ಬೆಂಗಳೂರು: ಭೂ ಹಗರಣವೊಂದಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗಿದೆ.
ವಿಜಯ್ ರಾಘವನ್ ಎಂಬುವರು ಈ ದೂರು ಸಲ್ಲಿಸಿದ್ದು, ತಮ್ಮ ದೂರಿನಲ್ಲಿ ಸರ್ಕಾರಿ ಜಮೀನು ಪಡೆದು, ಅದನ್ನು ಅನ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಅವರ ಅಳಿಯನ ವಿರುದ್ಧವೂ ಖಾಸಗಿ ಆರೋಪ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯನ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಐದು ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ದೇವನಹಳ್ಳಿಯಲ್ಲಿರುವಂತ ಏರೋಸ್ಪೇಸ್ ಪಾರ್ಕ್ ಬಳಿ ಸಿಎ ಸೈಟ್ ಮಂಜೂರು ಮಾಡಲಾಗಿತ್ತು.
ಸಿದ್ಧಾರ್ಥ ವಿಹಾರ ಟ್ರಸ್ಟ್ ನಿಂದ ಏರೋಸ್ಪೇಸ್, ಸಂಶೋಧನೆ ಸೇರಿದಂತೆ ಇತರೆ ಯಾವುದೇ ಅನುಭವ ಇಲ್ಲದೇ ಇದ್ದರೂ ಈ ಉದ್ದೇಶಕ್ಕಾಗಿ ಸಲ್ಲಿಸಲಾಗಿದ್ದಂತ ಅರ್ಜಿ ಕಾರಣ ಐದು ಎಕರೆ ಭೂಮಿಯನ್ನು ಸರ್ಕಾರದಿಂದ ಮಂಜೂರು ಮಾಡಲಾಗಿದೆ ಎಂಬುದಾಗಿ ವಿಜಯ್ ರಾಘವನ್ ಆರೋಪಿಸಿದ್ದಾರೆ.
ಇದಲ್ಲದೇ 2014ರಲ್ಲಿ ಬಿಟಿಎಂ 4ನೇ ಹಂತದಲ್ಲಿನ 2ನೇ ಬ್ಲಾಕ್ ನಲ್ಲಿ ಬಿಡಿಎ ವ್ಯಾಪ್ತಿಯ 2 ಎಕರೆ ಸಿಎ ನಿವೇಶವನ್ನು ಪರಭಾರೆ ಮಾಡಲಾಗಿದೆ. ಅಲ್ಲದೇ ದಲಿತರೆಂದು ಶೇ.50ರಷ್ಟು ಸಬ್ಸಿಡಿ ಕೂಡ ಪಡೆದಿದ್ದಾರೆ ಎಂಬುದಾಗಿಯೂ ಮತ್ತೊಂದು ಖಾಸಗಿ ದೂರಿನಲ್ಲಿ ಆರೋಪಿಸಿದ್ದಾರೆ.
ಇಂದು ವಿಜಯ್ ರಾಘವನ್ ಎಂಬುವರು ಸಲ್ಲಿಸಿದ್ದಂತ ಈ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಿತು. ಖಾಸಗಿ ದೂರುದಾರರ ಪರವಾಗಿ ವಕೀಲೆ ಲಕ್ಷ್ಮೀ ಐಯ್ಯಂಗಾರ್ ಮಂಡಿಸಿದಂತ ವಾದವನ್ನು ಆಲಿಸಿದಂತ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆಗಸ್ಟ್.5ಕ್ಕೆ ವಿಚಾರಣೆ ಮುಂದೂಡಿದೆ.
ಹಾವೇರಿಯಲ್ಲಿ ಬರ್ತ್‌ಡೇ ದಿನವೇ ಬ್ರಿಡ್ಜ್ ಮೇಲಿನಿಂದ ತಳ್ಳಿ ಕಾಂಗ್ರೆಸ್ ಯುವ ಕಾರ್ಯಕರ್ತನನ್ನು ಹತ್ಯೆ
ಕಾಂಗ್ರೆಸ್ ಸರ್ಕಾರದ ವಿರುದ್ಧದ BJP ಪ್ರತಿಭಟನೆ: ಅನ್ನದಾತರನ್ನು ಕಡೆಗಣಿಸಿದವರಿಗೆ ಧಿಕ್ಕಾರವೆಂದ ಬಿವೈ ವಿಜಯೇಂದ್ರ
ಸಾಗರದ ‘ತಾಯಿ-ಮಕ್ಕಳ ಆಸ್ಪತ್ರೆ’ಯಲ್ಲಿ ಕಳುವಾದ ಜನರೇಟರ್ ಹಾಳಾಗಿತ್ತು, 62.5 ಕೆವಿ ಸಾಮರ್ಥ್ಯದ್ದು: ವರದಿ