ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಭಾರೀ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಗುಡ್ಡ ಕುಸಿದಿದೆ. ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ.
ನೆಮ್ಮಾರು ಗ್ರಾಮದಿಂದ ಕೆರೆಕಟ್ಟೆವರೆಗೂ ಗುಡ್ಡ ಕುಸಿಯುತ್ತಿದ್ದು, ಎರಡು ಜೆಸಿಬಿಗಳ ಮೂಲಕ ಸಿಬ್ಬಂದಿಗಳು ಮಣ್ಣು ತೆರೆವು ಕಾರ್ಯಾಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿಯೂ ಮಳೆಯಿಂದ ಇದೇ ಸ್ಥಳದಲ್ಲೇ ಗುಡ್ಡ ಕುಸಿತವಾಗಿತ್ತು.