ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೂರುದಾರ ತೋರಿಸಿದ್ದ 9ನೇ ಪಾಯಿಂಟ್ ನಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಲಿದ್ದಾರೆ.
ಅನಾಮಿಕ ಶವಗಳನ್ನು ಹೂಳಿದ್ದರ ಬಗ್ಗೆ ತಪ್ಪೊಪ್ಪಿಕೊಂಡ ನಂತ್ರ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಎಸ್ಐಟಿಯಿಂದ ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿನ್ನೆ 7ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯದ ವೇಳೆಯಲ್ಲಿ ಒಂದು ಕರ್ಚಿಪ್ ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ನಿನ್ನೆ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಎಸ್ಐಟಿಯಿಂದ ಅಸ್ಥಿ ಪಂಜರಗಳ ಹುಟುಕಾಟಕ್ಕೆ ಭೂಮಿ ಅಗೆಯಲಾಗುತ್ತಿತ್ತು. 7ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯದ ಸಂದರ್ಭದಲ್ಲಿ ಒಂದು ಕರ್ಚಿಪ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಎಸ್ಐಟಿ ಧರ್ಮಸ್ಥಳದ 6ನೇ ಪಾಯಿಂಟ್ ಶೋಧ ಕಾರ್ಯದ ಸಂದರ್ಭದಲ್ಲಿ 12 ಮೂಳೆಗಳು ದೊರೆತಿದ್ದವು. ತಲೆ ಬುರುಡೆ ಚೂರುಗಳು, ಕೈ ಮೂಳೆಗಳು ಸೇರಿದಂತೆ 12 ಮೂಳೆಗಳ ಪೀಸ್ ಗಳು ಸಿಕ್ಕಿದ್ದವು. ಇವುಗಳನ್ನು ಎಸ್ಐಟಿ ತಂಡವು ಪರಿಶೀಲನೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ದೊರೆತಂತ ಮೂಳೆಗಳು ಯಾರವು ಎನ್ನುವ ಕುರಿತಂತೆ ಸಂಶೋಧನೆಯನ್ನು ವೈದ್ಯರ ತಂಡವು ನಡೆಸಲಿದೆ.