ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ರಾಬರಿ ನಡೆದಿದ್ದು, ಕೇವಲ 20 ಸೆಕೆಂಡ್ ನಲ್ಲಿ ಸಿನಿಮಯ ಶೈಲಿಯಲ್ಲಿ ಚಿನ್ನ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಅಂಗಡಿ ಮುಚ್ಚುವ ವೇಳೆ ಗನ್ ಹಿಡಿದು ಬೆದರಿಸಿ ಚಿನ್ನದಂಗಡಿ (Jewellery Shop) ದೋಚಿ ಕಳ್ಳರು ಪರಾರಿಯಾದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಚೋಹಳ್ಳಿ ಗೇಟ್ನ ರಾಮ್ ಜ್ಯುವೆಲರ್ಸ್ನಲ್ಲಿ ಘಟನೆ ನಡೆದಿದೆ.
ಗುರುವಾರ ರಾತ್ರಿ 8:30ರ ಸುಮಾರಿಗೆ ಮೂವರು ಮುಸುಕುಧಾರಿಗಳು ಗನ್ ಹಿಡಿದು ಬಂದು ಕೃತ್ಯವೆಸಗಿದ್ದಾರೆ. ಜ್ಯುವೆಲ್ಲರಿ ಮಾಲೀಕ ಕನ್ನಯ್ಯಲಾಲ್ ಅಂಗಡಿ ಕ್ಲೋಸ್ ಮಾಡಲು ಮುಂದಾದ ವೇಳೆ ಗನ್ ಹಿಡಿದು ಮೂವರು ಅಂಗಡಿಗೆ ಎಂಟ್ರಿಕೊಟ್ಟಿದ್ದಾರೆ. ಗನ್ ಹಿಡಿದು ಹೆದರಿಸಿ ಟೇಬಲ್ ಮೇಲಿದ್ದ ಚಿನ್ನ ಕದ್ದು ಪರಾರಿಯಾಗಿದ್ದಾರೆ.