ನವದೆಹಲಿ: ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತಂತೆ ಮಹತ್ವದ ಚರ್ಚೆ ನಡೆಯುತ್ತಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಆಪರೋಷನ್ ಸಿಂಧೂರ ಮೂಲಕ ಭಾರತದ ಸೇನೆ ಶೌರ್ಯ ಪ್ರದರ್ಶಿಸಿದೆ ಎಂಬುದಾಗಿ ಹೇಳಿದರು.
ಇಂದು ಲೋಕಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಈ ಸದನದ ಮುಂದೆ ಭಾರತದ ಪರವಾಗಿ ಮಾತನಾಡಲು ನಾನು ಇಲ್ಲಿ ನಿಂತಿದ್ದೇನೆ. ಭಾರತದ ಪರವಾಗಿ ಮಾತನಾಡಲು ಸಾಧ್ಯವಾಗದವರಿಗೆ ಕನ್ನಡಿ ತೋರಿಸಲು ನಾನು ಇಲ್ಲಿ ನಿಂತಿದ್ದೇನೆ ಎಂದು ಹೇಳಿದರು.
ಈ ಅಧಿವೇಶನವು ಭಾರತದ ವಿಜಯೋತ್ಸವದ ಅಧಿವೇಶನವಾಗಿದೆ. ಸೇನೆ ಅಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿದಂತ ಭಾರತೀಯ ಸೇನೆಗೆ ಇಡೀ ದೇಶದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
140 ಕೋಟಿ ಭಾರತೀಯರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಪಹಲ್ಗಾಮ್ ನಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಭಾರತದಲ್ಲಿ ದಂಗೆ, ಗಲಭೆ ಎಬ್ಬಿಸುವ ಕುತಂತ್ರಗಳು ನಡೆದಿದ್ದವು ಎಂಬುದಾಗಿ ಆಪರೇಷನ್ ಸಿಂಧೂರ್ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದರು.
#OperationSindoor | PM Narendra Modi says, "I stand here to present India's side before this House. Those who don't see India's side, I stand here to show them a mirror." pic.twitter.com/Kym2riDeOs
— ANI (@ANI) July 29, 2025