾಥ್ ನೀಡಿದ್ದು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಚೇರಿ ಅಧೀಕ್ಷಕ ಸುನೀಲ್ ಎನ್ನಲಾಗುತ್ತಿದೆ.
ಸುರೇಶ್ ಹಾಗೂ ಶರಣ್ ಅವರ ಸೌಂಡ್ ಸಿಸ್ಟಂಗೆ ಬಳಕೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಿಂಭಾಗದಲ್ಲಿ ಇರಿಸಿದ್ದಂತ 62.5 ಕೆವಿ ಜನರೇಟರ್ ಕೊಡುವಂತೆ ಕಚೇರಿ ಅಧೀಕ್ಷಕ ಸುನೀಲ್ ಜೊತೆಗೆ ಡೀಲ್ ಕುದುರಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಮಾಹಿತಿಯನುಸಾರ ಸುಮಾರು 30,000 ಪಡೆದಿರುವಂತ ಕಚೇರಿ ಅಧೀಕ್ಷಕ ಸುನೀಲ್, ಜನರೇಟರ್ ಕದ್ದೊಯ್ಯೋದಕ್ಕೆ ಸುರೇಶ್, ಶರಣ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿಯೇ ರಾಜಾ ರೋಷವಾಗಿ ಕ್ವಿಂಟಲ್ ತೂಕದ ಜನರೇಟರ್ ಅನ್ನು ಕ್ರೇನ್ ಬಳಸಿ ಆರೋಪಿಗಳು ಕದ್ದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಮತ್ತಷ್ಟು ಖಚಿತ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆ ಜನರೇಟರ್ ಕದ್ದೊಯ್ದ ಮೂವರು ಅರೆಸ್ಟ್
BREAKING : ಧರ್ಮಸ್ಥಳ ಪ್ರಕರಣ : ಸಿಎಸ್ ಶಾಲಿನಿ ರಜನೀಶ್ ಭೇಟಿಯಾದ ‘SIT’ ಮುಖ್ಯಸ್ಥ ಪ್ರಣವ್ ಮೋಹಂತಿ