ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿಮಾನ ಗಾಳಿಯಲ್ಲಿದ್ದಾಗ ಆಘಾತಕಾರಿ ಘಟನೆ ನಡೆದಿದೆ. ವಿಮಾನದೊಳಗೆ ಬಾಂಬ್ ಇಡುವುದಾಗಿ ವ್ಯಕ್ತಿಯೊಬ್ಬ ಕೂಗಿದ್ದು, ಭಾರಿ ಗದ್ದಲ ಸೃಷ್ಟಿಸಿದೆ. ಇದು ಪ್ರಯಾಣಿಕರಲ್ಲಿ ಭೀತಿ ಮೂಡಿಸಿತು. ನಿಖರವಾಗಿ ಹೇಳಬೇಕೆಂದ್ರೆ, ಲಂಡನ್’ನ ಲುಟನ್ ವಿಮಾನ ನಿಲ್ದಾಣದಿಂದ ಸ್ಕಾಟ್ಲೆಂಡ್’ನ ಗ್ಲಾಸ್ಗೋಗೆ ಹೊರಟಿದ್ದ ಈಸಿಜೆಟ್ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಗಾಳಿಯಲ್ಲಿದ್ದಾಗ, ಪ್ರಯಾಣಿಕರಲ್ಲಿ ಒಬ್ಬ ವ್ಯಕ್ತಿ ಎದ್ದು ವಿಮಾನದ ಮೇಲೆ ಬಾಂಬ್ ಇಡುವುದಾಗಿ ಕೂಗಾಡಿದ್ದಾನೆ.
ಅಲ್ಲಿಗೆ ನಿಲ್ಲದೆ, ಆ ವ್ಯಕ್ತಿ “ಅಮೆರಿಕಕ್ಕೆ ಸಾವು, ಟ್ರಂಪ್’ಗೆ ಸಾವು” ಎಂದು ಘೋಷಣೆಗಳನ್ನ ಕೂಗುತ್ತಾ “ಅಲ್ಲಾಹು ಅಕ್ಬರ್” ಎಂದು ಕೂಗುತ್ತಾ ಸಹ ಪ್ರಯಾಣಿಕರಲ್ಲಿ ಭಯಭೀತಿ ಮೂಡಿಸಿದರು. ನಂತ್ರ ಪ್ರಯಾಣಿಕರು ಆ ವ್ಯಕ್ತಿಯನ್ನ ಹಿಡಿದು ಕಟ್ಟಿಹಾಕಿದರು. ನಂತರ, ವಿಮಾನ ಇಳಿದಾಗ, ಗ್ಲ್ಯಾಸ್ಗೋ ಪೊಲೀಸರು ಆತನನ್ನ ವಶಕ್ಕೆ ಪಡೆದರು. ಆ ವ್ಯಕ್ತಿ ಈ ಕೂಗಾಡಿದ್ದು ಯಾಕೆ ಮತ್ತು ಅವನ ಹಿಂದೆ ಯಾರಾದರೂ ಇದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
‘DEATH to Trump’ and ‘ALLAHU AKBAR’ — man causes panic on flight
Says he’s going to ‘BOMB the plane’
SLAMMED to ground by passenger pic.twitter.com/mVYwXqx7Yr
— RT (@RT_com) July 27, 2025
BREAKING : ’10 ಅಥವಾ 12 ದಿನಗಳು’ : ಉಕ್ರೇನ್ ಕದನ ವಿರಾಮ ಒಪ್ಪಿಕೊಳ್ಳಲು ಪುಟಿನ್’ಗೆ ಟ್ರಂಪ್ ಹೊಸ ಗಡುವು
BREAKING : ’10 ಅಥವಾ 12 ದಿನಗಳು’ : ಉಕ್ರೇನ್ ಕದನ ವಿರಾಮ ಒಪ್ಪಿಕೊಳ್ಳಲು ಪುಟಿನ್’ಗೆ ಟ್ರಂಪ್ ಹೊಸ ಗಡುವು