ವಿಜಯನಗರ: ಇನ್ ಸ್ಟಾಗ್ರಾಂನಲ್ಲಿ ಆ ಯುವಕ, ವಿವಾಹಿತ ಯುವತಿಗೆ ಪರಿಚಯವಾಗಿದ್ದ. ಮೊದಲು ಆತನೇ ಮೆಸೇಜ್ ಮಾಡಿ ಆಕೆಯ ಹಿಂದೆ ಬಿದ್ದ. ಆತನ ವ್ಯಾಮೋಹಕ್ಕೆ ಒಳಗಾದಂತ ಆಕೆ ಸುಂದರ ಸಂಸಾರವಿದ್ದರೂ ಪ್ರಿಯಕರನೊಂದಿಗೆ ಸುತ್ತಾಡಿದ್ದಳು. ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಳು. ಇದಕ್ಕೆ ಪ್ರಿಯಕರ ನಿರಾಕರಿಸಿದ್ದರಿಂದ ವಿವಾಹಿತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ವಿಜಯನಗರದಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎನ್ನುವಂತ ವಿವಾಹಿತ ಮಹಿಳೆಯೊಬ್ಬರು ತುಂಗಭದ್ರಾ ನದಿಯ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದನ್ನು ದಾರಿಹೋಕರು ನೋಡಿದ್ದಾರೆ. ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಮಹಿಳೆಯ ಶವವನ್ನು ನದಿಯಿಂದ ತೆಗೆದಿದ್ದಾರೆ. ಆತ್ಮಹತ್ಯೆಗೆ ಶರಣಾದಂತ ಜಾಗದಲ್ಲಿ ಡೆತ್ ನೋಟ್ ದೊರೆತಿದೆ. ಅದರಲ್ಲಿ ನನ್ನ ಸಾವಿಗೆ ಶಿವಮೊಗ್ಗ ಜಿಲ್ಲೆಯ ಸುಗೂರು ಶಿವಮೂರ್ತಿ, ಪತ್ನಿ ಗಂಗಮ್ಮನ ಮಗ ಬಸವರಾಜ(ವಿನಯ್) ಕಾರಣ ಎಂಬುದಾಗಿ ಬರೆದಿದ್ದಾಳೆ.
ಡೆತ್ ನೋಟ್ ನಲ್ಲಿ ಏನಿದೆ.?
ಮೊದಲು ಇನ್ ಸ್ಟಾಗ್ರಾಂನಲ್ಲಿ ಮೆಸೇಜ್ ಹಾಕಿದ್ದು. ಮೆಸೇಜ್ ಹಾಕಿದ್ದ ಮೊದಲು ನಾನು ಇವನ ಲವ್ ಮಾಡೋಕೆ ಒಪ್ಪಲಿಲ್ಲ. ಒತ್ತಾಯ ಮಾಡಿ ನಾನು ಅಂಗೆ ನೋಡುತೀನಿ, ಹಿಂಗೆ ನೋಡುತ್ತೀನಿ ಅಂತ ಹೇಳಿ ನನ್ನ ಬುಟ್ಟಿಗೆ ಹಾಕಿಕೊಂಡ. ಆಗಸ್ಟ್ 2024ರಲ್ಲಿ ಲವ್ ಸ್ಟಾರ್ಟ್ ಆಯ್ತು. ಇವನು ನನ್ನ ಜೊತೇನು ಚೆನ್ನಾಗಿದ್ದು, ಬೇರೆ ಹುಡುಗಿಯರ ಜೊತೆನೂ ಮೆಸೇಜ್ ಮಾಡ್ತಿದ್ದ. ಹಾಗಾಗಿ ನಾನು ಇವನ ವಾಟ್ಸ್ ಆಪ್, ಇನ್ ಸ್ಟಾಗ್ರಾಂ, ಫೇಸ್ ಬುಕ್, ಜಿ-ಮೇಲ್ ಆಪ್ ಗಳು ಹ್ಯಾಕ್ ಮಾಡಿಕೊಂಡಿದ್ದೆ.
