ನವದೆಹಲಿ : ನಿಮಿಷಾ ಪ್ರಿಯಾ ಪ್ರಕರಣದ ಕುರಿತು ವದಂತಿಗಳಿಂದ ದೂರವಿರಲು ವಿದೇಶಾಂಗ ಸಚಿವಾಲಯ (MEA) ಮನವಿ ಮಾಡಿದೆ. ಇದು ಸೂಕ್ಷ್ಮ ವಿಷಯವಾಗಿದ್ದು, ಭಾರತ ಸರ್ಕಾರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ವಿದೇಶಿ ಸ್ನೇಹಪರ ರಾಷ್ಟ್ರಗಳೊಂದಿಗೆ ಸಂಪರ್ಕವೂ ಮುಂದುವರೆದಿದೆ ಎಂದು ಸಚಿವಾಲಯ ಹೇಳಿದೆ.
MEA ವಕ್ತಾರ ರಣಧೀರ್ ಜೈಸ್ವಾಲ್, ‘ಇದು ಸೂಕ್ಷ್ಮ ವಿಷಯ. ಭಾರತ ಸರ್ಕಾರ ನಿರಂತರವಾಗಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ. ನಮ್ಮ ಪ್ರಯತ್ನಗಳಿಂದಾಗಿ, ಶಿಕ್ಷೆಯ ಮರಣದಂಡನೆಯನ್ನ ಮುಂದೂಡಲಾಗಿದೆ. ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಕೆಲವು ಸ್ನೇಹಪರ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಸುದ್ದಿಗಳು ದಾರಿತಪ್ಪಿಸುವಂತಿವೆ, ದಯವಿಟ್ಟು ನಮ್ಮಿಂದ ಅಧಿಕೃತ ನವೀಕರಣಕ್ಕಾಗಿ ಕಾಯಿರಿ’ ಎಂದು ಹೇಳಿದರು.
ಭಾರತದ ಮತ್ತು ರಷ್ಯಾದ ಸಂಬಂಧಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗಳ ನಂತರ, ವಿದೇಶಾಂಗ ಸಚಿವಾಲಯವು, “ವಿವಿಧ ದೇಶಗಳೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳು ಸ್ವತಂತ್ರವಾಗಿವೆ ಮತ್ತು ಅವುಗಳ ಸ್ವಂತ ಮೌಲ್ಯಗಳನ್ನು ಆಧರಿಸಿವೆ. ಭಾರತ-ರಷ್ಯಾ ಸಂಬಂಧಗಳು ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ” ಎಂದು ಹೇಳಿದೆ.
BREAKING: ಧರ್ಮಸ್ಥಳ ಕೇಸ್: ಮಾಧ್ಯಮಗಳ ಮೇಲಿನ ನಿರ್ಬಂಧ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು
ಕಾಂಗ್ರೆಸ್ ಸರ್ಕಾರದ ವಿರುದ್ಧದ BJP ಪ್ರತಿಭಟನೆ: ಅನ್ನದಾತರನ್ನು ಕಡೆಗಣಿಸಿದವರಿಗೆ ಧಿಕ್ಕಾರವೆಂದ ಬಿವೈ ವಿಜಯೇಂದ್ರ
ರಷ್ಯಾ-ಭಾರತದ ನಡುವಿನ ಸ್ನೇಹದಿಂದ ಸಿಟ್ಟಾಗಿರುವ ಅಮೆರಿಕಕ್ಕೆ ಕೇಂದ್ರ ಸರ್ಕಾರ ದಿಟ್ಟ ಉತ್ತರ