ಬೆಂಗಳೂರು: ರಾಜ್ಯ ಸರ್ಕಾರದಿಂದ CET, NEET, JEE ತರಬೇತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ ವಿದ್ಯಾ ವಿಜೇತ ಕಾರ್ಯಕ್ರಮದಡಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 25,000 ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ತರಬೇತಿ ಮುಂದುವರೆಸಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರವು ನಡವಳಿಯನ್ನು ಹೊರಡಿಸಿದ್ದು, 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ 111(9)ರಲ್ಲಿ ಈ ಕೆಳಕಂಡಂತೆ ಘೋಷಿಸಲಾಗಿರುತ್ತದೆ ಎಂದಿದೆ.
“ವಿದ್ಯಾ ವಿಜೇತ ಕಾರ್ಯಕ್ರಮದಡಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 25000 ವಿದ್ಯಾರ್ಥಿಗಳಿಗೆ CET/NEET/JEE ತರಬೇತಿ ನೀಡಲಾಗಿದ್ದು, ಸದರಿ ಕಾರ್ಯಕ್ರಮವನ್ನು ಮುಂದುವರೆಸಲು 5 ಕೋಟಿ ರೂ ಒದಗಿಸಲಾಗುವುದು ಎಂದು ಹೇಳಿದೆ.
2024-25ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಆಯವ್ಯಯ ಕಂಡಿಕೆ 101ಕ್ಕೆ ಸಂಬಂಧಿಸಿದಂತೆ, “ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಸಂಯೋಜನೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್-ಲೈನ್ ತರಗತಿಗಳ ಮೂಲಕ NEET/JEE/CET ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲು ಒಟ್ಟು ರೂ.10.00 ಕೋಟಿ ವೆಚ್ಚದಲ್ಲಿ ಅಂದಾಜು 20,000 ವಿದ್ಯಾರ್ಥಿಗಳಿಗೆ ಹಾಗೂ ಆದರ್ಶ ಯೋಜನೆ ಅಡಿಯಲ್ಲಿ ರೂ.2.50 ಕೋಟಿ ವೆಚ್ಚದಲ್ಲಿ 5,000 ವಿದ್ಯಾರ್ಥಿಗಳಿಗೆ ಯೋಜನೆಯನ್ನು ಸಂಯೋಜಿಸಿ ಒಟ್ಟಾರ ರೂ.12.50 ಕೋಟಿಗಳ ವೆಚ್ಚದಲ್ಲಿ 25,000 ವಿದ್ಯಾರ್ಥಿಗಳಿಗೆ ಟೆಂಡರ್ ಮೂಲಕ ತರಬೇತುದಾರ ಸಂಸ್ಥೆಯನ್ನು ಗುರುತಿಸಿ, ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮತಿ ನೀಡಿ ಆದೇಶಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ, 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಮತ್ತು ಇತರೆ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಒದಗಿಸಿರುವ ಅನುದಾನದ ಕುರಿತು “Budget Advice”ನ್ನು ಹೊರಡಿಸಲಾಗಿದೆ.
ಪ್ರಸ್ತಾವನೆಯಲ್ಲಿ, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಇವರು 2025-26ನೇ ಸಾಲಿನಲ್ಲಿ 051 ರಲ್ಲಿ ರೂ 100.00 ಲಕ್ಷಗಳು ಸಾಮಾನ್ಯ ವೆಚ್ಚಗಳಿಗೆ ಹಾಗೂ 381.00 ಲಕ್ಷಗಳು ವಿದ್ಯಾ ವಿಜೇತ ಕಾರ್ಯಕ್ರಮಕ್ಕೆ ಸಂಬಂಧಿಸಿರುತ್ತದೆ.
