ಬೆಂಗಳೂರು: ಇಂದು ಐವರು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ. ಹಾಗಾದ್ರೆ ಯಾರ ಬಳಿ ಎಷ್ಟು ಸಿಕ್ತು ಎನ್ನುವ ಬಗ್ಗೆ ಮುಂದೆ ಓದಿ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಚಿತ್ರದುರ್ಗ-1, ಚಿಕ್ಕಬಳ್ಳಾಪುರ-1 ಮತ್ತು ಹಾಸನ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 5 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ.
ಈ ದಿನ ದಿನಾಂಕ: 29.07.2025 ರಂದು ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬAಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 25 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ.
1) ಕೆ. ಓಂಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಬಿ.ಡಿ.ಎ, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡAತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 2 ವಾಸದ ಮನೆಗಳು ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 4,78,20,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 5,00,000/- ನಗದು, ರೂ. 60,96,365/- ಬೆಲೆ ಬಾಳುವ ಚಿನ್ನಾಭರಣಗಳು, ರೂ 34,00,000/- ಬೆಲೆ ಬಾಳುವ ವಾಹನಗಳು, ರೂ. 48,00,000/- ಬ್ಯಾಂಕ್ ಠೇವಣಿ, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,47,96,365/-
(ಇ) ಒಟು ಆಸ್ತಿ ಮೌಲ್ಯ- ರೂ. 6,26,16,365/-
2) ಎನ್. ವೆಂಕಟೇಶ್, ತೆರಿಗೆ ಮೌಲ್ಯಮಾಪಕ, ಶೆಟ್ಟಿಹಳ್ಳಿ ಉಪ-ವಿಭಾಗ, ಬಿಬಿಎಂಪಿ, ಬೆಂಗಳೂರು.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡAತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 3 ವಾಸದ ಮನೆಗಳು, 1 ಫಾರ್ಮ್ ಹೌಸ್, 6 ಎಕರೆ 17 ಗುಂಟೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,25,05,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 2,80,205/- ನಗದು, ರೂ. 10,85,059/- ಬೆಲೆ ಬಾಳುವ ಚಿನ್ನಾಭರಣಗಳು, ರೂ 3,85,000/- ಬೆಲೆ ಬಾಳುವ ವಾಹನಗಳು, ರೂ 15,00,000/- ಬೆಲೆಬಾಳುವ ಇತರೆ ವಸ್ತುಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 32,50,264/-
(ಇ) ಒಟು ಆಸ್ತಿ ಮೌಲ್ಯ- ರೂ. 2,57,55,264/-
3) ಡಾ. ವೆಂಕಟೇಶ್ ಜಿ, ತಾಲ್ಲೂಕು ವೈಧ್ಯಾಧಿಕಾರಿ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡAತೆ ಆಸ್ತಿಯನ್ನು ಹೊಂದಿರುವುದು ಕಂಡುಬAದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 5 ನಿವೇಶನಗಳು, 2 ವಾಸದ ಮನೆಗಳು, 3 ಎಕರೆ 5 ಗುಂಟೆ ಕೃಷಿ ಜಮೀನು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 2,87,36,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 54,200/- ನಗದು, ರೂ 17,25,300/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 21,40,000/- ಬೆಲೆಬಾಳುವ ವಾಹನಗಳು ಮತ್ತು ರೂ. 28,30,250/- ಇತರೆ ಮತ್ತು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 67,49,750/-
(ಇ) ಒಟು ಆಸ್ತಿ ಮೌಲ್ಯ- ರೂ 3,54,85,750/-
4) ಜಯಣ್ಣ. ಆರ್, ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ವಿಭಾಗ, ಹಾಸನ
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡAತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 17 ನಿವೇಶನಗಳು, 8 ವಾಸದ ಮನೆಗಳು, 1 ಎಕರೆ 36 ಗುಂಟೆ ಕೃಷಿ ಜಮೀನು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 5,59,59,749/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 1,36,000/- ನಗದು, ರೂ 18,99,600/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 26,00,000/- ಬೆಲೆಬಾಳುವ ವಾಹನಗಳು, ರೂ. 23,00,000/- ಬೆಲೆಬಾಳುವ ಡೆಪಾಸಿಟ್ ಮತ್ತು ಲಾರ‍್ಸ್, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 69,35,600/-
(ಇ) ಒಟು ಆಸ್ತಿ ಮೌಲ್ಯ- ರೂ 6,28,95,349/-
5) ಆಂಜನೇಯ ಮೂರ್ತಿ. ಎಂ, ಕಿರಿಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 8 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡAತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 5 ನಿವೇಶನಗಳು, 1 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 4,83,46,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 50,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 15,65,000/- ಬೆಲೆಬಾಳುವ ವಾಹನಗಳು, ರೂ. 28,00,000/- ಇತರೆ ವಸ್ತುಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 93,65,000/-
(ಇ) ಒಟು ಆಸ್ತಿ ಮೌಲ್ಯ- ರೂ 5,77,11,000/-
BREAKING: ಆಪರೇಷನ್ ಸಿಂಧೂರ ಮೂಲಕ ಭಾರತ ಸೇನೆ ಶೌರ್ಯ ಪ್ರದರ್ಶನ: ಪ್ರಧಾನಿ ಮೋದಿ
Watch Video: ನಾವು ಪಾಕಿಸ್ತಾನದ ಮೂಲೆ ಮೂಲೆಗಳಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶ: ಪ್ರಧಾನಿ ಮೋದಿ