ಮಂಡ್ಯ : ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕೆ.ಎಂ.ಉದಯ್ ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುಟ್ಟನ್ನು ಬಹಿರಂಗಪಡಿಸಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ತಿಮ್ಮದಾಸ್ ಹೋಟೆಲ್ ಸಮೀಪ ಸೋಮವಾರ ನಡೆದ ಸಾಧನಾ ಸಮಾವೇಶ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಚುನಾವಣೆಗೂ ಮುನ್ನ ನನ್ನ ಬಳಿ ಒಂದು ಬೇಡಿಕೆ ಇಟ್ಟಿದ್ದರು. ನನ್ನ ಕುಟುಂಬದ ಕುಡಿ ಗುರುಚರಣ್ ಗೆ ಈ ಬಾರಿ ಟಿಕೆಟ್ ಕೊಡು ಅಂತ ಹೇಳಿದ್ದರು. ನಾನು ಸಹ ಗುರುಚರಣ್ ಗೆ ಟಿಕೆಟ್ ನೀಡಲು ಒಲವು ತೋರಿದ್ದೆ. ಅದರಂತೆ ಕ್ಷೇತ್ರದಲ್ಲಿ ಸಾಮಾಜಿಕ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ಹೇಳಿದ್ದೆ. ಆದರೆ, ಮೂರು ಬಾರಿ ಮದ್ದೂರು ಕ್ಷೇತ್ರದಲ್ಲಿ ಸರ್ವೆ ಕಾರ್ಯ ನಡೆಸಿದ್ದೆ ಮೂರು ಬಾರಿಯೂ ಕೆ.ಎಂ.ಉದಯ್ ಕಡೆಗೆ ಕ್ಷೇತ್ರದ ಜನರು ಒಲವು ತೋರಿದ್ದರು.
ಹೀಗಾಗಿ ಎಸ್.ಎಂ.ಕೃಷ್ಣ ಹಾಗೂ ಪ್ರೇಮ ಕೃಷ್ಣ ಅವರಲ್ಲಿ ಸರ್ವೆ ರೀಪೋರ್ಟ್ ಅನ್ನು ಮುಂದಿಟ್ಟೆ ಆಗ ಎಸ್.ಎಂ.ಕೃಷ್ಣ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಮದ್ದೂರಿನಲ್ಲಿ ಕೈ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂಬ ಹೇಳಿಕೆಯಿಂದ ಉದಯ್ ಗೆ ಟಿಕೆಟ್ ನೀಡುವಂತೆ ಮಾರ್ಗದರ್ಶನ ನೀಡಿದರು. ಹೀಗಾಗಿ ಗುರುಚರಣ್ ಗೆ ಟಿಕೆಟ್ ನಿರಾಕರಿಸಲಾಯಿತು ಎಂದು ಗುಟ್ಟನ್ನು ಬಹಿರಂಗಪಡಿಸಿದರು.
ಹೈಕಮಾಂಡ್ ಮುಂದೆ ನಾನು ಮತ್ತು ಸಿಎಂ ಕೆ.ಎಂ.ಉದಯ್ ಗೆ ಟಿಕೆಟ್ ಪ್ರಸ್ತಾವನೆ ಇಟ್ಟು ಕೊಡಿಸಲಾಯಿತು. ಅದರಂತೆ ನಾವು ಇಟ್ಟ ನಂಬಿಕೆಯಂತೆ ಮದ್ದೂರಿನ ಜನತೆ ಉದಯ್ ಗೆ ಆಶೀರ್ವಾದ ಮಾಡಿದ್ದಿರಿ. ಮದ್ದೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ನಾವು ಮತ್ತು ನಮ್ಮ ಸರ್ಕಾರ ಉದಯ್ ಗೆ ಬೆಂಬಲವಾಗಿ ನಿಂತಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿಗಳನ್ನು ನೀಡಲಾಗುತ್ತಿದೆ ಅದೇ ರೀತಿ ಮದ್ದೂರು ಕ್ಷೇತ್ರಕ್ಕೂ 1146 ಕೋಟಿ ಗೂ ಹೆಚ್ಚಿನ ಅನುದಾನವನ್ನು ನೀಡಿದ್ದೇವೆ ಮತ್ತು ಇನ್ನು ಮುಂದೆಯೂ ಅನುದಾನ ನೀಡಲಾಗುವುದು ನಿಮ್ಮ ಋಣ ತೀರಿಸಲಾಗುವುದು ಎಂದು ತಿಳಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಚಿತ್ರದುರ್ಗ ನಗರಸಭೆ ಉಪಾಧ್ಯಕ್ಷೆಯಾಗಿ ಶಕೀಲಾ ಬಾನು ಅವಿರೋಧವಾಗಿ ಆಯ್ಕೆ
‘ಹೋಂ ಸ್ಟೇ ನಿರ್ಮಾಣ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಹಾಯಧನಕ್ಕೆ ಅರ್ಜಿ ಆಹ್ವಾನ