2024-25ನೇ ಸಾಲಿನಿಂದ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಸಂಯೋಜನೆಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವ ಹಾಗೂ ಫಲಿತಾಂಶ ಸುಧಾರಿಸುವುದಕ್ಕಾಗಿ CET ಪುವೇಶ ಪರೀಕ್ಷೆಗಳಿಗೆ Online ತರಗತಿಗಳನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ಮೂಲಕ Pace ಸಂಸ್ಥೆಯವರನ್ನು ಆಯ್ಕೆ ಮಾಡಿ ದಿನಾಂಕ:25-11-2024 ರಿಂದ ಪ್ರತಿ ದಿನಕ್ಕೆ ಎರಡು ಅವಧಿಗಳ ತರಬೇತಿಯನ್ನು ನಡೆಸಲು ಪಥಮ ಪಿಯುಸಿಯಿಂದ 12,500 ಹಾಗೂ ದ್ವಿತೀಯ ಪಿಯು ತರಗತಿಗಳಿಂದ 12,500ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಪುವೇಶ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗಿತ್ತು, ಸದರಿ ಕಾರ್ಯಕ್ರಮವು ಎರಡು ವರ್ಷಗಳದಾಗಿದ್ದು ಈಗಾಗಲೇ ಒಂದು ವರ್ಷದ ತರಬೇತಿ ಕಾರ್ಯವನ್ನು ಮುಗಿಸಲಾಗಿದೆ ಸದರಿ ತರಬೇತಿಯ ಅಂದಾಜು ವೆಚ್ಚ ರೂ.6.82 ಕೋಟಿಯಾಗಿದ ಎಂದು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ರವರು ವರದಿ ಸಲ್ಲಿಸಿರುತ್ತಾರೆ.
ಮುಂದುವರಿದ ಕಾರ್ಯಕ್ರಮವಾದ ಹಿನ್ನೆಲೆಯಲ್ಲಿ 2025-26ನೇ ಸಾಲಿಗೆ ರೂ. 3.81 ಕೋಟಿಗಳ ಅನುದಾನವು ಆಯವ್ಯದಲ್ಲಿ ಹಂಚಿಕೆಯಾಗಿರುತ್ತದೆ. ಪಥಮ ಪಿಯುಸಿ ಯ ನೋಂದಣಿ ಕಾರ್ಯ 30ನೇ ಜೂನ್-2025 ರಂದು ಮುಗಿದಿರುವ ಹಿನ್ನೆಲೆಯಲ್ಲಿ ಜುಲೈ ಮೊದಲನೇ ವಾರದಲ್ಲಿ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಜುಲೈ 2ನೇ ವಾರದಿಂದ ಪ್ರಥಮ ಪಿಯು ತರಗತಿಗಳಿಗೂ ಸಹ Online ತರಗತಿಗಳನ್ನು ಆರಂಭಿಸಲಾಗುವುದು ಎಂದು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ವರದಿಸಿರುತ್ತಾರೆ.
2024-25ನೇ ಸಾಲಿನ ಆಯವ್ಯ ಘೋಷಿತ ಕಂಡಿಕೆ ವಿದ್ಯಾವಿಜೇತ ಕಾರ್ಯಕ್ರಮದಡಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 25.000 ವಿದ್ಯಾರ್ಥಿಗಳಿಗೆ CET/NEET/JEE ಪರೀಕ್ಷೆಗಳಿಗೆ ತರಬೇತಿ ನೀಡಲಾಗಿರುವುದರಿಂದ ಹಾಗೂ ಸದರಿ ಕಾರ್ಯಕ್ರಮವು 2 ವರ್ಷಗಳದ್ದು ಆಗಿರುವುದರಿಂದ ಮುಂದುವರಿಸಲು ರೂ.381.00 ಲಕ್ಷಗಳನ್ನು ಆಯವ್ಯಯದಲ್ಲಿ ಹಂಚಿಕೆ ಮಾಡಿರುವುದರಿಂದ ಕಾರ್ಯಕ್ರಮವನ್ನು 2025-263 ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳಿಸಲು ಮುಂದುವರೆದ ಯೋಜನೆಯ ಆದೇಶವನ್ನು ಹೊರಡಿಸಲು ಕೋರಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಳೆದ 2024-25ನೇ ಸಾಲಿನಲ್ಲಿ “ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಸಂಯೋಜನೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್-ಲೈನ್ ತರಗತಿಗಳ ಮೂಲಕ NEET/JEE/CET ಪುವೇಶ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲು ಒಟ್ಟು ರೂ.10.00 ಕೋಟಿ ವೆಚ್ಚದಲ್ಲಿ ಅಂದಾಜು 20,000 ವಿದ್ಯಾರ್ಥಿಗಳಿಗೆ ಹಾಗೂ ಆದರ್ಶ ಯೋಜನೆ ಅಡಿಯಲ್ಲಿ ರೂ.2.50 ಕೋಟಿ ವೆಚ್ಚದಲ್ಲಿ 5,000 ವಿದ್ಯಾರ್ಥಿಗಳಿಗೆ ಯೋಜನೆಯನ್ನು ಸಂಯೋಜಿಸಿ ಒಟ್ಟಾರೆ ರೂ.12.50 ಕೋಟಿಗಳ ವೆಚ್ಚದಲ್ಲಿ ಅನುಷ್ಟಾನಗೊಳಿಸಲು ಆದೇಶಿಸಲಾಗಿದ್ದು, ಮುಂದುವರೆದಂತೆ 2025-26ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ:111ರ ಉಪ ಕಂಡಿಕೆ:09 ರಲ್ಲಿ ವಿದ್ಯಾವಿಜೇತ ಕಾರ್ಯಕ್ರಮದಡಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 25,000 ವಿದ್ಯಾರ್ಥಿಗಳಿಗೆ CET/NEET/JEE Online ಈಗಾಗಲೆ ನೀಡುತ್ತಿರುವ ತರಬೇತಿ ಕಾರ್ಯಕ್ರಮವನ್ನು ಮುಂದುವರೆಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದ.
ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು 2025-26ನೇ ಸಾಲಿನ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಈ ಕಛೇರಿಯ ಲೆಕ್ಕ ಶೀರ್ಷಿಕೆ 2022-02-001-0-01 ಯ ಉಪ ಲೆಕ್ಕ ಶೀರ್ಷಿಕೆ 051 ಅಡಿಯಲ್ಲಿ ಒದಗಿಸಲಾಗಿರುವ/ಒದಗಿಸಲಾಗುವ ಅನುದಾನದಿಂದ ನಿಯಮಾನುಸಾರ ವೆಚ್ಚಗಳನ್ನು ಭರಿಸತಕ್ಕದ್ದು.
2025-26ನೇ ಸಾಲಿಗೆ ಪಸ್ತಾಪಿತ ಲೆಕ್ಕ ಶೀರ್ಷಿಕೆಯ ಉಪ ಲೆಕ್ಕ ಶೀರ್ಷಿಕೆ:051ರಡಿ ಒದಗಿಸಿರುವ ರೂ. 481.00 ಲಕ್ಷಗಳಲ್ಲಿ ರೂ. 381.00ಲಕ್ಷಗಳನ್ನು ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ನಿಗದಿಪಡಿಸಲಾಗಿದೆ.
ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಆದೇಶಗಳನ್ನು ಮಾರ್ಗಸೂಚಿಗಳನ್ನು ಸಂಬಂಧಿತ ತರಬೇತಿ ನೀಡುತ್ತಿರುವ ಸಂಸ್ಥೆಗೆ ವಿಧಿಸಿರುವ ಎಲ್ಲ ಷರತ್ತು ನಿಬಂಧನೆಗಳನ್ನು ಹಾಗೂ ಅವರು ನಡೆಸುತ್ತಿರುವ ತರಬೇತಿಯ ವಿವರಗಳನ್ನು ನಿರ್ದೇಶನಾಲಯದ ಜಾಲತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅಳವಡಿಸಲು ಕ್ರಮವಹಿಸತಕ್ಕದು. ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಬೆಂಗಳೂರು ಇವರು ಉತ್ತಮ ಗುಣಮಟ್ಟದ ಸೇವೆಯನ್ನು ಸಮಾಂಜಸದರದಲ್ಲಿ ಒದಗಿಸುತ್ತಿರುವುದರ ಬಗ್ಗೆ ದೃಢಪಡಿಸಿಕೊಳ್ಳತಕ್ಕದ್ದು ಹಾಗೂ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ಬಗ್ಗೆ ಪ್ರತಿ ತಿಂಗಳು ಹಾಗು ನಿರಂತರ ಮೇಲ್ವಿಚಾರಣೆ ನಡೆಸಿ ಖಾತ್ರಿಪಡಿಸಿಕೊಳ್ಳತಕ್ಕದ್ದು.
ಲೋಕಾಯುಕ್ತ ನ್ಯಾಯಾಲಯದ ಆದೇಶ: ಹಾಸನದಲ್ಲಿ 112 ಎಕರೆ ಅರಣ್ಯ ಒತ್ತುವರಿ ತೆರವು
SHOCKING: 40 ವರ್ಷದ ವಿವಾಹಿತನೊಂದಿಗೆ 13 ವರ್ಷದ ಬಾಲಕಿ ಮದುವೆ : ಅರ್ಚಕ ಸೇರಿ ನಾಲ್ವರು ವಿರುದ್ಧ `FIR’ ದಾಖಲು.!