ಉತ್ತರಾಖಂಡದಲ್ಲಿ ಒಂದು ಕ್ರೂರ ಘಟನೆ ನಡೆದಿದೆ. ಕಾಶಿಪುರದಲ್ಲಿ ಯುವಕನೊಬ್ಬ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ.ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.
ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದ್ದು, ಹಸುವಿನ ಮಾಲೀಕ ಅಶ್ವನಿ ಕುಮಾರ್ ಪ್ರಕರಣ ದಾಖಲಿಸಿದ್ದಾರೆ.ಈ ಬಗ್ಗೆ ತನಿಖೆ ನಡೆಸಿ ಯುವಕನನ್ನು ಬಂಧಿಸಲಾಗುವುದು ಎಂದು ಇನ್ಸ್ಪೆಕ್ಟರ್ ಅಮರ್ ಚಂದ್ ಭರವಸೆ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದರಿಂದ, ಮೂಕ ಪ್ರಾಣಿಗಳನ್ನು ಸಹ ಬಿಡಲಾಗುತ್ತಿಲ್ಲ ಎಂದು ಜನರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಜನರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.