ಧರ್ಮಸ್ಥಳ: ಇಲ್ಲಿ ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ ಸಂಬಂಧ ಇಂದು 7ನೇ ಪಾಯಿಂಟ್ ನಲ್ಲಿ ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆ ಬಳಿಕ 8ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಸಿದಂತ ಸಂದರ್ಭದಲ್ಲಿ 6 ಅಡಿ ಅಗೆದಂತ ಸಂದರ್ಭದಲ್ಲಿ ಅಸ್ಥಿ ಪಂಜರದ ಯಾವುದೇ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಇಂದಿನ ಶೋಧ ಕಾರ್ಯಾಚರಣೆಯನ್ನು ಎಸ್ಐಟಿ ಮುಕ್ತಾಯಗೊಳಿಸಿದೆ.
ಇಂದು ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ ಸಂಬಂಧ 7ನೇ ಪಾಯಿಂಟ್ ಬಳಿಕ 8ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. 65 ಜನರಿಂದ ಶೋಧ ಕಾರ್ಯಾಚರಣೆಯನ್ನು ಎಸ್ಐಟಿ ಅಧಿಕಾರಿಗಳ ತಂಡವು ನಡೆಸಿತು.
8ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ವೇಳೆಯಲ್ಲಿ ಸಣ್ಣ ಕಲ್ಲು ಬಂಡೆಗಳು ಸಿಕ್ಕಿದ್ದವು. ಸತತ ಎರಡು ಗಂಟೆಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಸ್ಥಳದಲ್ಲೇ ಪುತ್ತೂರು ಎಸಿ, ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮೊಕ್ಕಾಂ ಹೂಡಿದ್ದರು.
ಇನ್ನೂ ಎಫ್ಎಸ್ಎಲ್ ಟೀಂ, ಅರಣ್ಯ ಸಿಬ್ಬಂದಿ, ಪೌರಕಾರ್ಮಿಕರಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಳೆದ ಎರಡು ಗಂಟೆಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ 6 ಅಡಿ ಭೂಮಿಯನ್ನು ಅಗೆದು ನೋಡಿದರೂ ಯಾವುದೇ ಶವ ಹೂತಿಟ್ಟ ಕುರುಹುಗಳು, ಅಸ್ಥಿ ಪಂಜರಗಳು ದೊರೆತಿಲ್ಲ. ಈ ಹಿನ್ನಲೆಯಲ್ಲಿ ಇಂದಿನ ಶೋಧ ಕಾರ್ಯಾಚರಣೆಯನ್ನು ಎಸ್ಐಟಿ ಅಂತ್ಯಗೊಳಿಸಿದೆ.
ಅಂದಹಾಗೇ ಇದಕ್ಕೂ ಮೊದಲು 7ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಕರ್ಚಿಫ್ ಒಂದು ದೊರೆತಿತ್ತು. ಅದನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಎಫ್ಎಸ್ಎಲ್ ತಂಡಕ್ಕೆ ನೀಡಿ, ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ.
BREAKING: ಧರ್ಮಸ್ಥಳ ಕೇಸ್: ಮಾಧ್ಯಮಗಳ ಮೇಲಿನ ನಿರ್ಬಂಧ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು
ಕಾಂಗ್ರೆಸ್ ಸರ್ಕಾರದ ವಿರುದ್ಧದ BJP ಪ್ರತಿಭಟನೆ: ಅನ್ನದಾತರನ್ನು ಕಡೆಗಣಿಸಿದವರಿಗೆ ಧಿಕ್ಕಾರವೆಂದ ಬಿವೈ ವಿಜಯೇಂದ್ರ