ಬೆಂಗಳೂರು: ಯಲಹಂಕ ವಲಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೆಂಪೆಗೌಡನಗರದಲ್ಲಿ ನಿನ್ನೆ ದಿನಾಂಕ:28-07-2025ರ ನಸುಕಿನಜಾವ 3 ಗಂಟೆಗೆ ಸುಮಾರು 68 ವಯಸ್ಸಿನ ಸೀತಪ್ಪ ರವರು ಬೀದಿನಾಯಿಗಳ ದಾಳಿಯಿಂದ ಮೃತಪಟ್ಟಿರಬಹುದೆಂದು ಅನುಮಾನಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಸೀತಪ್ಪ ರವರು ಮುಂಜಾನೆ 3 ಗಂಟೆಗೆ ಚಹಾ ಸೇವಿಸಲು ಸ್ಥಳೀಯ ಚಹಾ ಅಂಗಡಿಗೆ ತೆರೆಳಿದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ವಿಚಾರಣೆ ವೇಳೆಯಲ್ಲಿ ಮಾಹಿತಿ ನೀಡಿರುತ್ತಾರೆ ಹಾಗೂ ಕುಟುಂಬಸ್ಥರು ಸೀತಪ್ಪ ರವರ ಮನಸ್ಥಿತಿ ಸರಿಯಿರುವುದಿಲ್ಲ ಎಂದು ಮಾಹಿತಿ ನೀಡಿರುತ್ತಾರೆ.
ಸದರಿ ಘಟನೆಯ ಬಗ್ಗೆ ಯಾವುದೇ ನಿಖರ ಸಾಕ್ಷಾಧಾರಗಳು (CC TV Footage, Witness) ಲಭ್ಯವಿರುವುದಿಲ್ಲ. ಮುಂಜಾನೆಯ ಸಮಯವಾಗಿರುವುದರಿಂದ ಜನ ಸಂಚಾರ ವಿರಳವಾಗಿದ್ದು, ಸಮಯಕ್ಕೆ ಸರಿಯಾಗಿ ಸಹಾಯ ದೊರೆಯದೆ ಇಲ್ಲದಿರುವುದು ವಿಚಾರಣೆ ವೇಳೆ ತಿಳಿದುಬಂದಿರುತ್ತದೆ. ಸ್ವಲ್ಪ ಸಮಯದ ನಂತರ ಸಾರ್ವಜನಿಕರಿಂದ ಸಹಾಯವಾಣಿ 112ಕ್ಕೆ ದೂರು ಸ್ವೀಕೃತವಾದ ಹಿನ್ನಲೆಯಲ್ಲಿ ಸ್ಥಳೀಯ ಪೋಲಿಸರು ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡ ಸೀತಪ್ಪ ರವರನ್ನು ಯಲಹಂಕ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಆಸ್ಪತ್ರೆ ವೈದ್ಯರು ಸದರಿಯವರು ಮೃತಪಟ್ಟಿರುವುದಾಗಿ ತಿಳಿಸಿರುವ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಶವವನ್ನು ಕಳುಹಿಸಲಾಗಿರುತ್ತದೆ. ಮರಣೋತ್ತರ ಪರೀಕ್ಷೆಯ ವರದಿಯು ನಿರೀಕ್ಷಣೆಯಲ್ಲಿದೆ.
ಬಿಬಿಎಂಪಿ ಪಶುಪಾಲನಾ ವಿಭಾಗದಿಂದ ಘಟನೆ ನಡೆದ ಸ್ಥಳದಲ್ಲಿರುವ 16 ಬೀದಿನಾಯಿಗಳನ್ನು ಹಿಡಿದು ವೀಕ್ಷಣೆಗಾಗಿ ಯಲಹಂಕ ವಲಯದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೇಂದ್ರ(ಎಬಿಸಿ ಸೆಂಟರ್)ದಲ್ಲಿ ವೀಕ್ಷಣೆಗಾಗಿ ಇರಿಸಲಾಗಿದೆ. ಇನ್ನುಳಿದ ನಾಯಿಗಳನ್ನು ಹಿಡಿಯಲಾಗುತ್ತಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸದರಿ ಮೃತಪಟ್ಟ ವ್ಯಕ್ತಿಯು ನಾಯಿ ಕಡಿತ/ದಾಳಿಯಿಂದ ಮರಣ ಹೊಂದಿರುವುದಾಗಿ ದೃಢಪಟ್ಟಲ್ಲಿ ಪಾಲಿಕೆಯ ವತಿಯಿಂದ ನಿಯಮಾನುಸಾರ ಪರಿಹಾರವನ್ನು ಕುಟುಂಬಸ್ಥರಿಗೆ ನೀಡಲಾಗುವುದು ಎಂದಿದೆ.
ಕರ್ನಾಟಕದಿಂದ ಕಾಶಿ ದರ್ಶನ ಮತ್ತು ದಕ್ಷಿಣ ಯಾತ್ರೆಗಾಗಿ ಭಾರತ್ ಗೌರವ್ ಯಾತ್ರೆಗೆ ವಿಶೇಷ ರೈಲುಗಳು
BREAKING: ಮಂಡ್ಯದ ‘ಮುತ್ತತ್ತಿ ಪ್ರವಾಸಿ ತಾಣ’ಕ್ಕೆ ಪ್ರವಾಸಿಗರಿಗೆ ನಿಷೇಧ: ತಹಶೀಲ್ದಾರ್ ಆದೇಶ