ಹರಿಹರ, ರಾಣೆಬೆನ್ನೂರು 12 ಟೈಮ್ ಲಾಡ್ಜ್ ಗೆ ಹೋಗಿದ್ವಿ. ಇವನು ನನ್ನನ್ನು ಮದುವೆ ಆಗ್ತೀನಿ ಯಾರನ್ನು ಆ ಹುಡುಗಿನು ನೋಡಲ್ಲ. ಮೆಸೇಜ್ ಮಾಡಲ್ಲ. ಕಾಲ್ ಮಾಡಲ್ಲ. ಮಾಡಿದ್ರೆ ನೀನು ಸಾಯಿ ಅಂತ ಹೇಳಿದ್ದ. ಮೂರು ನಾಲ್ಕು ಟೈ ಮೆಸೇಜ್ ಮಾಡಿದ್ದು ಗೊತ್ತಾಯಿತು. ಆದಕ್ಕೆ ನಾನು ಅವಾಗ ಸಾಯಬೇಕು ಅಂತ ಹೋಗಿದ್ದೆ. ಇಲ್ಲ ಇನ್ಮೇಲೆ ಮಾಡಲ್ಲ ಅಂತ ಹೇಳಿ ಜುಲೈ.7ನೇ ತಾರೀಕು ಕುರುವತಿ ಬಸವಣ್ಣ ದೇವರಿಗೆ ಹೋಗಿದ್ದೆ. ಅಲ್ಲಿ ಎಲ್ಲಾ ತರ ಆಣೆ ಹಾಕಿ, ಗಂಟೆ ಹೊಡೆದ. ಪೋನ್ ಕೂಡ ನನ್ನ ಕಡೆ ಇತ್ತು. ತ್ರಿವೇಣಿ ಅನ್ನೋ ಹುಡುಗಿನ ಬೈಕಲ್ಲಿ ಸುತ್ತಾಡಿದ್ದಾನೆ. ಇವನು ಸಂಬಂಧ ನಾನು ನನ್ನ ಗಂಡನ ಜೊತೆ ಸರಿಯಾಗಿ ಮಾತನಾಡ್ತಿರಲಿಲ್ಲ. ಮೇಲ್ಕೋತಿರಲಿಲ್ಲ. ನನಿಗೆ ತುಂಬಾ ಮೋಸ ಮಾಡಿದ್ದಾನೆ. ನನ್ನ ಮದುವೆ ಆಗ್ತೀನಿ ಅಂತ ಸುಳ್ಳು ಹೇಳಿ, ಇವಾಗ ಅವೈಡ್ ಮಾಡ್ತಿದ್ದಾನೆ. ಅದಕ್ಕೆ ಸಾಯ್ತಿದ್ದೀನಿ. ನನ್ನ ಸಾವಿಗೆ ಸುಗೂರು ಶಿವಮೂರ್ತಿ ಗಾಣಿಗ ಮಗ ಬಸವರಾಜನೇ ಕಾರಣ. ನನ್ನ ಗಂಡನ ಮನೆಯವರು ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ನಾನು ಇವನ ಜೊತೆ ಮಾತಾಡಿರುವ ರೆಕಾರ್ಡ್ ನನ್ನ ಪೋನಲ್ಲಿ ಇದ್ದಾವೆ. ನೋಡಿ. ಮತ್ತೆ ನಾವು ಲಾಡ್ಜ್ ಗೆ ಹೋದಾಗ ಪೋಟೋಸ್, ಸೆಕ್ಸ್ ಮಾಡಿದ್ದು ಕೂಡ ನನ್ನ ಪೋನ್ ನಲ್ಲಿ ಇದ್ದಾವೆ ನೋಡಿ. ನನಿಗೆ ಇವನು ನಿನ್ನ ಗಂಡನನ್ನು ಸಾಯಿಸಿ ನಿನ್ನ ಹೆಸರಿನಲ್ಲಿ ಆಸ್ತಿ ತೆಗೆದುಕೊಂಡು ಬಾ ಅಂತ ಹೇಳ್ತಿದ್ದ. ನಾನು ಇವನನ್ನು ತುಂಬಾ ಇಷ್ಟ ಪಡ್ತಿದ್ದೆ. ಇವನಿಗೂ ಕೂಡ ಮರಣ ದಂಡನೆ ಆಗಬೇಕು.
ನನ್ನ ಸಾವಿಗೆ ಕಾರಣ ಸುಗೂರು ಬಸವರಾಜ. ರೆಕಾರ್ಟ್ ಎಲ್ಲಾ ನನ್ನ ಪೋನಲ್ಲಿ ಇವೆ ನೋಡಿ.
ಈ ರೀತಿಯಾಗಿ ಡೆತ್ ನೋಟ್ ಬರೆದಿಟ್ಟು ವಿವಾಹಿತ ಮಹಿಳೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ಆತ ಮದುವೆ ಆಗೋದಕ್ಕೆ ನಿರಾಕರಿಸಿದ್ದಕ್ಕೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.