ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ವಜ್ರ ಸಾಪ್ತಾಹಿಕ ಪಾಸು ವಿತರಣಾ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಈ ಮೂಲಕ ಬಿಎಂಟಿಸಿಯಿಂದ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ವಿತರಣೆ ಮಾಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಇದೀಗ ವಜ್ರ ಸೇವೆಗಳ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ವಜ್ರ ಸಾಪ್ತಾಹಿಕ ಪಾಸುವನ್ನು 01.08.2025ರಿಂದ ವಿತರಣೆ ಮಾಡುವ ಕ್ರಮ ಕೈಗೊಂಡಿದೆ.
ವಜ್ರ ಸಾಪ್ತಾಹಿಕ ಪಾಸು – ದರ ಹಾಗೂ ಸೇವಾ ವಿವರಗಳು:
ಪಾಸಿನ ವಿವರ ಪಾಸಿನ ದರ (ಟೋಲ್ ಶುಲ್ಕ ಹೊರತುಪಡಿಸಿ) ಸೇವಾ ವಿವರಗಳು
ವಜ್ರ ಸಾಪ್ತಾಹಿಕ ಪಾಸು ₹750/- ಪಾಸುದಾರರಿಗೆ ಪಾಸಿನ ಮಾನ್ಯತಾ ಅವಧಿಯಲ್ಲಿ ಸಂಸ್ಥೆಯ ವಜ್ರ, ಸಾಮಾನ್ಯ ವೇಗದೂತ ಹಾಗೂ ಸಾಮಾನ್ಯ ಸಾರಿಗೆ ಸೇವೆಗಳಲ್ಲಿ (ವಾಯುವಜ್ರ ಮತ್ತು ವಿಶೇಷ ಸೇವೆಗಳನ್ನು ಹೊರತುಪಡಿಸಿ) ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯ.
ವಜ್ರ ಸಾಪ್ತಾಹಿಕ ಪಾಸು ಹೊಂದಿರುವ ಪ್ರಯಾಣಿಕರು ವಜ್ರ ವೇಗದೂತ ಸೇವೆಗಳಲ್ಲಿ ಪ್ರಯಾಣಿಸುವಾಗ, ಪ್ರತ್ಯೇಕವಾಗಿ ರೂ.10/- ವೇಗದೂತ ಸೇವಾ ಶುಲ್ಕ ಹಾಗೂ ಅನ್ವಯವಾಗುವ ಟೋಲ್ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಸಾರ್ವಜನಿಕರು ಈ ಪಾಸುಗಳನ್ನು ಸುಲಭವಾಗಿ ಪಡೆಯಲು, ಸಂಸ್ಥೆಯು ಟುಮ್ಯಾಕ್ (Tummoc) ಮೊಬೈಲ್ ಆಪ್ ಮೂಲಕ ಡಿಜಿಟಲ್ ಮಾದರಿಯಲ್ಲಿ ವಿತರಣಾ ವ್ಯವಸ್ಥೆ ರೂಪಿಸಿದೆ. ಪ್ರಯಾಣಿಕರು ಆಪ್ ಮೂಲಕ ನೇರವಾಗಿ ಪಾಸು ಖರೀದಿ ಮಾಡಬಹುದು.
ಈ ಕ್ರಮವು ವಜ್ರ ಸೇವೆ ಬಳಸುವ ನಿತ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲತೆ ಹಾಗೂ ಅನುಭವ ಸುಗಮಗೊಳಿಸುವತ್ತ ಬಿಎಂಟಿಸಿಯ ಮತ್ತೊಂದು ಮಹತ್ವದ ಹೆಜ್ಜೆ ಆಗಲಿದೆ.
ಸಾಗರದ ‘ತಾಯಿ-ಮಕ್ಕಳ ಆಸ್ಪತ್ರೆ’ಯಲ್ಲಿ ಕಳುವಾದ ಜನರೇಟರ್ ಹಾಳಾಗಿತ್ತು, 62.5 ಕೆವಿ ಸಾಮರ್ಥ್ಯದ್ದು: ವರದಿ
BREAKING: ಭೂ ಹಗರಣದಲ್ಲಿ ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ’ ವಿರುದ್ಧ ಖಾಸಗಿ ದೂರು ದಾಖಲು
ಹಾವೇರಿಯಲ್ಲಿ ಬರ್ತ್‌ಡೇ ದಿನವೇ ಬ್ರಿಡ್ಜ್ ಮೇಲಿನಿಂದ ತಳ್ಳಿ ಕಾಂಗ್ರೆಸ್ ಯುವ ಕಾರ್ಯಕರ್ತನನ್ನು ಹತ್ಯೆ